ಸಂಪನ್ಮೂಲ ಹೇರಳವಾಗಿ ಬಳಕೆಯಾಗಿದೆ: ಸಿ.ಸಿ. ಪಾಟೀಲ್
ಹುಬ್ಬಳ್ಳಿ, 23 ನವೆಂಬರ್ (ಹಿ.ಸ.) : ಆ್ಯಂಕರ್ : ಉಪ ಚುನಾವಣೆಯಲ್ಲಿ ಬಹುತೇಕ ಜನರು ಆಡಳಿತ ಪಕ್ಷದ ಪರ ಇರುತ್ತಾರೆ‌. ಸಚಿವರು, ಶಾಸಕರು, ಸಂಪನ್ಮೂಲದ ಬಳಕೆ ಹೇರಳವಾಗಿ ಬಳಕೆಯಾಗುತ್ತದೆ. ಆದರೂ, ನಾವು ಜನರ ತೀರ್ಪು ಒಪ್ಪಿಕೊಳ್ಳುತ್ತೇವೆ ಎಂದು ಮಾಜಿ ಸಚಿವ ಸಿ.ಸಿ. ಪಾಟೀಲ್ ಹೇಳಿದ್ದಾರೆ. ಹುಬ್ಬಳ್ಳಿಯಲ್ಲಿ
Cc patil


ಹುಬ್ಬಳ್ಳಿ, 23 ನವೆಂಬರ್ (ಹಿ.ಸ.) :

ಆ್ಯಂಕರ್ : ಉಪ ಚುನಾವಣೆಯಲ್ಲಿ ಬಹುತೇಕ ಜನರು ಆಡಳಿತ ಪಕ್ಷದ ಪರ ಇರುತ್ತಾರೆ‌. ಸಚಿವರು, ಶಾಸಕರು, ಸಂಪನ್ಮೂಲದ ಬಳಕೆ ಹೇರಳವಾಗಿ ಬಳಕೆಯಾಗುತ್ತದೆ. ಆದರೂ, ನಾವು ಜನರ ತೀರ್ಪು ಒಪ್ಪಿಕೊಳ್ಳುತ್ತೇವೆ ಎಂದು ಮಾಜಿ ಸಚಿವ ಸಿ.ಸಿ. ಪಾಟೀಲ್ ಹೇಳಿದ್ದಾರೆ.

ಹುಬ್ಬಳ್ಳಿಯಲ್ಲಿ ಮಾಧ್ಯಮಗಳಿಗೆ ಮಾತನಾಡಿದ ಅವರು, ಈ ಚುನಾವಣೆಯಲ್ಲಿ ನಾನು ಸುಮಾರು ಹದಿನೈದು ದಿನ ಕೆಲಸ ಮಾಡಿದ್ದೇನೆ. ಬಸವರಾಜ ಬೊಮ್ಮಾಯಿಯವರು ಈ ಕ್ಷೇತ್ರದಲ್ಲಿ ಐದು ಲಕ್ಷ ರೂಪಾಯಿಯ ಸುಮಾರು 15,000 ಮನೆಗಳನ್ನು ಕಟ್ಟಿಸಿಕೊಟ್ಟಿದ್ದಾರೆ‌. ಒಂದು ಮನೆಗೆ ನಾಲ್ಕು ಮತ ಬಂದರೂ ಸುಮಾರು ಆರವತ್ತು ಸಾವಿರ ಮತಗಳು ಬರಬೇಕಿತ್ತು. ಬಡವರಿಗೆ ಗೋವುಗಳನ್ನು ಕೊಡಿಸಿದ್ದಾರೆ. ಆಸ್ಪತ್ರೆ ‌ಕಟ್ಟಿಸಿದ್ದಾರೆ. ಅಭಿವೃದ್ಧಿ ಅಂದರೆ ಶಿಗ್ಗಾವಿ ಕ್ಷೇತ್ರಕ್ಕೆ ಹೋಗಿ ನೋಡಬೇಕು. ಈಗ ಯಾಸಿರ್ ಖಾನ್ ಪಠಾಣ ಆಯ್ಕೆಯಾಗಿದ್ದಾರೆ ಅವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಅವರು ಮಾಡಲು ಕ್ಷೇತ್ರದಲ್ಲಿ ಏನೂ ಉಳಿದಿಲ್ಲ ಎಂದು ಹೇಳಿದರು.

ಇವರಿಂದ ಕ್ಷೇತ್ರದ ಪುಣ್ಯ ಹೆಚ್ಚಾಗಿದೆ ಎಂದು ಭಾವಿಸಿ ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕಿರಬಹುದು. ಜನರ ತೀರ್ಪನ್ನು ನಾವು ತಲೆಬಾಗಿ ಸ್ವೀಕರಿಸಬೇಕಾಗುತ್ತದೆ. ಪ್ರಜಾಪ್ರಭುತ್ವದಲ್ಲಿ ಜನತೆಯೇ ಜನಾರ್ದನ ಎಂದು ನಂಬಿದ್ದೇವೆ. ನಾವು ಹಿಂದೆ 17 ಜನ ಶಾಸಕರನ್ನು ರಾಜಿನಾಮೆ ಕೊಡಿಸಿ 13 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದೇವು, ಶ್ರೀಮಂತ ಪಾಟೀಲ್ ಅವರ ಕ್ಷೇತ್ರದ ಉಸ್ತುವಾರಿ ಹೊತ್ತು ನಾನು ಗೆಲ್ಲಿಸಿಕೊಂಡು ಬಂದಿದ್ದೆ. ಈಗ ಶಿಗ್ಗಾವಿ ಸವಣೂರಿನಲ್ಲಿ ಕಾಂಗ್ರೆಸ್ ನವರು ಗೆಲುವು ಸಾಧಿಸಿದ್ದಾರೆ. ಬಸವರಾಜ ಬೊಮ್ಮಾಯಿಯವರು ಶಿಗ್ಗಾವಿ ಕ್ಷೇತ್ರದಲ್ಲಿ 45 ಕಿಲೋ‌ಮೀಟರ್ ದೂರದಿಂದ ನದಿ ನೀರು ತಿರುಗಿಸಿ ತುಂತುರು ಹನಿ ನೀರಾವರಿ ಮಾಡಿದ್ದಾರೆ. ನಂಜುಂಡಪ್ಪ ವರದಿ ಪ್ರಕಾರ ಅತ್ಯಂತ ಹಿಂದುಳಿದ ತಾಲೂಕುಗಳ ಪಟ್ಟಿಯಲ್ಲಿದ್ದ ಶಿಂಗ್ಗಾವಿ ಅಭಿವೃದ್ಧಿ ಹೊಂದಿದ ತಾಲೂಕುಗಳ ಪಟ್ಟಿಯಲ್ಲಿ ಸೇರುವಂತೆ ಬೊಮ್ಮಾಯಿಯವರು ಕೆಲಸ ಮಾಡಿದ್ದರು. ಆದರೂ, ಜನರ ತೀರ್ಪಿಗೆ ತಲೆ ಬಾಗುತ್ತೇವೆ ಎಂದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande