ಬೆಂಗಳೂರು, 21 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ನನ್ನ ಜೀವಕ್ಕೆ ಅಪಾಯವಿದೆ. ನನ್ನ ಜೀವಕ್ಕೆ ಏನಾದರೂ ಅಪಾಯ ಆದರೆ, ಅದಕ್ಕೆ ಈ ಕಾಂಗ್ರೆಸ್ ಸರ್ಕಾರವೇ ಕಾರಣ, ಅದಕ್ಕೆ ಕಾಂಗ್ರೆಸ್ ಸರ್ಕಾರವೇ ಹೊಣೆ ಹೊತ್ತುಕೊಳ್ಳಬೇಕು.
ನನ್ನ ವಿರುದ್ಧ ಕೊಲೆಗೆ ಸಂಚು ಮಾಡಿದ್ದಾರೆ. ನಿನ್ನೆಯ ಬಂಧನದ ಇಡೀ ಘಟನೆ ಬಗ್ಗೆ ನ್ಯಾಯಾಂಗ ತನಿಖೆಯಾಗಬೇಕು ಎಂದು ವಿಧಾನ ಪರಿಷತ್ ಸದದಸ್ಯ ಸಿಟಿ ರವಿ ಆಗ್ರಹಿಸಿದ್ದಾರೆ.
ಅವರು ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಬೆಳಗಾವಿ ಅಧಿವೇಶನದ ಸಮಯದಲ್ಲಿ ನಡೆದ ಘಟನೆಯನ್ನು ಕುರಿತು ವಿವರಿಸಿದರು.
ನಾನು ಅಶ್ಲೀಲ ಪದ ಬಳಸಿದರೆ ಸಭಾಪತಿ ಯಾವುದೇ ಕ್ರಮ ಕೈಗೊಳ್ಳಲಿ. ನನ್ನ ಆಡಿಯೋವನ್ನು ಎಫ್‌ಎಸ್‌ಎಲ್‌ಗೆ ಕಳುಹಿಸಿ ವರದಿ ಪಡೆಯಲಿ. ನಾನು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಯಾವುದೇ ರೀತಿಯ ಆಕ್ಷೇಪಾರ್ಹ ಪದ ಬಳಸಿಲ್ಲ. ಮಹಿಳೆಯರ ಬಗ್ಗೆ ನನಗೆ ಗೌರವಿದೆ. ಯಾರೋ ಹೇಳಿದ ಹೇಳಿಕೆ ಕೇಳಿ ನನ್ನ ಮೇಲೆ ಸಚಿವೆ ಸುಳ್ಳು ದೂರು ದಾಖಲಿಸಿದ್ದಾರೆ. ದೂರಿನಲ್ಲಿರುವ ಅಂಶಗಳು ಸತ್ಯಕ್ಕೆ ದೂರವಾಗಿವೆ. ಸಚಿವೆ ಅವರು ಅಂತರಾತ್ಮಕ್ಕೆ ಪ್ರಶ್ನೆ ಮಾಡಿಕೊಳ್ಳಿ ಎಂದು ಹೇಳಿದರು. ಅದನ್ನೂ ನಾನು ಮಾಡಿಕೊಂಡಿದ್ದೇನೆ. ಆದರೆ ಬಳಿಕ ನಡೆದ ಘಟನೆಯೇ ಬೇರೆ, ಸುವರ್ಣ ಸೌಧ ಪಶ್ಚಿಮ ದ್ವಾರದ ಬಳಿ ಕಾರ್ ಮೇಲೆ ದಾಳಿ ಮಾಡಿದರು. ನಂತರ ಸುವರ್ಣ ಸೌಧದ ಕಾರಿಡಾರ್ನಲ್ಲಿ ಮೂನಾಲ್ಕು ಜನ ಹಲ್ಲೆಗೆ ಯತ್ನಿಸಿದರು. ಆದರೆ ಮಾರ್ಷಲ್ಗಳು ನನ್ನನ್ನು ರಕ್ಷಿಸಿದರು ಎಂದು ಹೇಳಿದರು.
ಇದಾದ ನಂತರ ಪೊಲೀಸರು ನನ್ನನ್ನು ಬಂಧಿಸದರು. ಪೊಲೀಸ್ ಠಾಣೆಗೆ ಕರೆದೊಯ್ದು ನಾನು ದೂರು ಕೊಟ್ಟರೂ ಸ್ವೀಕರಿಸದೆ ಸ್ವೀಕರಿಸದೆ, ಬಲವಂತವಾಗಿ ಕಾರಿನಲ್ಲಿ ಕೂರಿಸಿಕೊಂಡು ಅನೇಕ ಜಾಗಗಳಲ್ಲಿ ಸುತ್ತಿಸಿದರು. ಈ ವೇಳೆ ನಾನು ನೀರು ಕೇಳಿದರೂ ಕೊಡದೆ ನನ್ನ ಮೊಬೈಲ್ ಪೋನ್ನ್ನು ಬಲವಂತವಾಗಿ ಕಿತ್ತುಕೊಂಡರು. ತಲೆಗೆ ಗಾಯವಾಗಿದೆ ಎಂದರೂ ಸೂಕ್ತ ಚಿಕಿತ್ಸೆ ನೀಡದೆ ನನ್ನನ್ನು ಅಲೆಸುತ್ತಿದ್ದರು. ನನ್ನನ್ನು ಸಾಯಿಸಲು ಮುಂದಾಗುತ್ತಿದ್ದಾರೆ ಎಂದು ನನಗೆ ಅನುಮಾನವಿತ್ತು ಎಂದು ಹೇಳಿದರು.
ಈಗಲೂ ನನಗೆ ಜೀವ ಬೆದರಿಕೆ ಇದೆ. ಸರ್ಕಾರ ನನಗೆ ಸೂಕ್ತ ಭದ್ರತೆ ಕೊಡಬೇಕು. ಸದನದ ಒಳಗೆ ನನಗೆ ಬೆದರಿಕೆ ಹಾಕಿದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್, ಚನ್ನರಾಜ್ ಹಟ್ಟಿಹೊಳಿ ಮತ್ತಿತರರ ವಿಡಿಯೋ, ಆಡಿಯೋ ತನಿಖೆ ಆಗಲಿ.ನನ್ನ ಫೋನ್ ಕದ್ದಾಲಿಕೆ ಮಾಡಲಾಗಿದೆ, ಇದರ ತನಿಖೆ ಆಗಬೇಕು. ಎಲ್ಲದರ ಬಗ್ಗೆ ನ್ಯಾಯಾಂಗ ತನಿಖೆಗೆ ಸರ್ಕಾರ ಆದೇಶಿಸಬೇಕು ಎಂದರು.
ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್