ವೃಕ್ಷಮಾತೆ ಪದ್ಮಶ್ರೀ ಸಾಲುಮರದ ತಿಮ್ಮಕ್ಕ ನಿಧನಕ್ಕೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಂತಾಪ
ಬೆಂಗಳೂರು, 14 ನವೆಂಬರ್ (ಹಿ.ಸ.) : ಆ್ಯಂಕರ್ : ವೃಕ್ಷಮಾತೆ ಎಂದು ರಾಷ್ಟ್ರವ್ಯಾಪಕವಾಗಿ ಖ್ಯಾತಿ ಪಡೆದಿದ್ದ ಪದ್ಮಶ್ರೀ ಪುರಸ್ಕೃತ ಸಾಲುಮರದ ತಿಮ್ಮಕ್ಕ (114) ಅವರ ನಿಧನಕ್ಕೆ ರಾಷ್ಟ್ರೀಯ ಸ್ವಯಂಸೇವಕ ಸಂಘ ಸಂತಾಪ ಸೂಚಿಸಿದೆ. ತಿಮ್ಮಕ್ಕ ಅವರು ಗಿಡಗಳನ್ನು ಮಕ್ಕಳಂತೆ ಸಾಕಿ 8,000ಕ್ಕೂ ಅಧಿಕ ಗಿಡಗಳನ್ನು
Rss condolences


ಬೆಂಗಳೂರು, 14 ನವೆಂಬರ್ (ಹಿ.ಸ.) :

ಆ್ಯಂಕರ್ : ವೃಕ್ಷಮಾತೆ ಎಂದು ರಾಷ್ಟ್ರವ್ಯಾಪಕವಾಗಿ ಖ್ಯಾತಿ ಪಡೆದಿದ್ದ ಪದ್ಮಶ್ರೀ ಪುರಸ್ಕೃತ ಸಾಲುಮರದ ತಿಮ್ಮಕ್ಕ (114) ಅವರ ನಿಧನಕ್ಕೆ ರಾಷ್ಟ್ರೀಯ ಸ್ವಯಂಸೇವಕ ಸಂಘ ಸಂತಾಪ ಸೂಚಿಸಿದೆ.

ತಿಮ್ಮಕ್ಕ ಅವರು ಗಿಡಗಳನ್ನು ಮಕ್ಕಳಂತೆ ಸಾಕಿ 8,000ಕ್ಕೂ ಅಧಿಕ ಗಿಡಗಳನ್ನು ಪೋಷಿಸಿದ ಪರಿಸರ ಸೇವೆಗೆ ಹೆಸರಾಗಿದ್ದರು. ಹುಲಿಕಲ್–ಕುದೂರು ರಾಜ್ಯ ಹೆದ್ದಾರಿಯ 4.5 ಕಿಮೀ ಉದ್ದಕ್ಕೂ 380ಕ್ಕೂ ಹೆಚ್ಚು ಆಲದ ಮರಗಳನ್ನು ನೆಟ್ಟು ಬೆಳೆಸಿದ ಅವರ ಪರಿಶ್ರಮ ದೇಶದಾದ್ಯಂತ ಮಾದರಿಯಾಗಿದೆ. ಮಳೆ ನೀರಿನ ಸಂರಕ್ಷಣೆ, ಅರಣ್ಯೀಕರಣ, ಪರಿಸರ ಜಾಗೃತಿ ಅಭಿಯಾನಗಳಲ್ಲಿ ತಿಮ್ಮಕ್ಕನವರ ನಿಸ್ವಾರ್ಥ ಸೇವೆ ಅಪಾರ.

ಅವರ ಅಗಲಿಕೆ ದೇಶದ ಪರಿಸರ ಚಳುವಳಿಗೆ ದೊಡ್ಡ ನಷ್ಟವಾಗಿದೆ ಎಂದು ಆರ್‌ಎಸ್‌ಎಸ್ ಶ್ರದ್ಧಾಂಜಲಿ ಅರ್ಪಿಸಿದೆ. “ತಿಮ್ಮಕ್ಕನವರ ಜೀವನಪ್ರೀತಿ, ಶ್ರಮ, ಪರಿಸರದ ಪ್ರತಿಯೊಬ್ಬನ ಕರ್ತವ್ಯವನ್ನು ನೆನಪಿಸುವ ಕಾರ್ಯಗಳು ಮುಂದಿನ ತಲೆಮಾರುಗಳಿಗೆ ಮಾದರಿಯಾಗಿವೆ ಎಂದು ಸಂಘದ ಪ್ರಕಟಣೆಯಲ್ಲಿ ಹೇಳಲಾಗಿದೆ.

ಸಾಲುಮರದ ತಿಮ್ಮಕ್ಕನವರ ನಿಧನಕ್ಕೆ ಸಂಘದ ಪರವಾಗಿ ಸಂತಾಪ ವ್ಯಕ್ತಪಡಿಸಿರುವ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಹಾಗೂ ಕ್ಷೇತ್ರೀಯ ಸಂಘಚಾಲಕ ಡಾ. ಪಿ. ವಾಮನ್ ಶೆಣೈ ಅವರು, ಕುಟುಂಬದವರಿಗೆ ಮತ್ತು ಪರಿಸರ ಪ್ರೇಮಿಗಳಿಗೆ ಭಗವಂತನು ಶಕ್ತಿಯನ್ನು ನೀಡಲಿ ಮತ್ತು ಅಗಲಿದ ಆತ್ಮಕ್ಕೆ ಸದ್ಗತಿ ಸಿಗಲಿ ಎಂದು ಪ್ರಾರ್ಥಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande