ಮಸ್ಕಿ , 23 ನವೆಂಬರ್ (ಹಿ.ಸ.) :
ಆ್ಯಂಕರ್ : ಮಸ್ಕಿ ಪುರಸಭೆ 3ನೇ ವಾರ್ಡಿನ ಉಪಚುನಾವಣೆಯ ಮತದಾನವು ಶನಿವಾರ ಮುಂಜಾನೆ 7:00 ಗಂಟೆಯಿಂದ ಸಂಜೆ 5:00 ಗಂಟೆಯವರೆಗೆ ಮತದಾನ ನಡೆಯಿತು. ಅತ್ಯಂತ ಶಾಂತಿಯುತವಾಗಿ ನಡೆಯಿತು.
3ನೇ ವಾರ್ಡಿನ ಒಟ್ಟು 954 ಮತದಾರರು, 320 ಪುರುಷ, 329 ಮಹಿಳೆಯರು ಸೇರಿದಂತೆ ಒಟ್ಟು 649(68.03%) ಮತದಾರರು ತಮ್ಮ ಹಕ್ಕನ್ನು ಚಲಾಯಿಸಿದರು
ಶನಿವಾರ 3ನೇ ವಾರ್ಡಿನ ಉಪಚುನಾವಣೆಯು ಮುಕ್ತಾಯಗೊಳ್ಳುವ ಮೂಲಕ ಸ್ಪರ್ಧೆಯಲ್ಲಿರುವ ಮೂರು ಅಭ್ಯರ್ಥಿಗಳ ಭವಿಷ್ಯವು ಮತಪೆಟ್ಟಿಗೆಯಲ್ಲಿ ಭದ್ರವಾಗಿದೆ.
ಭಾರಿ ಬಂದೋಬಸ್ತ್:- 2021ರ ವಿಧಾನಸಭಾ ಚುನಾವಣೆಯಲ್ಲಿ ಗಲಾಟೆ ನಡೆದ ಕಾರಣ, ಮುಂಜಾಗ್ರತವಾಗಿ ಈ ಉಪ ಚುನಾವಣೆಯಲ್ಲಿ ಯವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್ ಇಲಾಖೆಯು ಭಾರಿ ಬಂದೋಬಸ್ತ್ ಏರ್ಪಡಿಸಿತ್ತು. ಪಿಎಸ್‍ಐ ಮುದ್ದು ರಂಗಸ್ವಾಮಿ, ಸೇರಿದಂತೆ ಸ್ಥಳೀಯ ಠಾಣೆಯ ಬಹುತೇಕ ಎಲ್ಲಾ ಪೊಲೀಸರನ್ನು ಮತಗಟ್ಟೆಯ ಒಳಗೆ, ಹೊರಗೆ ಹಾಗೂ ಮತಗಟ್ಟೆಯ 100 ಮೀಟರ್ ಸುತ್ತಳತೆಯ ಪ್ರತಿಯೊಂದು ರಸ್ತೆಗಳಲ್ಲಿ ಬಿಗಿಪೆÇಲೀಸ್ ಬಂದೋಬಸ್ತ್ ಏರ್ಪಡಿಸಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್