ಕೊಲ್ಹಾಪುರದಲ್ಲಿ ಪರಿಸ್ಥಿತಿ ನಿಯಂತ್ರಣ, ನಿಷೇಧಾಜ್ಞೆ ಮುಂದುವರಿಕೆ
ಕೊಲ್ಹಾಪುರ, 9ಜೂನ್ (ಹಿ.ಸ): ಆ್ಯಂಕರ್: ವಿವಾದಿತ ವಾಟ್ಸಪ್ ಸ್ಟೇಟಸ್ ವೈರಲ್ ಬೆನ್ನಲ್ಲೇ ಉದ್ವಿಘ್ನಗೊಂಡಿದ್ದ ಮಹ
ಿಿಿ


ಕೊಲ್ಹಾಪುರ, 9ಜೂನ್ (ಹಿ.ಸ):

ಆ್ಯಂಕರ್: ವಿವಾದಿತ ವಾಟ್ಸಪ್ ಸ್ಟೇಟಸ್ ವೈರಲ್ ಬೆನ್ನಲ್ಲೇ ಉದ್ವಿಘ್ನಗೊಂಡಿದ್ದ ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯಲ್ಲಿ ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ 36 ಜನರನ್ನು ಬಂಧಿಸಲಾಗಿದೆ . ಸ್ಟೇಟಸ್ ಹಾಕಿದ್ದ ಇಬ್ಬರು ಬಾಲಕರು ಸೇರಿ ಐವರು ಯುವಕರನ್ನು ವಶಕ್ಕೆ ಪಡೆದಿದ್ದಾರೆ. ಕೊಲ್ಹಾಪುರ ಪೊಲೀಸರು ಹುಡುಗರ ಬಳಿ ಇದ್ದ ಮೊಬೈಲ್ ವಶಕ್ಕೆ ಪಡೆದಿದ್ದಾರೆ. ಸದ್ಯ ಸಹಜ ಸ್ಥಿತಿಯತ್ತ ಮರಳಿದ ಕೊಲ್ಹಾಪುರದಲ್ಲಿ ಅಂಗಡಿ ತೆರೆಯಲು ಅವಕಾಶ ನೀಡಲಾಗಿದೆ. ಆದ್ರೆ ಕೊಲ್ಹಾಪುರ ನಗರದಲ್ಲಿ ಜೂ.19ರವರೆಗೆ ನಿಷೇಧಾಜ್ಞೆ ಮುಂದುವರಿಯಲಿದೆ.

ಹಿಂದೂಸ್ತಾನ್ ಸಮಾಚಾರ್


 rajesh pande