ರಾಯಚೂರು : ಬ್ಯಾನರ್ ಅಳವಡಿಸಲು ಪಾಲಿಕೆಯಿಂದ ಅನುಮತಿ ಕಡ್ಡಾಯ
ರಾಯಚೂರು, 14 ನವೆಂಬರ್ (ಹಿ.ಸ.) : ಆ್ಯಂಕರ್ : ರಾಯಚೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ವೃತ್ತಗಳು, ರಸ್ತೆಯ ಪಕ್ಕದಲ್ಲಿ, ರಸ್ತೆಯ ಡಿವೈಡರ್ ಮೇಲೆ ಬ್ಯಾನರ್‌ಗಳನ್ನು ಪಾಲಿಕೆಯ ಅನುಮತಿಯನ್ನು ಪಡೆಯದೇ ಅನಧಿಕೃತವಾಗಿ ಅಳವಡಿಸಿರುವುದು ಕಂಡು ಬ0ದಿದ್ದು, ಈ ಬ್ಯಾನರ್‌ಗಳನ್ನು ಅಳವಡ
ರಾಯಚೂರು : ಬ್ಯಾನರ್ ಅಳವಡಿಸಲು ಪಾಲಿಕೆಯಿಂದ ಅನುಮತಿ ಕಡ್ಡಾಯ


ರಾಯಚೂರು, 14 ನವೆಂಬರ್ (ಹಿ.ಸ.) :

ಆ್ಯಂಕರ್ : ರಾಯಚೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ವೃತ್ತಗಳು, ರಸ್ತೆಯ ಪಕ್ಕದಲ್ಲಿ, ರಸ್ತೆಯ ಡಿವೈಡರ್ ಮೇಲೆ ಬ್ಯಾನರ್‌ಗಳನ್ನು ಪಾಲಿಕೆಯ ಅನುಮತಿಯನ್ನು ಪಡೆಯದೇ ಅನಧಿಕೃತವಾಗಿ ಅಳವಡಿಸಿರುವುದು ಕಂಡು ಬ0ದಿದ್ದು, ಈ ಬ್ಯಾನರ್‌ಗಳನ್ನು ಅಳವಡಿಸಲು ಪಾಲಿಕೆಯ ಅನುಮತಿಯನ್ನು ಪಡೆದುಕೊಳ್ಳಲು ಸೂಚಿಸಿಲಾಗಿದೆ.

ಒಂದುವೇಳೆ ಅನುಮತಿ ಪಡೆಯದೇ ಬ್ಯಾನರ್ ಅಳವಡಿಸಿದ್ದಲ್ಲಿ ಅವುಗಳನ್ನು ತೆರವುಗೊಳಿಸಲಾಗುವುದು ಎಂದು ರಾಯಚೂರು ಮಹಾನಗರ ಪಾಲಿಕೆಯ ಆಯುಕ್ತರು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande