ಇಂದು ವಿಶ್ವ ಸಾಗರ ದಿನ
ದೆಹಲಿ, 8ಜೂನ್ (ಹಿ.ಸ): ಆ್ಯಂಕರ್: ಅತ್ಯಂತ ಅಮೂಲ್ಯವಾಗಿರುವ ಸಾಗರ ಸಂಪತ್ತನ್ನು ಸಂರಕ್ಷಿಸುವುದು ನಮ್ಮ ಮುಖ್ಯ ಕರ್
ೇ


ದೆಹಲಿ, 8ಜೂನ್ (ಹಿ.ಸ):

ಆ್ಯಂಕರ್:

ಅತ್ಯಂತ ಅಮೂಲ್ಯವಾಗಿರುವ ಸಾಗರ ಸಂಪತ್ತನ್ನು ಸಂರಕ್ಷಿಸುವುದು ನಮ್ಮ ಮುಖ್ಯ ಕರ್ತವ್ಯ. ಈ ನಿಟ್ಟಿನಲ್ಲಿಯೇ ಪ್ರತಿಯೊಬ್ಬರಿಗೂ ಈ ಬಗ್ಗೆ ಜಾಗೃತಿ ಮೂಡಿಸುವ ಸದುದ್ದೇಶದಿಂದ ಜೂನ್ 8 ಅನ್ನು ವಿಶ್ವ ಸಾಗರ ದಿನವನ್ನಾಗಿ ಆಚರಿಸಲಾಗುತ್ತಿದೆ.

ವಿಶ್ವ ಸಾಗರ ದಿನವನ್ನು ಆಚರಿಸುವ ಪರಿಕಲ್ಪನೆಯನ್ನು ಮೊದಲು 1992 ರಲ್ಲಿ ಬ್ರೆಜಿಲ್ನ ರಿಯೊ ಡಿ ಜನೈರೊದಲ್ಲಿ ನಡೆದ ವಿಶ್ವಸಂಸ್ಥೆಯ ಪರಿಸರ ಮತ್ತು ಅಭಿವೃದ್ಧಿ ಸಮ್ಮೇಳನದಲ್ಲಿ ಪ್ರಸ್ತಾಪಿಸಲಾಯಿತು. ಇದು ಪ್ರಪಂಚದಲ್ಲಿ ವಿಶಾಲವಾಗಿ ಹಂಚಲ್ಪಟ್ಟ ಸಾಗರವನ್ನು ಸಂಭ್ರಮಿಸುವ ಮತ್ತು ನಮ್ಮ ಜೀವನದಲ್ಲಿ ಅದು ವಹಿಸುವ ನಿರ್ಣಾಯಕ ಪಾತ್ರವನ್ನು ಒತ್ತಿಹೇಳುವ ಗುರಿಯನ್ನು ಹೊಂದಿತ್ತು.

ಸಾಗರಗಳು ಶತಕೋಟಿ ಜನರಿಗೆ ಆಹಾರದ ಮೂಲವಾಗಿದೆ ಮತ್ತು ಹವಾಮಾನವನ್ನು ನಿಯಂತ್ರಿಸುತ್ತದೆ. ಸಾಗರವು ತನ್ನಲ್ಲಿರುವ ಅಭಿವೃದ್ಧಿ ಹೊಂದುತ್ತಿರುವ ಜೀವಿಗಳ ಮೂಲಕ ಗ್ರಹದ ಅರ್ಧಕ್ಕಿಂತ ಹೆಚ್ಚು ಆಮ್ಲಜನಕವನ್ನು ಉತ್ಪಾದಿಸುತ್ತದೆ. ಆದಾಗ್ಯೂ, ಮಿತಿಮೀರಿದ ಮೀನುಗಾರಿಕೆ, ತೈಲ ಸೋರಿಕೆಗಳು ಮತ್ತು ಪ್ಲಾಸ್ಟಿಕ್ ಮಾಲಿನ್ಯದಂತಹ ಮಾನವ ಚಟುವಟಿಕೆಗಳು ಸಮುದ್ರ ಹಾಗೂ ಅದರಲ್ಲಿರುವ ಸಮುದ್ರ ಜೀವಿಗಳ ಮೇಲೆ ಅಪಾರವಾದ ಕೆಟ್ಟ ಪರಿಣಾಮಗಳನ್ನು ಬೀರಿದೆ.

ಹಾಗಾಗಿ ಸಾಗರ ಕಲ್ಮಶವಾಗುವುದನ್ನು ತಡೆಯುವ ಹಾಗೂ ಸಾಗರಗಳನ್ನು ಪುನರುಜ್ಜೀವನಗೊಳಿಸುವ ಮೂಲಕ ಗತ ವೈಭವ ಮರಳಿಸುವ ದೃಷ್ಟಿಯಿಂದ ವಿಶ್ವ ಸಾಗರ ದಿನವು ಸಕಲ ಕ್ರಮಗಳನ್ನು ತೆಗೆದುಕೊಳ್ಳುವಂತೆ ಪ್ರಯತ್ನಿಸಲು ಕರೆ ನೀಡುತ್ತದೆ

ಹಿಂದೂಸ್ತಾನ್ ಸಮಾಚಾರ್


 rajesh pande