ಬೆಂಗಳೂರು, 20 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ದಕ್ಷಿಣ ಭಾರತದ ಏಕೈಕ ಐಷಾರಾಮಿ ರೈಲು ದಿ ಗೋಲ್ಡನ್ ಚಾರಿಯೇಟ್ ರೈಲನ್ನು ಪುನಾರಂಭಿಸಲಾಗಿದ್ದು, ನಾಳೆ ಬೆಳಿಗ್ಗೆ 09.30 ಗಂಟೆಗೆ ಯಶವಂತಪುರ ರೈಲು ನಿಲ್ಯಾಣದ ಪ್ಲಾಟ್ ಫಾರ್ಮ್ 06 ರಲ್ಲಿ ಮುಖ್ಯಮಂತ್ರಿಗಳು ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಲಿರುವರು ಎಂದು ಪ್ರವಾಸೋದ್ಯಮ ಇಲಾಖೆಯು ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿದೆ.
ದಿ ಗೋಲ್ಡನ್ ಚಾರಿಯೇಟ್' ರೈಲನ್ನು ಐ ಆರ್ ಸಿ ಟಿ ಸಿ ರವರು ನಿರ್ವಹಣೆ ಮಾಡುತ್ತಿದ್ದು ಪ್ರಸ್ತುತ 2024-25ನೇ ಸಾಲಿನಲ್ಲಿ ರಾಜ್ಯದಲ್ಲಿ ಪ್ರವಾಸ ಕಾರ್ಯಕ್ರಮಗಳು ಹೆಚ್ಚಿರುವುದರಿಂದ ಕರ್ನಾಟಕ ರಾಜ್ಯದ ಪ್ರವಾಸಿ ತಾಣಗಳು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರವಾಸಿಗರನ್ನು ಆಕರ್ಷಿಸುವುದು ಸೂಕ್ತವಾಗಿದ್ದು, ಈ ಹಿನ್ನೆಲೆಯಲ್ಲಿ ‘ದಿ ಗೋಲ್ಡನ್ ಚಾರಿಯೇಟ್' ರೈಲನ್ನು ವುನಾರಂಭಿಸಲಾಗಿದೆ
ನಾಳೆ ಡಿಸೆಂಬರ್ 21 ರಿಂದ ‘ದಿ ಗೋಲ್ಡನ್ ಚಾರಿಯೇಟ್' ರೈಲು ಬೆಂಗಳೂರಿನಿಂದ ಹೊರಟು, ಮೈಸೂರು - ಕಾಂಚಿಪುರಂ - ಮಹಾಬಲಿಪುರಂ - ತಂಜಾವುರ್ - ಚೆಟ್ಟಿನಾಡು - ಕೊಚ್ಚಿನ್ - ಚರ್ತಲ/ಮರೈಕುಲಮ್ - ಬೆಂಗಳೂರು ಮಾರ್ಗವಾಗಿ ಸಂಚಾರ ಪ್ರಾರಂಭಿಸಲಿದೆ.
ಈ ಸಮಯದಲ್ಲಿ ಕೇಂದ್ರ ರಾಜ್ಯ ರೈಲ್ವೆ ಸಚಿವರು, ಉಪ ಮುಖ್ಯಮಂತ್ರಿಗಳು, ಕಾನೂನು ಮತ್ತು ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಇಲಾಖೆ ಸಚಿವರು ಸೇರಿದಂತೆ ರೈಲ್ವೇ ಇಲಾಖೆ ಅಧಿಕಾರಿಗಳು, ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು ಉಪಸ್ಥಿತರಿರುವರು ಎಂದು ಪ್ರವಾಸೋದ್ಯಮ ಇಲಾಖೆಯು ಪ್ರಕಟಣೆಯಲ್ಲಿ ತಿಳಿಸಿದೆ.
ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್