ಡಿಎಆರ್ ಪೇದೆ ಅನುಮಾನಾಸ್ಪದ ಸಾವು : ಎರಡನೇ ಪತ್ನಿಯ ವಿಚಾರಣೆ
ಬಳ್ಳಾರಿ, 23 ಮಾರ್ಚ್ (ಹಿ.ಸ): ಆ್ಯಂಕರ್: ಬಳ್ಳಾರಿ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ (ಡಿಎಆರ್) ಪೆÇಲೀಸ್ ಪೇದೆ ಪಿ. ಜಾಫ
ಡಿಎಆರ್ ಪೇದೆ ಅನುಮಾನಾಸ್ಪದ ಸಾವು : ಎರಡನೇ ಪತ್ನಿಯ ವಿಚಾರಣೆ


ಡಿಎಆರ್ ಪೇದೆ ಅನುಮಾನಾಸ್ಪದ ಸಾವು : ಎರಡನೇ ಪತ್ನಿಯ ವಿಚಾರಣೆ


ಬಳ್ಳಾರಿ, 23 ಮಾರ್ಚ್ (ಹಿ.ಸ):

ಆ್ಯಂಕರ್: ಬಳ್ಳಾರಿ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ (ಡಿಎಆರ್) ಪೆÇಲೀಸ್ ಪೇದೆ ಪಿ. ಜಾಫರ್ ಸಾಹೀಬ್ ಮನೆಯಲ್ಲಿದ್ದಾಗಲೇ ಮಾರಕಾಸ್ತ್ರಗಳಿಂದ ಹಲ್ಲೆಯಾಗಿ, ಅನುಮಾನಾಸ್ಪದವಾಗಿ ಗುರುವಾರ ಮೃತಪಟ್ಟಿದ್ದಾನೆ.

ಪೊಲೀಸರು ತಿಳಿಸಿದ ಪ್ರಕಾರ, ಆರೋಪಿ ಹನುಮಕ್ಕಳು ಖಾಸಗಿ ನರ್ಸಿಂಗ್ ಹೋಂನಲ್ಲಿ ನರ್ಸ್ ಕೆಲಸ ಮಾಡುತ್ತಿದ್ದು, ಪಿ. ಜಾಫರ್ ಸಾಹೀಬ್ನ ಎರಡನೇ ಹೆಂಡತಿ. ಇವರಿಬ್ಬರಿಗೂ ಒಂದು ಕೂಸು ಇದೆ. ಮೃತನ ಎರಡನೇ ಪತ್ನಿ ನರ್ಸ್ ಹನುಮಕ್ಕಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದ್ದಾರೆ.

ಹೊಸಪೇಟೆ ತಾಲೂಕಿನ ಚಿನ್ನಾಪುರ ಗ್ರಾಮದ ಪಿ. ಜಾಫರ್ ಸಾಹೀಬ್ 2008ರಲ್ಲಿ ಡಿಎಆರ್ ಪೇದೆಯಾಗಿ ಗೃಹ ಇಲಾಖೆಯ ಬಳ್ಳಾರಿ ಜಿಲ್ಲಾ ಘಟಕಕ್ಕೆ ನೇಮಕಗೊಂಡಿದ್ದ. ಚಿನ್ನಾಪುರ ಗ್ರಾಮದ ನವೀನ್ ತಾಜ್ಳನ್ನು ವಿವಾಹವಾಗಿ, ಇಬ್ಬರು ಮಕ್ಕಳ ತಂದೆಯೂ ಆಗಿದ್ದನು. ಖಾಸಗಿ ಆಸ್ಪತ್ರೆಯಲ್ಲಿ ನರ್ಸ್ ಆಗಿದ್ದ ಹನುಮಕ್ಕಳ ಜೊತೆ ಸಂಬಂಧ ಬೆಳೆದ ಕಾರಣ ಮೊದಲ ಹೆಂಡತಿಯನ್ನು ಆಕೆಯ ತವರುಮನೆಯಲ್ಲಿ ಐದು ವರ್ಷಗಳ ಹಿಂದೆ ಬಿಟ್ಟು ಹನುಮಕ್ಕಳನ್ನು ವಿವಾಹವಾಗಿ ಡಿಎಆರ್ ಕ್ವಾಟ್ರಸ್ನಲ್ಲಿ ನೆಲೆಸಿದ್ದನು.

ಪಿ. ಜಾಫರ್ ಸಾಹೀಬ್ನ ಮೊದಲ ಹೆಂಡತಿ ನವೀನ್ ತಾಜ್ ವಿವಾಹ ವಿಚ್ಛೇಧನಕ್ಕೆ ಅರ್ಜಿ ಸಲ್ಲಿಸಿದಾಗ ಪಿ. ಜಾಫರ್ ನವೀನ್ ತಾಜ್ಳ ಜೊತೆ ಸಂಬಂಧ ಸುಧಾರಣೆ ಮಾಡಿಕೊಂಡಿದ್ದನು. ಅಲ್ಲದೇ, ಇಬ್ಬರೂ ಪರಸ್ಪರ ಭೇಟಿ ಆಗುತ್ತಿದ್ದರು. ಈ ವಿಚಾರ ತಿಳಿದ ಹನುಮಕ್ಕ ಪೇದೆಯ ಜೊತೆ ಸದಾಕಾಲ ಜಗಳವಾಡುತ್ತಿದ್ದಳು ಎನ್ನಲಾಗಿದೆ.

ಪಿ. ಜಾಫರ್ ಸಾಹೀಬ್ಗೆ ಪ್ರಜ್ಞೆ ತಪ್ಪಿಸಿ, ರಾಡ್ನಿಂದ ಹಲ್ಲೆ ನಡೆಸಿ ಕೊಲೆ ಮಾಡಲಾಗಿದೆ. ತೀವ್ರ ರಕ್ತಸ್ರಾವದಿಂದ ನರಳುತ್ತಿದ್ದ ಆತನನ್ನು ವಿಮ್ಸ್ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದ್ದರೂ ಚಿಕಿತ್ಸೆ ಫಲ ನೀಡದೇ ಮೃತಪಟ್ಟಿದ್ದಾನೆ. ಹಲ್ಲೆಯಲ್ಲಿ ಮೃತನ ಎರಡನೇ ಪತ್ನಿ ಹನುಮಕ್ಕ ಪಾಲ್ಗೊಂಡಿದ್ದಾಳೆ ಎಂದು ಪೊಲೀಸರು ಶಂಕಿಸಿದ್ದಾರೆ.

ಗಾಂಧಿನಗರ ಪೆÇಲೀಸರು ಪ್ರಕರಣ ದಾಖಲಾಗಿದೆ, ತನಿಖೆ ನಡೆದಿದೆ.


 rajesh pande