ಎಐಎಸ್ ಹೆಸರಿನ ಮೊಬೈಲ್ ಆಪ್ ಬಿಡುಗಡೆ
ನವದೆಹಲಿ,23 ಮಾರ್ಚ್ (ಹಿ.ಸ): ಆ್ಯಂಕರ್: ಆದಾಯ ತೆರಿಗೆ ಇಲಾಖೆ ತೆರಿಗೆ ಪಾವತಿದಾರರಿಗಾಗಿ ಎಐಎಸ್ ಹೆಸರಿನ ಮೊಬೈಲ್ ಆಪ್
come Tax Department has launched a fr


ನವದೆಹಲಿ,23 ಮಾರ್ಚ್ (ಹಿ.ಸ):

ಆ್ಯಂಕರ್:

ಆದಾಯ ತೆರಿಗೆ ಇಲಾಖೆ ತೆರಿಗೆ ಪಾವತಿದಾರರಿಗಾಗಿ ಎಐಎಸ್ ಹೆಸರಿನ ಮೊಬೈಲ್ ಆಪ್ನ್ನು ಬಿಡುಗಡೆ ಮಾಡಿದೆ. ಇದರಲ್ಲಿ ತೆರಿಗೆ ಪಾವತಿದಾರರು ವಾರ್ಷಿಕ ಮಾಹಿತಿ ವ್ಯವಸ್ಥೆ - (ಎಐಎಸ್) ಮತ್ತು ತೆರಿಗೆದಾರರ ಮಾಹಿತಿ ವಿವರಣೆಯನ್ನು ಪಡೆಯಬಹುದಾಗಿದೆ. ಟಿಡಿಎಸ್ ಕಡಿತ, ಬಡ್ಡಿ ಪಾವತಿ, ಷೇರು ವಹಿವಾಟು, ತೆರಿಗೆ ಪಾವತಿ, ಆದಾಯ ತೆರಿಗೆ ಮರುಪಾವತಿ ಮತ್ತು ಜಿಎಸ್ಟಿ ದತ್ತಾಂಶ ಸೇರಿದಂತೆ ಹಲವು ಮಾಹಿತಿಯನ್ನು ಈ ಆಪ್ ಒಳಗೊಂಡಿದೆ. ಅಲ್ಲದೇ ತೆರಿಗೆ ಪಾವತಿದಾರರು ತಮ್ಮ ಅನಿಸಿಕೆಗಳನ್ನು ದಾಖಲಿಸುವ ವ್ಯವಸ್ಥೆಯೂ ಇದರಲ್ಲಿ ಸೇರಿದೆ.

ಹಿಂದೂಸ್ತಾನ್ ಸಮಾಚಾರ್


 rajesh pande