ನಾಳೆ 'ಮನ್ ಕಿ ಬಾತ್' ಕಾರ್ಯಕ್ರಮ
ನವದೆಹಲಿ,25ಮಾರ್ಚ್ (ಹಿ.ಸ): ಆ್ಯಂಕರ್ : ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ನಾಳೆ ಬೆಳಗ್ಗೆ ೧೧ ಗಂಟೆಗೆ ಆಕಾಶವಾಣಿಯ
ನಾಳೆ  'ಮನ್ ಕಿ ಬಾತ್' ಕಾರ್ಯಕ್ರಮ


ನವದೆಹಲಿ,25ಮಾರ್ಚ್ (ಹಿ.ಸ):

ಆ್ಯಂಕರ್ :

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ನಾಳೆ ಬೆಳಗ್ಗೆ ೧೧ ಗಂಟೆಗೆ ಆಕಾಶವಾಣಿಯ ‘ಮನ್ ಕಿ ಬಾತ್’ ಕಾರ್ಯಕ್ರಮದ ಮೂಲಕ ತಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಲಿದ್ದಾರೆ. ಇದು ಮನ್ ಕಿ ಬಾತ್ ಸರಣಿಯ ೯೯ನೇ ಆವೃತ್ತಿಯಾಗಿದೆ. ಆಕಾಶವಾಣಿ ಮತ್ತು ದೂರದರ್ಶನದ ಎಲ್ಲ ವಾಹಿನಿಗಳು, ಎಐಆರ್ ನ್ಯೂಸ್ ಜಾಲತಾಣ, ನ್ಯೂಸ್ ಆನ್ ಏರ್ ಮೊಬೈಲ್ ಆಪ್ನಲ್ಲಿ ಕಾರ್ಯಕ್ರಮ ಬಿತ್ತರಗೊಳ್ಳಲಿದೆ. ಅಲ್ಲದೆ ಎಐಆರ್ ನ್ಯೂಸ್, ಡಿಡಿ ನ್ಯೂಸ್, ಪ್ರಧಾನಮಂತ್ರಿ ಕಾರ್ಯಾಲಯ ಹಾಗೂ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಯೂಟ್ಯೂಬ್ ವಾಹಿನಿಗಳಲ್ಲಿ ನೇರ ಪ್ರಸಾರವಾಗಲಿದೆ. ಹಿಂದಿ ಅವತರಣಿಕೆಯ ನಂತರ ಪ್ರಾದೇಶಿಕ ಭಾಷೆಗಳಲ್ಲೂ ಆಕಾಶವಾಣಿ ಈ ಕಾರ್ಯಕ್ರಮವನ್ನು ಪ್ರಸಾರ ಮಾಡಲಿದೆ.

ಹಿಂದೂಸ್ತಾನ್ ಸಮಾಚಾರ್


 rajesh pande