ಜ್ಯೋತಿ ಬಾ ಫುಲೆ ಅವರು ಹುಟ್ಟಿದ ದಿನ
ಇಂದು ಜ್ಯೋತಿ ಬಾ ಫುಲೆ ಅವರು ಹುಟ್ಟಿದ ದಿನ. ಈ ಹಿನ್ನೆಲೆಯಲ್ಲಿ ಫುಲೆ ದಂಪತಿ ಕುರಿತ ವಿಪ್ಲವ ಅವರ ಬರಹ ನಿಮ್ಮ ಓದಿಗೆ. ಇ
ಜ್ಯೋತಿ ಬಾ ಫುಲೆ ಅವರು ಹುಟ್ಟಿದ ದಿನ


ಇಂದು ಜ್ಯೋತಿ ಬಾ ಫುಲೆ ಅವರು ಹುಟ್ಟಿದ ದಿನ. ಈ ಹಿನ್ನೆಲೆಯಲ್ಲಿ ಫುಲೆ ದಂಪತಿ ಕುರಿತ ವಿಪ್ಲವ ಅವರ ಬರಹ ನಿಮ್ಮ ಓದಿಗೆ.

ಇವತ್ತು ಭಾರತದ ಸಮಸ್ತ ನಾಗರೀಕರೂ ನೆನಪಿನಲ್ಲಿ ಇಡಬೇಕಾದ ದಿನ. ಅದರಲ್ಲೂ ಎಲ್ಲಾ ಮಹಿಳೆಯರೂ ಸ್ಮರಿಸಬೇಕಾದ ಸುದಿನ. ಈ ದೇಶ ಕಂಡ ಮಹಾನ್ ತ್ಯಾಗಜೀವಿ ಜ್ಯೋತಿ ರಾವ್ ಫುಲೆ ಅವರು ಹುಟ್ಟಿದ ದಿನ. ಜ್ಯೋತಿ ಬಾ ಅವರ ಹುಟ್ಟು ಆಧುನಿಕ ಭಾರತದ ಸಾಮಾಜಿಕ ಚಳವಳಿಗೆ ನಿಜವಾದ ನಾಯಕನನ್ನು ಕೊಟ್ಟಿತು.

ಇವತ್ತಿಗೂ ನಮ್ಮ ಸಾಮಾಜಿಕ ವ್ಯವಸ್ಥೆ ಹೇಗಿದೆ ಎಂದರೆ ಹೆಣ್ಣು ಮದುವೆಯವರೆಗೆ ಅಷ್ಟೊ ಇಷ್ಟೊ ಓದಿಕೊಂಡಿರಬೇಕು ನಂತರ ಮನೆಯಲ್ಲಿ ಅಡಿಗೆ ಬೇಯಿಸಿಕೊಂಡು, ಮಕ್ಕಳನ್ನು ಆಡಿಸಿಕೊಂಡು ಬಿದ್ದಿರಬೇಕು. ಮದುವೆಗೆ ಮುಂಚೆ ಮದುಮಗಳು ತನ್ನ ಗಂಡನಾಗುವವನನ್ನು ಕೇಳಿಕೊಳ್ಳುವ ಮಾತೆಂದರೆ ಮದುವೆಯ ನಂತರ ನನ್ನನ್ನು ಓದಿಸುತ್ತೀರಾ? ಎಂದು. ಆಗ ಅವನು ಆಯ್ತು ಬಿಡು ಎಂದಿರುತ್ತಾನೆ, ಆದರೆ ಗಂಡನ ಮನೆಯವರು ಅವಳಿಗ್ಯಾಕೋ ಓದು, ನಮಗೇನು ಕೊರತೆ ಇದೆ ಹೇಳು. ಮನೆಯಲ್ಲಿಯೇ ಬಿದ್ದಿರಲಿ ಬಿಡು ಎಂದರೆ ಮುಗಿಯಿತು.

