ಕೊಪ್ಪಳ, 23 ನವೆಂಬರ್ (ಹಿ.ಸ.) :
ಆ್ಯಂಕರ್ : ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ನ್ಯಾಯಿಕ ಸದಸ್ಯ ಎಸ್. ಕೆ. ವಂಟಿಗೋಡಿ ಅವರು ನವೆಂಬರ್. 25 ರಂದು ಕೊಪ್ಪಳ ಜಿಲ್ಲಾ ಪ್ರವಾಸ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ.
ಅಂದು ಬೆಳಗ್ಗೆ ಹುಬ್ಬಳ್ಳಿಯಿಂದ ಹೊರಟು 10 ಗಂಟೆಗೆ ಗಂಗಾವತಿಗೆ ಆಗಮಿಸಿ ಗಂಗಾವತಿ ಸಕ್ಯೂಟ್ ಹೌಸನಲ್ಲಿ ಇರಲಿದ್ದಾರೆ. ಗೌರವಾನ್ವಿತ ಸದಸ್ಯರು ಸ್ವಯಂ ಪ್ರಕರಣ ಎಚ್ ಆರ್ ಸಿ ನಂಬರ್ 3877/10/24/2024(FB) ಸಂಬಂಧವಾಗಿ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿಗೆ ಭೇಟಿ ನೀಡಲಿದ್ದಾರೆ.
ಅಂದು ಮಧ್ಯಾಹ್ನ 2:30 ರಿಂದ ಸಂಜೆ 5 ಗಂಟೆಯವರೆಗೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಕೊಪ್ಪಳ ನಗರದ ಸರಕಾರಿ ಅತಿಥಿ ಗೃಹದಲ್ಲಿ ಸಭೆ ನಡೆಸಿ ವಾಸ್ತವ್ಯಮಾಡುವರು. ಮಂಗಳವಾರ ಬೆಳಿಗ್ಗೆ 10:30 ಗಂಟೆಗೆ ಕೊಪ್ಪಳ ಸರಕಾರಿ ಅತಿಥಿ ಗೃಹದಿಂದ ಬೆಂಗಳೂರಿಗೆ ರಸ್ತೆಯ ಮೂಲಕ ಪ್ರಯಾಣ ಬೆಳೆಸಲಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್