ಆರ್ ಬಿ ಐ ೨ನೇ ದ್ವೈಮಾಸಿಕ ಹಣಕಾಸು ನೀತಿ ಪ್ರಕಟ
ಮುಂಬೈ, 8ಜೂನ್ (ಹಿ.ಸ): ಆ್ಯಂಕರ್: ಪ್ರಸಕ್ತ ಹಣಕಾಸು ವರ್ಷದ ೨ನೇ ದ್ವೈಮಾಸಿಕ ಹಣಕಾಸು ನೀತಿಯನ್ನು ಭಾರತೀಯ ರಿಸರ್ವ
ುು


ಮುಂಬೈ, 8ಜೂನ್ (ಹಿ.ಸ):

ಆ್ಯಂಕರ್:

ಪ್ರಸಕ್ತ ಹಣಕಾಸು ವರ್ಷದ ೨ನೇ ದ್ವೈಮಾಸಿಕ ಹಣಕಾಸು ನೀತಿಯನ್ನು ಭಾರತೀಯ ರಿಸರ್ವ್ ಬ್ಯಾಂಕ್ - ಆರ್ಬಿಐ ಇಂದು ಪ್ರಕಟಿಸಿದೆ. ನಿರೀಕ್ಷೆಯಂತೆ ಪ್ರಮುಖ ದರಗಳಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ.

ಮುಂಬೈನಲ್ಲಿಂದು ಸುದ್ದಿಗೊಷ್ಠಿಯಲ್ಲಿ ವಿವರ ನೀಡಿದ ಆರ್ಬಿಐ ಗವರ್ನರ್ ಶಕ್ತಿಕಾಂತ್ ದಾಸ್, ರೆಪೊ ದರ ಶೇಕಡ ೬.೫ ರ ಯಥಾಸ್ಥಿತಿಯಲ್ಲಿ ಮುಂದುವರೆಯಲಿದೆ ಎಂದರು.

ಸಾಮಾನ್ಯ ಪಾವತಿ ಸೌಲಭ್ಯ - ಎಸ್ಡಿಎಫ್ ದರ ಶೇಕಡ ೬.೨೫ ರಷ್ಟು ಹಾಗೂ ಬ್ಯಾಂಕ್ ದರಗಳು ಶೇಕಡ ೬.೭೫ರಲ್ಲಿ ಮುಂದುವರೆಯಲಿವೆ ಎಂದು ಅವರು ತಿಳಿಸಿದರು.

ದೇಶದಲ್ಲಿ ಗ್ರಾಹಕ ಹಣದುಬ್ಬರ ದರ ಮಾರ್ಚ್ ಮತ್ತು ಏಪ್ರಿಲ್ ತಿಂಗಳಲ್ಲಿ ನಿಯಂತ್ರಣ ಹಂತಕ್ಕೆ ಇಳಿಕೆಯಾಗಿದ್ದು, ೨೦೨೩-೨೪ರ ಸಾಲಿನಲ್ಲಿ ಹಣದುಬ್ಬರ ದರ ಶೇಕಡ ೪ರಲ್ಲೇ ಉಳಿಯುವ ನಿರೀಕ್ಷೆಯಿದೆ ಎಂದು ವಿವರಿಸಿದರು.

ಈ ಬಾರಿ ಮುಂಗಾರು ಸಾಮಾನ್ಯವಾಗಿ ಇರಲಿದ್ದು, ಗ್ರಾಹಕ ಹಣದುಬ್ಬರ ಪ್ರಮುಖ ಸೂಚಿ ಶೇಕಡ ೫.೧ರಷ್ಟು ಇರಲಿದೆ ಎಂದು ಅಂದಾಜು ಮಾಡಲಾಗಿದೆ

ಹಿಂದೂಸ್ತಾನ್ ಸಮಾಚಾರ್


 rajesh pande