ಆದರೆ ಜ್ಯೋತಿ ಬಾ ತಾನು ಮದುವೆಯಾದ ಅನಕ್ಷರಸ್ಥ ಬಾಲೆಯನ್ನು ಓದಿಸಿ ದೊಡ್ಡ ವಿದ್ಯಾವಂತೆ ಮಾಡಿದ್ದಲ್ಲದೇ ಭಾರತ ದೇಶದ ಮೊದಲ ಮಹಿಳಾ ಶಿಕ್ಷಕಿಯಾಗಿ, ಕವಯತ್ರಿಯಾಗಿ, ಬುದ್ಧಿಜೀವಿಯಾಗಿ, ಮಾನವತಾವಾದಿಯನ್ನಾಗಿ ಮಾಡುವಲ್ಲಿ ಯಶಸ್ವಿಯಾದರು. ಮಾತೆ ಸಾವಿತ್ರಿ ಅವರೂ ಸಹ ಗಂಡನ ಸಾಮಾಜಿಕ ಕಾಳಜಿಯನ್ನು ತನ್ನ ಉಸಿರಾಗಿ ಸ್ವೀಕರಿಸಿದರು. ಕೇವಲ ಒಂಬತ್ತು ವರ್ಷಗಳಲ್ಲಿ ಈ ಅದ್ಭುತ ಸಾಧನೆ ಮಾಡಿದರು. 1848ರ ಜನವರಿ 1ರಂದು ದೇಶದ ಇತಿಹಾಸದಲ್ಲಿಯೇ ಮೊದಲ 'ಹೆಣ್ಣುಮಕ್ಕಳ ಶಾಲೆ'ಯನ್ನು ಪ್ರಾರಂಭಿಸಿದರು. ಈ ಕೆಲಸಕ್ಕೆ ಮಡಿವಂತ ಸಮಾಜ ಸಾಮಾಜಿಕ ಬಹಿಷ್ಕಾರ ವಿಧಿಸಿತು. ಹೆಣ್ಣು ಮಕ್ಕಳ ವಿದ್ಯಾಭ್ಯಾಸಕ್ಕೆ ಮುಂದಾದ ಕಾರಣಕ್ಕೆ ಜ್ಯೋತಿ ಬಾ ಮತ್ತು ಸಾವಿತ್ರಿ ಬಾಯಿ ದಂಪತಿಗಳನ್ನು ಮನೆಯಿಂದಲೇ ಹೊರದಬ್ಬಲಾಯಿತು. ಇದು ಅವರ ಬದುಕಿನ ಸಣ್ಣ ಅಂಶ ಮಾತ್ರ. ಆದರೆ ಅವರು ಎಂದೂ ತಮ್ಮ ಜನಪರ ಕೆಲಸದಿಂದ ವಿಮುಖರಾಗಲಿಲ್ಲ. ಸಾಮಾಜಿಕ ಬದ್ಧತೆಯನ್ನು ಬಿಟ್ಟುಕೊಡಲಿಲ್ಲ.

ಇವತ್ತು ನ್ಯಾಯ, ಬದ್ಧತೆ, ಪ್ರೀತಿ, ತ್ಯಾಗ, ಸ್ವಾತಂತ್ರ್ಯ ಮುಂತಾದ ಪದಗಳು ತದ್ವಿರುದ್ಧ ಅರ್ಥಗಳನ್ನು ನೀಡುತ್ತಿವೆ. ಇಂತಹ ಕೆಟ್ಟ ಕಾಲಘಟ್ಟದಲ್ಲಿ ಬದುಕುತ್ತಿರುವ ನಮ್ಮ ಸಮಾಜಕ್ಕೆ ಇಂತಹ ವ್ಯಕ್ತಿಗಳ ಬದುಕು ಮಾತ್ರ ಸರಿಯಾದ ದಾರಿ ತೋರಿಸಲು ಸಾಧ್ಯ.

- ವಿಪ್ಲವ

11-4-2019

ಜ್ಯೋತಿ ಬಾ ಫುಲೆ ಮತ್ತು ಸಾವಿತ್ರಿಬಾಯಿ ಫುಲೆ ಅವರ ಹೋರಾಟದ ಬದುಕನ್ನು ಕಟ್ಟಿಕೊಡುವ 'ದಲಿತ ಪ್ರಜ್ಞೆಯ ದನಿ ಜೋತಿಬಾ ಫುಲೆ'(ಜೀವನ ಚರಿತ್ರೆ) ಮತ್ತು 'ವಿಮೋಚಕಿಯ ಕನಸುಗಳು'(ಸಾವಿತ್ರಿಬಾಯಿ ಫುಲೆ ಬದುಕು-ಹೋರಾಟ) ಕೃತಿಗಳು ಪ್ರಜೋದಯ ಪ್ರಕಾಶನದ Online Storeನಲ್ಲಿ ಲಭ್ಯವಿದ್ದು, ಆಸಕ್ತರು ಲಿಂಕ್ ಕ್ಲಿಕ್ಕಿಸುವ ಮೂಲಕ ಪ್ರಜೋದಯ ಪ್ರಕಾಶನದ Online Storeಗೆ ಭೇಟಿ ನೀಡಬಹುದು.

https://www.instamojo.com/prajodaya/

ಆನ್ಲೈನ್ ಖರೀದಿ ಸಾಧ್ಯವಾಗದಿದ್ದರೆ ಸಂಪರ್ಕಿಸಿ: 8792276742

ಹಿಂದೂಸ್ತಾನ್ ಸಮಾಚಾರ್


 rajesh pande