ಕಾಲುವೆಗಳಿಗೆ ತುಂಗಭದ್ರಾ ಜಲಾಶಯದ ನೀರು ಒದಗಿಸಲು ಕಾಲಾವಧಿ ನಿಗದಿ
ಬೆಂಗಳೂರು, 14 ನವೆಂಬರ್ (ಹಿ.ಸ.) : ಆ್ಯಂಕರ್ : 2025-26ನೇ ಸಾಲಿನ ತುಂಗಭದ್ರಾ ಜಲಾಶಯದ ಹಿಂಗಾರು ಹಂಗಾಮಿಗೆ ಲಭ್ಯವಿರುವ ನೀರನ್ನು ಒದಗಿಸುವ ಕುರಿತು ನಿರ್ಣಯಿಸಲು ತುಂಗಭದ್ರಾ ಯೋಜನೆಯ ಮತ್ತು ವಿಜಯನಗರ ಕಾಲುವೆಗಳ 125ನೇ ನೀರಾವರಿ ಸಲಹಾ ಸಮಿತಿ ಸಭೆಯು ನವೆಂಬರ್ 14ರಂದು ಬೆಂಗಳೂರಿನ ವ
ತುಂಗಭದ್ರಾ ಜಲಾಶಯದ ನೀರು ವಿವಿಧ ಕಾಲುವೆಗಳಿಗೆ ಒದಗಿಸಲು ಕಾಲಾವಧಿ ನಿಗದಿ


ತುಂಗಭದ್ರಾ ಜಲಾಶಯದ ನೀರು ವಿವಿಧ ಕಾಲುವೆಗಳಿಗೆ ಒದಗಿಸಲು ಕಾಲಾವಧಿ ನಿಗದಿ


ತುಂಗಭದ್ರಾ ಜಲಾಶಯದ ನೀರು ವಿವಿಧ ಕಾಲುವೆಗಳಿಗೆ ಒದಗಿಸಲು ಕಾಲಾವಧಿ ನಿಗದಿ


ತುಂಗಭದ್ರಾ ಜಲಾಶಯದ ನೀರು ವಿವಿಧ ಕಾಲುವೆಗಳಿಗೆ ಒದಗಿಸಲು ಕಾಲಾವಧಿ ನಿಗದಿ


ಬೆಂಗಳೂರು, 14 ನವೆಂಬರ್ (ಹಿ.ಸ.) :

ಆ್ಯಂಕರ್ : 2025-26ನೇ ಸಾಲಿನ ತುಂಗಭದ್ರಾ ಜಲಾಶಯದ ಹಿಂಗಾರು ಹಂಗಾಮಿಗೆ ಲಭ್ಯವಿರುವ ನೀರನ್ನು ಒದಗಿಸುವ ಕುರಿತು ನಿರ್ಣಯಿಸಲು ತುಂಗಭದ್ರಾ ಯೋಜನೆಯ ಮತ್ತು ವಿಜಯನಗರ ಕಾಲುವೆಗಳ 125ನೇ ನೀರಾವರಿ ಸಲಹಾ ಸಮಿತಿ ಸಭೆಯು ನವೆಂಬರ್ 14ರಂದು ಬೆಂಗಳೂರಿನ ವಿಧಾನಸೌಧದ 3ನೇ ಮಹಡಿಯ ಸಮಿತಿ ಕೊಠಡಿ ಸಂಖ್ಯೆ:313ರಲ್ಲಿ ನಡೆಸಲಾಯಿತು.

ಉಪ ಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್ ಅವರ ಅಧ್ಯಕ್ಷತೆಯಲ್ಲಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರು ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ನೀರಾವರಿ ಸಲಹಾ ಸಮಿತಿಯ ಅಧ್ಯಕ್ಷರಾದ ಶಿವರಾಜ ಎಸ್. ತಂಗಡಗಿ, ಸಚಿವರಾದ ಎನ್ ಎಸ್ ಬೋಸರಾಜು, ಸಂಸದರು, ಶಾಸಕರು, ವಿಧಾನ ಪರಿಷತ್ ಸದಸ್ಯರು, ಪ್ರಾದೇಶಿಕ ಆಯುಕ್ತರು, ಜಿಲ್ಲಾಧಿಕಾರಿಗಳು ಹಾಗೂ ನೀರಾವರಿ ಇಲಾಖೆ ಅಧಿಕಾರಿಗಳು, ಕೃಷಿ ಅಧಿಕಾರಿಗಳೊಂದಿಗೆ ವಿಸ್ತ್ರತವಾಗಿ ಚರ್ಚಿಸಿ ನೀರು ಹರಿಸಲು ಕಾಲಾವಧಿ ನಿಗದಿಪಡಿಸಲಾಗಿದೆ.

