ಬಿರುಗಾಳಿ ಸಹಿತ ಭಾರೀ ಮಳೆ – 7 ಮನೆಗಳ ಮೇಲ್ಛಾವಣಿ ಕುಸಿತ
ಚಿತ್ರದುರ್ಗ, 9ಜೂನ್ (ಹಿ.ಸ): ಆ್ಯಂಕರ್: ಚಿತ್ರದುರ್ಗ ಜಿಲ್ಲೆಯ ಹಲವೆಡೆ ಗುರುವಾರ ಬಿರುಗಾಳಿ ಸಹಿತ ಭಾರೀ ಮಳೆ
ಪಬು


ಚಿತ್ರದುರ್ಗ, 9ಜೂನ್ (ಹಿ.ಸ):

ಆ್ಯಂಕರ್:

ಚಿತ್ರದುರ್ಗ ಜಿಲ್ಲೆಯ ಹಲವೆಡೆ ಗುರುವಾರ ಬಿರುಗಾಳಿ ಸಹಿತ ಭಾರೀ ಮಳೆ ಸುರಿದಿದ್ದು, ಮಿಡ್ಲುಗಟ್ಟೆ ಪಿಂಜಾರಹಟ್ಟಿ ಗ್ರಾಮದಲ್ಲಿ 7 ಮನೆಗಳ ಮೇಲ್ಛಾವಣಿ ಕುಸಿದಿವೆ.

ತಡರಾತ್ರಿ ಸುರಿದ ಗಾಳಿ ಸಹಿತ ಮಳೆಗೆ ಚಳ್ಳಕೆರೆ ತಾಲೂಕಿನ ಮಿಡ್ಲುಗಟ್ಟೆ ಪಿಂಜಾರಹಟ್ಟಿ ಗ್ರಾಮದಲ್ಲಿ 7 ಮನೆಗಳ ಮೇಲ್ಛಾವಣಿ ಕುಸಿದು ಬಿದ್ದಿದೆ. ಗಾಳಿಯ ರಭಸಕ್ಕೆ ಮೇಲ್ಛಾವಣಿಯ ಶೀಟುಗಳು, ಹೆಂಚುಗಳು ಪುಡಿಪುಡಿಯಾಗಿ ಬಿದ್ದಿದೆ. ತಾಲೂಕಿನಾದ್ಯಂತ ಸುರಿದ ಧಾರಾಕಾರ ಮಳೆಗೆ ಗ್ರಾಮಸ್ಥರು ಕಂಗಾಲಾಗಿದ್ದಾರೆ. ಇದನ್ನೂ ಓದಿ: ಬಿಪೊರ್ಜೊಯ್ ಸೈಕ್ಲೋನ್ ಎಫೆಕ್ಟ್; ಕರ್ನಾಟಕ ಸೇರಿ 5 ರಾಜ್ಯಗಳಲ್ಲಿ ಭಾರೀ ಮಳೆ ಸಾಧ್ಯತೆ

ಹಿಂದೂಸ್ತಾನ್ ಸಮಾಚಾರ್


 rajesh pande