ಕ್ಷಿಪಣಿ ಅಗ್ನಿ-೧ ಪರೀಕ್ಷಾರ್ಥ ಪ್ರಯೋಗ
ನವದೆಹಲಿ,2 ಜೂನ್ (ಹಿ.ಸ): ಆ್ಯಂಕರ್ : ಮಧ್ಯಮ ವಲಯದ ಖಂಡಾಂತರ ಕ್ಷಿಪಣಿ ಅಗ್ನಿ-೧ ಪರೀಕ್ಷಾರ್ಥ ಪ್ರಯೋಗವನ್ನು ಒಡಿಶ
A successful training launch of a Medium-


ನವದೆಹಲಿ,2 ಜೂನ್ (ಹಿ.ಸ):

ಆ್ಯಂಕರ್ :

ಮಧ್ಯಮ ವಲಯದ ಖಂಡಾಂತರ ಕ್ಷಿಪಣಿ ಅಗ್ನಿ-೧ ಪರೀಕ್ಷಾರ್ಥ ಪ್ರಯೋಗವನ್ನು ಒಡಿಶಾದ ಎಪಿಜೆ ಅಬ್ದುಲ್ ಕಲಾಂ ದ್ವೀಪದಿಂದ ಯಶಸ್ವಿಯಾಗಿ ನಡೆಸಲಾಗಿದೆ. ಅಗ್ನಿ-೧ ಕ್ಷಿಪಣಿ ಬಂಗಾಳಕೊಲ್ಲಿಯಲ್ಲಿ ನಿರ್ದಿಷ್ಟ ಗುರಿಯನ್ನು ನಿಖರವಾಗಿ ತಲುಪಿದೆ. ಈ ಕ್ಷಿಪಣಿ ಅತ್ಯಂತ ಕರಾರುವಾಕ್ಕಾಗಿ ನಿಖರತೆಯೊಂದಿಗೆ ಎದುರಾಳಿಗಳ ವಿರುದ್ಧ ದಾಳಿ ಮಾಡಬಲ್ಲ ಸಾಮರ್ಥ್ಯ ಹೊಂದಿದೆ. ತರಬೇತಿ ಪರೀಕ್ಷೆ ವೇಳೆ ಕ್ಷಿಪಣಿ ಎಲ್ಲ ಕಾರ್ಯಾಚರಣೆ ಮತ್ತು ತಾಂತ್ರಿಕ ಮಾನದಂಡಗಳನ್ನು ಪೂರೈಸಿದೆ ಎಂದು ವರದಿಯಾಗಿದೆ. ಅಗ್ನಿ ಸರಣಿಯ ಕ್ಷಿಪಣಿಗಳಲ್ಲಿ ಅಗ್ನಿ-೧, ೭೦೦ ಕಿಲೋಮೀಟರ್ ದೂರ, ಅಗ್ನಿ-೨ ಎರಡು ಸಾವಿರ ಕಿ.ಮೀ, ಅಗ್ನಿ-೩ ಮೂರು ಸಾವಿರ ಕಿ.ಮೀ, ಅಗ್ನಿ-೪ ನಾಲ್ಕು ಸಾವಿರ ಕಿ.ಮೀ ಮತ್ತು ಅಗ್ನಿ-೫ ಐದು ಸಾವಿರ ಕಿ.ಮೀ ದೂರ ದಾಳಿ ನಡೆಸುವ ಸಾಮರ್ಥ್ಯವನ್ನು ಹೊಂದಿವೆ.

ಹಿಂದೂಸ್ತಾನ್ ಸಮಾಚಾರ್


 rajesh pande