ಬೆಳಗಾವಿ ಅಧಿವೇಶನ ; ೬೪ ಗಂಟೆ ಉತ್ಪಾದಕತೆ, ೧೩ ವಿಧೇಯಕ ಅಂಗೀಕಾರ 
ಬೆಳಗಾವಿ ಅಧಿವೇಶನ ; ೬೪ ಗಂಟೆ ಉತ್ಪಾದಕತೆ, ೧೩ ವಿಧೇಯಕಗಳ ಅಂಗೀಕಾರ - ವಿಧಾನಸಭಾಧ್ಯಕ್ಷ ಯು.ಟಿ. ಖಾದರ್
ಯು.ಟಿ. ಖಾದರ್


ಮಡಿಕೇರಿ, 21 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ಬೆಳಗಾವಿಯ ಸುವರ್ಣ ಸೌಧದಲ್ಲಿ ೮ ದಿನಗಳ ಕಾಲ ನಡೆದ ವಿಧಾನ ಸಭಾ ಅಧಿವೇಶನ ಅತ್ಯಂತ ಯಶಸ್ವಿಯಾಗಿದ್ದು, ಜನಪರವಾದ ಅನೇಕ ಪ್ರಶ್ನೆಗಳಿಗೆ ಸರ್ಕಾರದಿಂದ ಸಮರ್ಪಕ ಉತ್ತರ ದೊರಕಿದೆ ಎಂದು ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಪ್ರತಿಕ್ರಿಯಿಸಿದ್ದಾರೆ.

ಮಡಿಕೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳಗಾವಿಯಲ್ಲಿ ಈ ಬಾರಿಯ ವಿಧಾನ ಸಭಾ ಅಧಿವೇಶನವು ಯಾವುದೇ ಪ್ರತಿಭಟನೆಗಳಿಗೆ ಆಸ್ಪದ ಇಲ್ಲದಂತೆ ೮ ದಿನಗಳಲ್ಲಿ ೬೪ ಗಂಟೆ ಕಾಲ ಅತ್ಯಂತ ಯಶಸ್ವಿಯಾಗಿ ಸದನ ನಡೆದಿದೆ. ಜನಪರವಾಗಿ ಅಧಿವೇಶನ ನಡೆದಿದ್ದು, ಆಡಳಿತ ಮತ್ತು ಪ್ರತಿಪಕ್ಷ ಸದಸ್ಯರು ಅತ್ಯುತ್ತಮ ಸಹಕಾರ ನೀಡಿದ ಹಿನ್ನೆಲೆಯಲ್ಲಿ ಮಹತ್ವದ ೧೩ ವಿಧೇಯಕಗಳು ಅಂಗೀಕಾರಗೊಂಡಿವೆ ಎಂದು ಮಾಹಿತಿ ನೀಡಿದರು.

ಸದನದ ಮುಂದೆ ಬಂದ ೧,೯೩೧ ಪ್ರಶ್ನೆಗಳಿಗೆ ಉತ್ತರಿಸಲಾಗಿದೆ. ಇದರಲ್ಲಿ ಗಮನ ಸೆಳೆಯುವ ೪೪೪ ಸೂಚನೆಗಳ ಪೈಕಿ ೨೯೪ ಸೂಚನೆಗಳಿಗೆ ವಿಧಾನ ಸಭೆಯಲ್ಲಿ ಉತ್ತರ ಸ್ವೀಕರಿಸಲಾಗಿದೆ. ೧೬೦ ಸೂಚನೆಗಳನ್ನು ಅಂಗೀಕರಿಸಲಾಗಿದ್ದು, ೮೦ ಸೂಚನೆಗಳ ಉತ್ತರಗಳನ್ನು ಸ್ವೀಕರಿಸಲಾಗಿದೆ. ಉತ್ತರ ಕರ್ನಾಟಕ ಭಾಗದ ವಿಚಾರಗಳ ಬಗ್ಗೆ ಕೂಡ ಸದನದಲ್ಲಿ ಸಮಗ್ರ ಚರ್ಚೆ ನಡೆದಿದೆ ಎಂದು ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್


 rajesh pande