ಭೀಕರ ಪ್ರವಾಹ, ಮನೆಗಳು ಸರ್ವನಾಶ,ಮಕ್ಕಳು ಸೇರಿ 16 ಜನರು ಸಾವು
ಬಡಾಕ್ಷನ್, 27 ಮೇ (ಹಿ.ಸ): ಆ್ಯಂಕರ್:ತಾಲಿಬಾನ್ ಗಳ ಅಟ್ಟಹಾಸದಿಂದ ನಲುಗಿ ಹೋಗಿದ್ದ ಅಪ್ಘಾನಿಸ್ತಾನಕ್ಕೆ ಸಂಕಷ್
ಭೀಕರ ಪ್ರವಾಹ, ಮನೆಗಳು ಸರ್ವನಾಶ.. ಮಕ್ಕಳು ಸೇರಿ 16 ಜನರು ಸಾವು


ಬಡಾಕ್ಷನ್, 27 ಮೇ (ಹಿ.ಸ):

ಆ್ಯಂಕರ್:ತಾಲಿಬಾನ್ ಗಳ ಅಟ್ಟಹಾಸದಿಂದ ನಲುಗಿ ಹೋಗಿದ್ದ ಅಪ್ಘಾನಿಸ್ತಾನಕ್ಕೆ ಸಂಕಷ್ಟಗಳ ಮೇಲೆ ಸಂಕಷ್ಟ ಎದುರಾಗುತ್ತಿದೆ. ಬಾಗ್ಲಾನ್ ಮತ್ತು ಬಡಾಕ್ಷನ್ ಪ್ರಾಂತ್ಯಗಳಲ್ಲಿ ಭೀಕರ ಪ್ರವಾಹ ಬಂದಿದ್ದು, ಮಕ್ಕಳು ಸೇರಿ ಸುಮಾರು 16 ಜನರು ಪ್ರಾಣ ಕಳೆದುಕೊಂಡಿದ್ದಾರೆ.

ದಾಂಡ್-ಎ-ಫೋರಿ, ದೋಷಿ, ಫುಲ್-ಎ-ಖುಮ್ರಿ ನಗರ ಮತ್ತು ಕೆಲವು ಪ್ರಾಂತ್ಯಗಳು ಪ್ರವಾಹದಿಂದ ನಲುಗಿವೆ. ಮಕ್ಕಳು, ಪುರುಷರು, ಮಹಿಳೆಯರು ಪ್ರವಾಹದಿಂದಾಗಿ ಸಾವನ್ನಪ್ಪಿದ್ದಾರೆ. 300ಕ್ಕೂ ಹೆಚ್ಚು ಮನೆಗಳೂ ನಾಶವಾಗಿದೆ.

ಸಂತ್ರಸ್ತನೋರ್ವ ‘‘ಪ್ರವಾಹದಲ್ಲಿ ನನ್ನ ಕುಟುಂಬ 9 ಜನರು ಸಾವನ್ನಪ್ಪಿದ್ದಾರೆ. ಸದ್ಯ 2 ಶವಗಳು ಮಾತ್ರ ಸಿಕ್ಕಿವೆ. ಉಳಿದವರು ಕಾಣೆಯಾಗಿದ್ದಾರೆ’’ ಎಂದು ಹೇಳಿದ್ದಾರೆ.

ಮತ್ತೋರ್ವ ವ್ಯಕ್ತಿ ‘‘ ನನ್ನ ವಿನಂತಿ ಏನೆಂದರೆ, ಪ್ರವಾಹದಿಂದ ಸಂಕಷ್ಟ ಅನುಭವಿಸುತ್ತಿದ್ದೇವೆ. ಅಪ್ಘಾನಿಸ್ತಾನದ ಯಾವುದೇ ಭಾಗಕ್ಕೆ ಏನೇ ಸೌಕರ್ಯ ಮಂಜೂರು ಮಾಡಿದರು ನಮ್ಮನ್ನು ಮರೆಯಬೇಡಿ’’ ಎಂದು ಹೇಳಿದ್ದಾರೆ.

ಕಳೆದ ಒಂದು ವಾರದಿಂದ ಭೀಕರ ಪ್ರವಾಹವನ್ನು ಅಪ್ಘಾನಿಸ್ತಾನ ಎದುರಿಸುತ್ತಿದೆ. ಸುಮಾರು 300ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ನೂರಾರು ವಸಗಿ ಗೃಹಗಳು ನಾಶವಾಗಿದೆ. ಸಾವಿರಾರು ಕೃಷಿ ಭೂಮಿ ಕೂಡ ನಾಶವಾಗಿದೆ.

ಹಿಂದೂಸ್ತಾನ್ ಸಮಾಚಾರ್


 rajesh pande