ಬೆಳಗಾವಿ, 07 ನವೆಂಬರ್ (ಹಿ.ಸ.) :
ಆ್ಯಂಕರ್ : ಶಿರಸಿಯ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನ ಕಳೆದ 18 ವರ್ಷಗಳಿಂದ ನಡೆಸುತ್ತಿರುವ ಭಗವದ್ಗೀತೆ ಅಭಿಯಾನ ಒಂದು ಪವಿತ್ರ ಕಾರ್ಯವಾಗಿದ್ದು, ಇದರಿಂದ ಭಾರತಕ್ಕೆ ಅಂತ್ಯ ಇಲ್ಲ ಎನ್ನುವುದು ಖಾತ್ರಿಯಾಗಿದೆ ಎಂದು ರಾಮಕೃಷ್ಣ ಮಿಶನ್ ಆಶ್ರಮದ ಸ್ವಾಮೀಜಿ ಮೋಕ್ಷಾತ್ಮಾನಂದ ಮಹಾರಾಜ ಹೇಳಿದ್ದಾರೆ.
ಭಗವದ್ಗೀತೆ ಅಭಿಯಾನದ ಬೆಳಗಾವಿ ಜಿಲ್ಲಾ ಮಟ್ಟದ ಕಾರ್ಯಕ್ರಮವನ್ನು ಸಂತ ಮೀರಾ ಶಾಲೆಯ ಮಾಧವ ಶಾನಭಾಗ ಸಭಾಭವನದಲ್ಲಿ ಉದ್ಘಾಟಿಸಿ ಅವರು ಆಶಿರ್ವಚನ ನೀಡಿದರು.
ಭಗವಂತನ ಮೂರು ಸೃಷ್ಟಿಗಳಲ್ಲಿ ಭಗವದ್ಗೀತೆಯೂ ಒಂದು. ಪ್ರಪಂಚ, ಮನುಷ್ಯ ಮತ್ತು ಭಗವದ್ಗೀತೆ ಇವು ಅದ್ಭುತ ಸೃಷ್ಟಿಗಳು. ಭಗವಂತ ಇರುವುದಕ್ಕೆ ಈ ಪ್ರಪಂಚವೇ ಸಾಕ್ಷಿ ಎಂದು ಅವರು ಹೇಳಿದರು.
ಮೊಬೈಲ್ ಇಂದು ಮನುಷ್ಯನನ್ನು ನಾಶ ಮಾಡುತ್ತಿದೆ. ಅಮೇರಿಕಾದಲ್ಲಿ ಗ್ಯಾಂಬ್ಲಿಂಗ್ ತತ್ವದ ಮೇಲೆ ಮೊಬೈಲ್ ಕಂಡು ಹಿಡಿಯ ಲಾಗಿದೆ. ಒಮ್ಮೆ ಬಳಸಲು ಆರಂಭಿಸಿದರೆ ಹೊರಬರುವುದೇ ಕಷ್ಟವಾಗಿದೆ. ಹಾಗಾಗಿ ಸಾಧ್ಯವಾದಷ್ಟು ಅದರಿಂದ ದೂರವಿರಬೇಕು. ಮಕ್ಕಳು ಪದವಿ ಮುಗಿಯುವವರೆಗೆ ಮನರಂಜನೆಗಾಗಿ ಮೊಬೈಲ್ ಬಳಸುವುದನ್ನು ನಿಲ್ಲಿಸಬೇಕು. ನಿತ್ಯ ಧ್ಯಾ ನ ಮಾಡುವ ಮೂಲಕ ಮಕ್ಕಳು ತಮ್ಮ ಸರ್ವತೋಮುಖ ಬೆಳವಣಿಗೆ ಮಾಡಿಕೊಳ್ಳಬೇಕು ಎಂದು ಸ್ವಾಮೀಜಿ ಕರೆ ನೀಡಿದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa