ಮೋದಿ ಅಭಿಮಾನಿಗಳಿಗೆ ಐದು ಕಿಲೋ ಮೀಟರ್ ಪಾದಯಾತ್ರೆ
ದಾವಣಗೆರೆ,25 ಮಾರ್ಚ್ (ಹಿ.ಸ): ಆ್ಯಂಕರ್: ದಾವಣಗೆರೆ: ರಾಜ್ಯದ ವಾಣಿಜ್ಯ ನಗರಿ ಎಂದು ಕರೆಸಿಕೊಳ್ಳುವ ದಾವಣಗೆರೆಗೆ ಮಾರ
ಮೋದಿ ಅಭಿಮಾನಿಗಳಿಗೆ ಐದು ಕಿಲೋ ಮೀಟರ್ ಪಾದಯಾತ್ರೆ


ದಾವಣಗೆರೆ,25 ಮಾರ್ಚ್ (ಹಿ.ಸ):

ಆ್ಯಂಕರ್:

ದಾವಣಗೆರೆ: ರಾಜ್ಯದ ವಾಣಿಜ್ಯ ನಗರಿ ಎಂದು ಕರೆಸಿಕೊಳ್ಳುವ ದಾವಣಗೆರೆಗೆ ಮಾರ್ಚ್ 25ರಂದು ಪ್ರಧಾನಿ ನರೇಂದ್ರ ಮೋದಿ ಅವರು ಭೇಟಿ ನೀಡಲಿದ್ದು, ನಗರದ ಹೊರ ವಲಯದ ಜಿಎಂಐಟಿ ಕಾಲೇಜ್ ಪಕ್ಕದಲ್ಲಿ ನಡೆಯುವ ಮೋದಿ ಮಹಾಸಂಗಮ ಸಮಾವೇಶ ಕಾರ್ಯಕ್ರಮಕ್ಕೆ ಸಿದ್ಧತೆಗಳು ಭರ್ಜರಿಯಾಗಿ ನಡೆದಿವೆ. ಆದರೆ ಈ ಕಾರ್ಯಕ್ರಮಕ್ಕೆ ಆಗಮಿಸುವ ಜನರು ಹಾಗೂ ಅಭಿಮಾನಿಗಳಿಗೆ ಐದು ಕಿಲೋ ಮೀಟರ್ ಪಾದಯಾತ್ರೆ ಮಾಡುವುದು ಅನಿವಾರ್ಯವಾಗಿದೆ. ವೇದಿಕೆಯಿಂದ 4ರಿಂದ 5 ಕಿಲೋ ಮೀಟರ್ ದೂರದಲ್ಲಿ ವಾಹನ ನಿಲುಗಡೆಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಇಲ್ಲಿಂದ ಸಮಾವೇಶದ ಸ್ಥಳಕ್ಕೆ ನಡೆದುಕೊಂಡೇ ಬರಬೇಕಾಗಿದೆ.

ಹಿಂದೂಸ್ತಾನ್ ಸಮಾಚಾರ್


 rajesh pande