ಶಿಕ್ಷಾ ಮಹಾಕುಂಭದ ರಾಷ್ಟ್ರೀಯ ಸಮ್ಮೇಳನ
ಜಲಂಧರ್, 9ಜೂನ್ (ಹಿ.ಸ): ಆ್ಯಂಕರ್: ಜಲಂಧರ್ನ ಡಾ.ಬಿ.ಆರ್.ಅಂಬೇಡ್ಕರ್ ರಾಷ್ಟ್ರೀಯ ತಾಂತ್ರಿಕ ಸಂಸ್ಥೆಯಲ್ಲಿ ಇಂದು
ಿಿ


ಜಲಂಧರ್, 9ಜೂನ್ (ಹಿ.ಸ):

ಆ್ಯಂಕರ್:

ಜಲಂಧರ್ನ ಡಾ.ಬಿ.ಆರ್.ಅಂಬೇಡ್ಕರ್ ರಾಷ್ಟ್ರೀಯ ತಾಂತ್ರಿಕ ಸಂಸ್ಥೆಯಲ್ಲಿ ಇಂದು ಶಾಲಾ ಶಿಕ್ಷಣದಲ್ಲಿ ಇತ್ತೀಚಿನ ಪ್ರಗತಿಗಳು-೨೦೨೩ ಕುರಿತ ಮೂರು ದಿನಗಳ ರಾಷ್ಟ್ರೀಯ ಸಮ್ಮೇಳನ ಪ್ರಾರಂಭವಾಗಲಿದೆ.

ಎನ್ಐಟಿ ಜಲಂಧರ್ ಮತ್ತು ಇತರ ಪ್ರಮುಖ ಶಿಕ್ಷಣ ಸಂಸ್ಥೆಗಳ ಸಹಯೋಗದೊಂದಿಗೆ ಪಂಜಾಬ್ನ ಸರ್ವಿತ್ಕರಿ ಶಿಕ್ಷಾ ಸಮಿತಿ ಶಿಕ್ಷಾ ಮಹಾಕುಂಭವನ್ನು ಆಯೋಜಿಸಿದೆ.

ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಅನುರಾಗ್ ಸಿಂಗ್ ಠಾಕೂರ್, ಶಿಕ್ಷಾ ಮಹಾಕುಂಭದ ಉದ್ಘಾಟನಾ ಅಧಿವೇಶನದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.

ಈ ಕಾರ್ಯಕ್ರಮ ರಾಷ್ಟ್ರೀಯ ಶಿಕ್ಷಣ ನೀತಿ-ಎನ್ಇಪಿ ಅನುಷ್ಠಾನದಲ್ಲಿನ ಉತ್ತಮ ಅಭ್ಯಾಸಗಳನ್ನು ಮತ್ತು ಶೈಕ್ಷಣಿಕ ಸುಧಾರಣೆಗಳನ್ನು ಅನುಷ್ಠಾನಗೊಳಿಸುವಲ್ಲಿ ಮಧ್ಯಸ್ಥಗಾರರ ಸವಾಲುಗಳನ್ನು ಪ್ರದರ್ಶಿಸಲಿದೆ.

ಐಐಟಿ, ಏಮ್ಸ್, ಐಐಎಂ, ಐಐಎಸ್ಇಆರ್ ಮತ್ತು ಎನ್ಐಟಿಗಳು ಸೇರಿದಂತೆ ದೇಶದ ಪ್ರಮುಖ ಸಂಸ್ಥೆಗಳ ಹಿರಿಯ ಕಾರ್ಯನಿರ್ವಾಹಕರು ಶಿಕ್ಷಾ ಮಹಾಕುಂಭದಲ್ಲಿ ಭಾಗವಹಿಸಲಿದ್ದಾರೆ.

ಹಿಂದೂಸ್ತಾನ್ ಸಮಾಚಾರ್


 rajesh pande