ತುಂಗಭದ್ರಾ ಜಲಾಶಯದ ಮಟ್ಟ 1613.00 ಅಡಿ ತಲುಪಿದ ನಂತರ ಕ್ರಷ್ಟ ಗೇಟ್‌ಗಳನ್ನು ಅಳವಡಿಸುವ ಕಾರ್ಯವನ್ನು ಕೈಗೊಂಡಿರುವುದರಿAದ ಹಿಂಗಾರು ಹಂಗಾಮಿಗೆ ನೀರನ್ನು ಒದಗಿಸಲು ಸಾಧ್ಯವಾಗುವುದಿಲ್ಲ. ಮುಂಗಾರು ಹಂಗಾಮಿನಲ್ಲಿ ಬೆಳೆದು ನಿಂತ ಬೆಳೆಗಳಿಗಾಗಿ ಹಾಗೂ ಬೇಸಿಗೆ ಸಮಯದಲ್ಲಿ ಕುಡಿಯುವ ನೀರಿಗಾಗಿ ಕೆರೆಕಟ್ಟೆ ತುಂಬಿಸುವುದು ಹಾಗೂ ಇತರೆ ಉಪಯೋಗಕ್ಕಾಗಿ ನೀರನ್ನು ಕಾಯ್ದಿರಿಸಿ ನೀರು ಹರಿಸಲು ನಿರ್ಣಯಿಸಲಾಗಿದೆ.

ತುಂಗಭದ್ರಾ ಎಂಡದAಡೆ ಮುಖ್ಯ ಕಾಲುವೆಗೆ ದಿನಾಂಕ 01-12-2025ರಿಂದ 10-01-2026ರವರೆಗೆ 3000 ಕ್ಯೂಸೆಕ್ಸ್ನಂತೆ ಬೆಳೆದು ನಿಂತ ಬೆಳೆಗಳಿಗೆ ಮಾತ್ರ ನೀರನ್ನು ಒದಗಿಸಲು ಕಾಲಾವಧಿ ನಿಗದಿ ಮಾಡಲಾಗಿದೆ.

ಎಡದಂಡೆ ವಿಜಯನಗರ ಕಾಲುವೆಗೆ ದಿನಾಂಕ 01-01-2026ರಿಂದ 10-05-2026ರವರೆಗೆ 150 ಕ್ಯೂಸೆಕ್ಸ್ನಂತೆ ವಿತರಣಾ ಕಾಲುವೆ 1ರಿಂದ 11 ರವರೆಗೆ ನೀರನ್ನು ಒದಗಿಸಲು ಕಾಲಾವಧಿ ನಿಗದಿ ಮಾಡಲಾಗಿದೆ.

ತುಂಗಭದ್ರಾ ಬಲದಂಡೆ ಮೇಲ್ಮಟ್ಟದ ಕಾಲುವೆಗೆ 01-12-2025ರಿಂದ 10-01-2026 ರವರೆಗೆ 1300 ಕ್ಯೂಸೆಕ್ಸ್ನಂತೆ ಬೆಳೆದು ನಿಂತ ಬೆಳೆಗಳಿಗೆ ನೀರು ಒದಗಿಸಲು ಕಾಲಾವಧಿ ನಿಗದಿ ಮಾಡಲಾಗಿದೆ.

ತುಂಗಭದ್ರಾ ಬಲದಂಡೆ ಕೆಳಮಟ್ಟದ ಕಾಲುವೆಗಳಿಗೆ 01-12-2025ರಿಂದ 10-01-2026 ರವರೆಗೆ 750 ಕ್ಯೂಸೆಕ್ಸ್ನಂತೆ ಬೆಳೆದು ನಿಂತ ಬೆಳೆಗಳಿಗೆ ಮಾತ್ರ ನೀರನ್ನು ಒದಗಿಸಲು ಕಾಲಾವಧಿ ನಿಗದಿ ಮಾಡಲಾಗಿದೆ.

ರಾಯ ಬಸವಣ್ಣ ಕಾಲುವೆಗೆ ದಿನಾಂಕ 01-01-2026ರಿಂದ 31-05-2026 ರವರೆಗೆ ಸರಾಸರಿ 250 ಕ್ಯೂಸೆಕ್ಸ್ ನಂತೆ ಅಥವಾ ಈ ಕಾಲುವೆಯಡಿ ನೀರು ಲಭ್ಯತೆಯು ಇರುವವರೆಗೆ ಮಾತ್ರ ಇದರಲ್ಲಿ ಯಾವುದು ಮೊದಲು ಅದು ಅನ್ವಯಿಸುತ್ತದೆ.

ತುಂಗಭದ್ರಾ ಎಡದಂಡೆ ಮೇಲ್ಮಟ್ಟದ ಕಾಲುವೆಗೆ ದಿನಾಂಕ:01.12.2025 ರಿಂದ 25 ಕ್ಯೂಸೆಕ್ಸ್ನಂತೆ ಅಥವಾ ಜಲಾಶಯದ ನೀರಿನ ಮಟ್ಟ 1585 ಅಡಿಗಳವರೆಗೆ ಇದರಲ್ಲಿ ಯಾವುದು ಮೊದಲು ಅದು ಅನ್ವಯಿಸುತ್ತದೆ.

ನದಿ ಪೂರಕ ಪ್ರದೇಶದಲ್ಲಿ ಸುಮಾರು 150 ಕ್ಯೂಸೆಕ್ಸ್ನಂತೆ ನದಿ ಪೂರಕ ಕಾರ್ಖಾನೆ ಒಳಗೊಂಡ0ತೆ ನೀರು ಒದಗಿಸಲು ಕಾಲಾವಧಿ ನಿಗದಿ ಮಾಡಲಾಗಿದೆ ಎಂದು ನೀರಾವರಿ ಸಲಹಾ ಸಮಿತಿಯ ಅಧ್ಯಕ್ಷರಾದ ಶಿವರಾಜ ಎಸ್. ತಂಗಡಗಿ ಅವರು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande