ಗುರುತು ಕೇವಲ ಶಾಹಿಯಲ್ಲ. ಪ್ರಜಾಪ್ರಭುತ್ವದ ಚಿಹ್ನೆ
ಮೈಸೂರು, 8 ಏಪ್ರಿಲ್ (ಹಿ.ಸ):ಆ್ಯಂಕರ್ :ಚುನಾವಣೆಗಳಲ್ಲಿ ಮತದಾನ ಮಾಡಿದ ಕೂಡಲೇ ಉತ್ಸಾಹಿ ಮತದಾರ ಅಳಿಸಲಾಗದ ಶಾಹಿಯ ಗುರ
್ೇನೇನೇ


ಮೈಸೂರು, 8 ಏಪ್ರಿಲ್ (ಹಿ.ಸ):ಆ್ಯಂಕರ್ :ಚುನಾವಣೆಗಳಲ್ಲಿ ಮತದಾನ ಮಾಡಿದ ಕೂಡಲೇ ಉತ್ಸಾಹಿ ಮತದಾರ ಅಳಿಸಲಾಗದ ಶಾಹಿಯ ಗುರುತಿನೊಂದಿಗೆ ತೋರುಬೆರಳನ್ನು ಪ್ರದರ್ಶಿಸುವುದು - ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಚಿತ್ರ ಹಾಕಿಕೊಳ್ಳುವುದು ಹೆಮ್ಮೆಯ ಸಂಗತಿ.

ಪ್ರಜಾತಂತ್ರದ ಹಕ್ಕು ಮತ್ತು ಕರ್ತವ್ಯಗಳಲ್ಲಿ ಭಾಗಿಯಾಗಿರುವುದನ್ನು ತೋರಿಸುವ ಈ ಚಿಹ್ನೆ ಚುನಾವಣಾ ಪ್ರಕ್ರಿಯೆಯ ಸಮಗ್ರತೆಯನ್ನು ಖಾತರಿಪಡಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ. ಏಳು ದಶಕಗಳ ಹಿಂದೆ ಭಾರತದಲ್ಲಿ ಚುನಾವಣಾ ಪದ್ಧತಿಯನ್ನು ಆರಂಭಿಸಿದಾಗ ಅನೇಕ ಸವಾಲುಗಳಿದ್ದವು. ಒಮ್ಮೆ ಮತದಾನ ಮಾಡಿದ ಕೆಲವು ವ್ಯಕ್ತಿಗಳು ಮತ್ತೊಮ್ಮೆ ಮತದಾನ ಮಾಡಲು ಯತ್ನಿಸಿದ ಘಟನೆಗಳು ಬೆಳಕಿಗೆ ಬಂದವು. ಚುನಾವಣಾ ಆಯೋಗಕ್ಕೆ ಇವು ಒಂದು ರೀತಿಯ ಸವಾಲೆನಿಸಿತ್ತು. ಚುನಾವಣಾ ಆಯೋಗ, ಕೇಂದ್ರ ಕಾನೂನು ಸಚಿವಾಲಯ, ರಾಷ್ಟ್ರೀಯ ಭೌತಿಕ ಪ್ರಯೋಗಾಲಯ ಮತ್ತು ರಾಷ್ಟ್ರೀಯ ಸಂಶೋಧನಾ ಅಭಿವೃದ್ಧಿ ನಿಗಮಗಳ ಸಹಯೋಗದೊಂದಿಗೆ ಒಂದು ಪರಿಹಾರೋಪಾಯ ಕಂಡುಕೊಂಡಿತು. ಇದರಂತೆ ಕರ್ನಾಟಕದಲ್ಲಿರುವ ಸ್ವಾತಂತ್ರ್ಯ ಪೂರ್ವದಲ್ಲೇ ಸ್ಥಾಪಿತವಾದ ಮೈಸೂರು ಪೇಂಟ್ಸ್ ಮತ್ತು ವಾರ್ನಿಶಸ್ ಲಿಮಿಟೆಡ್ ಸಾರ್ವಜನಿಕ ಸೌಮ್ಯದ ಕಂಪನಿಗೆ ಮತದಾನದ ಅಳಿಸಲಾಗದ ಶಾಹಿ ತಯಾರಿಸುವ ಜವಾಬ್ದಾರಿಯನ್ನು ವಹಿಸಲಾಯಿತು. ಆರಂಭದಲ್ಲಿ ಈ ಶಾಹಿಯನ್ನು ಲೋಕಸಭೆ ಮತ್ತು ವಿಧಾನಸಭೆ ಮತದಾನಗಳಿಗೆ ಮಾತ್ರ ಬಳಸಲಾಗುತ್ತಿತ್ತು.

ಕಾಲ ಕಳೆದಂತೆ ಇತರ ಮತದಾನಗಳಿಗೂ ಬಳಸಲಾಯಿತು. ಈ ಅಳಿಸಲಾಗದ ಶಾಹಿ ಅತ್ಯುನ್ನತ ಗುಣಮಟ್ಟದ್ದಾಗಿದ್ದು, ಹಚ್ಚಿದ ೪೦ ಸೆಕೆಂಡ್ ಗಳೊಳಗೆ ಒಣಗಿ ಹೋಗುತ್ತದೆ. ಕೇವಲ ೧ ಸೆಕೆಂಡ್ ಸ್ಪರ್ಶಿಸಿದರೂ ಅದು ಚಿಹ್ನೆಯಾಗಿಯೇ ಉಳಿದಿರುತ್ತದೆ. ಈ ಅಳಿಸಲಾಗದ ಶಾಹಿಯಲ್ಲಿ ಸಿಲ್ವರ್ ನೈಟ್ರೇಟ್ ಶೇಕಡ ೭ ರಿಂದ ೨೫ರ ಸಾಂಧ್ರದಲ್ಲಿ ಇರುತ್ತದೆ ಎನ್ನುವುದು ಮೈಸೂರು ಪೇಂಟ್ಸ್ ಮತ್ತು ವಾರ್ನಿಶಸ್ ಲಿಮಿಟೆಡ್ನ ಹೇಳಿಕೆಯಾಗಿದೆ. ಈ ಗುರುತು ಕೇವಲ ಶಾಹಿಯಲ್ಲ. ಪ್ರಜಾಪ್ರಭುತ್ವದ ಚಿಹ್ನೆ ಹಾಗೂ ನ್ಯಾಯಯುತ ಚುನಾವಣೆಯ ಪ್ರತೀಕ.

ಹಿಂದೂಸ್ತಾನ್ ಸಮಾಚಾರ್


 rajesh pande