'ಸಿನಿಮಾ ಎಂದಿಗೂ ಜೀವಂತ'
ಬೆಂಗಳೂರು,23 ಮಾರ್ಚ್ (ಹಿ.ಸ): ಆ್ಯಂಕರ್- 14ನೇ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಇಂದು (ಮಾರ್ಚ್ 23)
ಕಪ


ಬೆಂಗಳೂರು,23 ಮಾರ್ಚ್ (ಹಿ.ಸ):

ಆ್ಯಂಕರ್-

14ನೇ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಇಂದು (ಮಾರ್ಚ್ 23) ಚಾಲನೆ ದೊರೆತಿದೆ. ವಿಧಾನಸೌಧದ ಮುಂಭಾಗ ನಡೆದ ಕಾರ್ಯಕ್ರಮದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ , ಸಚಿವ ಆರ್.ಅಶೋಕ್, ಕತೆಗಾರ, ರಾಜ್ಯಸಭಾ ಸದಸ್ಯ ವಿಜಯೇಂದ್ರ ಪ್ರಸಾದ್, ಹಿರಿಯ ನಿರ್ದೇಶಕ ಗೋವಿಂದ ನಿಹಲಾನಿ, ನಟಿ ಸಪ್ತಮಿ ಗೌಡ, ಹರ್ಷಿಕಾ ಪೂಣಚ್ಚ ನಟ ಅಭಿಷೇಕ್ ಅಂಬರೀಶ್ ಇನ್ನಿತರೆ ಗಣ್ಯರು ಸೇರಿ ಚಲನಚಿತ್ರೋತ್ಸವಕ್ಕೆ ಚಾಲನೆ ನೀಡಿದರು.

ಬೆಂಗಳೂರು ಚಲನಚಿತ್ರೋತ್ಸವವು ಇಂದಿನಿಂದ ಮಾರ್ಚ್ 30 ರವರೆಗೆ ನಡೆಯಲಿದೆ. ಭಾರತ ಸೇರಿದಂತೆ ಹಲವು ದೇಶಗಳ ಸುಮಾರು 200ಕ್ಕೂ ಹೆಚ್ಚು ಸಿನಿಮಾಗಳು ಸಿನಿಮೋತ್ಸವದಲ್ಲಿ ಪ್ರದರ್ಶಿತಗೊಳ್ಳಲಿವೆ. ಸಿನಿಮಾಗಳ ಪ್ರದರ್ಶನವು ಒರಾಯಿನ್ ಮಾಲ್, ಸುಚಿತ್ರ ಫಿಲಂ ಸಿಟಿ, ಕನ್ನಡ ಕಲಾವಿದರ ಸಂಘದಲ್ಲಿ ಪ್ರದರ್ಶನಗೊಳ್ಳಲಿವೆ. ಉದ್ಘಾಟನೆ ಬಳಿಕ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಬೆಂಗಳೂರು ಇಂದು ವಿಶ್ವಮಟ್ಟದಲ್ಲಿ ಗುರುತು ಪಡೆದ ನಗರವಾಗಿದೆ. ಹಲವು ವಿಶ್ವವಿಖ್ಯಾತ ಸಂಸ್ಥೆಗಳು ಇಲ್ಲಿವೆ, ಕೆಲವೇ ವರ್ಷಗಳಲ್ಲಿ ದೇಶದ ಆರ್ಥಿಕ ರಾಜಧಾನಿಯಾಗಲಿದೆ ಹಾಗಿದ್ದಮೇಲೆ ವಿಶ್ವ ಚಲನಚಿತ್ರೋತ್ಸವ ಆಯೋಜಿಸಲು ಸೂಕ್ತ ನಗರವೆಂದರೆ ಅದು ಬೆಂಗಳೂರು ಎಂದರು.

ಸಿನಿಮಾಕ್ಕೆ ಬಹಳ ದೊಡ್ಡ ಇತಿಹಾಸವಿದೆ. ಸಿನಿಮಾ ನಮ್ಮೆಲ್ಲರ ಬದುಕಿನ ಭಾಗವೂ ಆಗದೆ. ಇತ್ತೀಚೆಗಿನ ದಿನಗಳಲ್ಲಿ ಸಿನಿಮಾ ಸಾಕಷ್ಟು ಮುಂದುವರೆದಿದೆ. ಮೇಕಿಂಗ್ ಬದಲಾಗಿದೆ. ಸಿನಿಮಾ ಕಲೆ ಬದಲಾಗಿದೆ. ಚಿತ್ರಮಂದಿರಗಳು ಬದಲಾಗಿವೆ. ವೀಕ್ಷಕರು ಬದಲಾಗಿದ್ದಾರೆ. ನಾವು ಸಿನಿಮಾ ನೋಡಿದ, ಅರ್ಥ ಮಾಡಿಕೊಂಡ ರೀತಿಗೂ ಇಂದಿನ ಮಕ್ಕಳು ನೋಡುತ್ತಿರುವ ರೀತಿಗೂ ಬಹಳ ವ್ಯತ್ಯಾಸವಿದೆ. ಬಹಳ ವೇಗವಾಗಿ ಸಿನಿಮಾ ಬದಲಾಗುತ್ತಿದೆ. ಆದರೆ ವೇಗಕ್ಕೆ ಯಾರು ಹೊಂದಿಕೊಳ್ಳುತ್ತಾರೊ ಅವರು ಯಶಸ್ವಿಯಾಗುತ್ತಾರೆ. ಕನ್ನಡ ಸಿನಿಮಾಗಳು ಸಹ ವೇಗಕ್ಕೆ ಹೊಂದಿಕೊಳ್ಳುತ್ತಿವೆ. ಅಂತರಾಷ್ಟ್ರೀಯ ಗುಣಮಟ್ಟದ ತಂತ್ರಜ್ಞಾನವನ್ನು ಬಳಕೆ ಮಾಡುತ್ತಿದ್ದಾರೆ ಅದರ ಜೊತೆಗೆ ಕಲಾವಿದರ ಕಲೆ ಕೌಶಲ್ಯ, ವಸ್ತುನಿಷ್ಠ ಕತೆಗಳಿಂದ ಗಮನ ಸೆಳೆಯುತ್ತಿದ್ದಾರೆ. ಕೆಜಿಎಫ್-ಕೆಜಿಎಫ್ 2 ಸಿನಿಮಾಗಳು ತಂತ್ರಜ್ಞಾನ ಮೂಲಕ ಗಮನ ಸೆಳೆದರೆ ಕಾಂತಾರ ಸಿನಿಮಾವು ಸ್ಥಳೀಯ ಕತೆ, ಸ್ಥಳೀಯ ಆಚರಣೆಯ ಕತೆ ಹೇಳಿ ಅಂತರಾಷ್ಟ್ರೀಯ ಮಟ್ಟಕ್ಕೆ ಕನ್ನಡ ಸಿನಿಮಾವನ್ನು ತೆಗೆದುಕೊಂಡು ಹೋಗಿದೆ. ಆ ಸಿನಿಮಾದ ಎಲ್ಲರಿಗೂ ಅಭಿನಂದನೆ ತಿಳಿಸುತ್ತೇನೆ ಎಂದರು

ಹಿಂದೂಸ್ತಾನ್ ಸಮಾಚಾರ್


 rajesh pande