ಭಾರತೀಯ ಯುದ್ಧ ನೌಕೆಗಳು ಫಿಲಿಪ್ಪೀನ್ಸ್ ಗೆ ಭೇಟಿ
ನವದೆಹಲಿ, 25 ಮೇ (ಹಿ.ಸ): ಆ್ಯಂಕರ್:ದಕ್ಷಿಣ ಚೀನಾ ಸಮುದ್ರಕ್ಕೆ ಭಾರತೀಯ ನೌಕಾಪಡೆಯ ಕಾರ್ಯಾಚರಣೆ ನಿಯೋಜನೆಯ ಭಾ
ಭಾರತೀಯ ಯುದ್ಧ ನೌಕೆಗಳು ಫಿಲಿಪ್ಪೀನ್ಸ್ ಗೆ ಭೇಟಿ


ನವದೆಹಲಿ, 25 ಮೇ (ಹಿ.ಸ):

ಆ್ಯಂಕರ್:ದಕ್ಷಿಣ ಚೀನಾ ಸಮುದ್ರಕ್ಕೆ ಭಾರತೀಯ ನೌಕಾಪಡೆಯ ಕಾರ್ಯಾಚರಣೆ ನಿಯೋಜನೆಯ ಭಾಗವಾಗಿ, ಭಾರತದ ಐ ಎನ್ ಎಸ್ ಶಕ್ತಿ ಮತ್ತು ಐ ಎನ್ ಎಸ್ ಕಿಲ್ಟನ್ ಯುದ್ಧ ನೌಕೆಗಳು ಫಿಲಿಪ್ಪೀನ್ಸ್ ಗೆ ಭೇಟಿ ನೀಡಿದ್ದು, ಯಶಸ್ವಿಯಾಗಿ ತಮ್ಮ ಪರ್ಯಟನೆ ಪೂರ್ಣಗೊಳಿಸಿವೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.

ಫಿಲಿಪ್ಪೀನ್ಸ್ ಜತೆಗಿನ ಭೇಟಿಯು, ಉಭಯ ದೇಶಗಳ ಬಾಂಧವ್ಯ ಮತ್ತು ದ್ವಿಪಕ್ಷೀಯ ಪಾಲುದಾರಿಕೆಯನ್ನು ಇನ್ನಷ್ಟು ಬಲಪಡಿಸುವ ಬದ್ಧತೆಯನ್ನು ಪ್ರದರ್ಶಿಸಿದೆ ಎಂದು ಹೇಳಿದೆ. ಭೇಟಿ ವೇಳೆ, ಉಭಯ ದೇಶಗಳ ನೌಕಾಪಡೆಗಳ ನಡುವೆ ಸಹಯೋಗ ಹೆಚ್ಚಿಸುವ ಬಗ್ಗೆ, ಪರಸ್ಪರ ಹಿತಾಸಕ್ತಿ, ಪ್ರಾದೇಶಿಕ ಮತ್ತು ಜಾಗತಿಕ ಭದ್ರತಾ ಪರಿಸ್ಥಿತಿಗಳ ಕುರಿತು ಚರ್ಚೆ ನಡೆಸಲಾಯಿತು. ಭಾರತ-ಫಿಲಿಪ್ಪೀನ್ಸ್ ನೌಕಾಪಡೆಗಳ ಸಹಕಾರ ಬಲವರ್ಧನೆಗೆ ಈ ಭೇಟಿ ಅವಕಾಶ ಒದಗಿಸಿತ್ತು ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ. ಪೂರ್ವ ಪ್ರದೇಶಗಳಿಗೆ ಆದ್ಯತೆ ನೀಡುವ ಭಾರತದ ನಿಲುವು ಈ ಮೂಲಕ ಪ್ರಕಟವಾಗಿದೆ ಹಾಗೂ ಸಾಗರ ನೀತಿಗೆ ಅನುಗುಣವಾಗಿ ಪ್ರಾದೇಶಿಕ ಶಾಂತಿ ಮತ್ತೂ ಸ್ಥಿರತೆ ಕಾಪಾಡಲು ಭಾರತ ಬದ್ಧತೆ ಪ್ರದರ್ಶಿಸಿದೆ ಎಂದು ಸಚಿವಾಲಯ ಹೇಳಿದೆ.

ಹಿಂದೂಸ್ತಾನ್ ಸಮಾಚಾರ್


 rajesh pande