ದೆಹಲಿ, 5 ಜೂನ್ (ಹಿ.ಸ):
ಆ್ಯಂಕರ್:
ಎಲೆಕ್ಟ್ರಿಕ್ ವಾಹನಗಳ ಬ್ಯಾಟರಿಗೆ ಲಿಥಿಯಮ್ ಅಯಾನ್ ಸೆಲ್ಗಳು ಅಗತ್ಯವಿವೆ. ವಿಶ್ವಸಂಸ್ಥೆಯ ನಿರ್ದೇಶನದ ಮೇರೆಗೆ ಭಾರತ ಕಾರ್ಬನ್ ಹೊರಸೂಸುವಿಕೆಯ ಪ್ರಮಾಣವನ್ನು ತಗ್ಗಿಸುವತ್ತ ಗಮನ ಕೊಡಬೇಕಿದೆ. ಆ ನಿಟ್ಟಿನಲ್ಲಿ ಸರ್ಕಾರ 2030ರಷ್ಟರಲ್ಲಿ ಡೀಸೆಲ್ ಮತ್ತು ಪೆಟ್ರೋಲ್ ವಾಹನಗಳ ಬಳಕೆ ಕಡಿಮೆ ಮಾಡಿ ಸಂಪೂರ್ಣ ಎಲೆಕ್ಟ್ರಿಕ್ ವಾಹನಗಳನ್ನು ಅಳವಡಿಕೆಯಾಗಬೇಕು ಹಾಗೂ ದೇಶದಲ್ಲಿ ಇಂಗಾಲ ಹೊರಸೂಸುವಿಕೆಯು ಶೇ. 50ರಷ್ಟು ಕಡಿಮೆ ಆಗಬೇಕೆಂದು ಗುರಿ ಇಟ್ಟಿದೆ.
ಈ ಹಿನ್ನೆಲೆಯಲ್ಲಿ ಎಲೆಕ್ಟ್ರಿಕ್ ವಾಹನಗಳು ಹೆಚ್ಚೆಚ್ಚು ತಯಾರಾಗುವ ನಿರೀಕ್ಷೆ ಇದೆ. ಇದರಿಂದ ಲಿಥಿಯಂ ಅಯಾನ್ ಬ್ಯಾಟರಿಗಳಿಗೆ ಬೇಡಿಕೆ ವಿಪರೀತ ಇದೆ.
ಲೆಕ್ಟ್ರಿಕ್ ವಾಹನಗಳ ತಯಾರಿಕೆಗೆ ಅವಶ್ಯವಾಗಿರುವ ಬ್ಯಾಟರಿಗೆ ಲಿಥಿಯಮ್ ಅಯಾನ್ ಸೆಲ್ ಗಳು ತಯಾರಿಕೆಗಾಗಿ ಗುಜರಾತ್ನಲ್ಲಿ ಫ್ಯಾಕ್ಟರಿ ಸ್ಥಾಪನೆಯಾಗಲಿದೆ. ಭಾರತದಲ್ಲಿ ಲಿಥಿಯಮ್ ಅಯಾನ್ ಸೆಲ್ಗಳು ತಯಾರಾಗಲಿರುವುದು ಇದೇ ಮೊದಲು. ಟಾಟಾ ಗ್ರೂಪ್ ಗುಜರಾತ್ನಲ್ಲಿ ಗೀಗಾ ಫ್ಯಾಕ್ಟರಿ ಸ್ಥಾಪನೆ ಮಾಡುತ್ತಿದೆ. ಗುಜರಾತ್ ಸರ್ಕಅರ ಮತ್ತು ಟಾಟಾ ಗ್ರೂಪ್ ಮಧ್ಯೆ ಒಡಂಬಡಿಕೆ ಆಗಿದ್ದು, ಬರೋಬ್ಬರಿ 13,000 ಕೋಟಿ ರೂಗಳಷ್ಟು ಆರಂಭಿಕ ಬಂಡವಾಳ ಹೂಡಿಕೆ ಆಗುವ ನಿರೀಕ್ಷೆ ಇದೆ.
ಹಿಂದೂಸ್ತಾನ್ ಸಮಾಚಾರ್