ಕಾಫಿ ಬೆಳೆಗಾರರ ಪಂಪ್ ಸೆಟ್ ಗೆ ಉಚಿತ ವಿದ್ಯುತ್: ಬೊಮ್ಮಾಯಿ ಘೋಷಣೆ
ಮಡಿಕೇರಿ, 18 ಮಾರ್ಚ್ (ಹಿ.ಸ): ಆ್ಯಂಕರ್ : ಕೊಡಗು: ಕಾಫಿ ಬೆಳೆಗಾರರ 10ಹೆಚ್ ಪಿ ವರೆಗಿನ ಪಂಪ್ ಸೆಟ್ಗೆ ಉಚಿತ ವಿದ್ಯುತ್
333


ಮಡಿಕೇರಿ, 18 ಮಾರ್ಚ್ (ಹಿ.ಸ):

ಆ್ಯಂಕರ್ :

ಕೊಡಗು: ಕಾಫಿ ಬೆಳೆಗಾರರ 10ಹೆಚ್ ಪಿ ವರೆಗಿನ ಪಂಪ್ ಸೆಟ್ಗೆ ಉಚಿತ ವಿದ್ಯುತ್ ನೀಡುವುದಾಗಿ ಸಿಎಂ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದ್ದಾರೆ. ಮಡಿಕೇರಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು. ಬಳಿಕ ಫಲಾನುಭವಿಗಳಸಮ್ಮೇಳನದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಹಳೆ ಬಾಕಿ ಗಣನೆಗೆ ತೆಗೆದುಕೊಳ್ಳದೆ ಉಚಿತ ವಿದ್ಯುತ್ ಪೂರೈಸುವಂತೆ ಅಧಿಕಾರಿಗಳಿಗೆ ಸಿಎಂ ಬೊಮ್ಮಾಯಿ ಮೌಖಿಕ ಆದೇಶ ನೀಡಿದ್ದಾರೆ.

ಶಾಲೆಗೆ ತೆರಳುವ ಹೆಣ್ಣುಮಕ್ಕಳಿಗಾಗಿ ಉಚಿತ ಬಸ್ ಪಾಸ್ ಒದಗಿಸಲಾಗುತ್ತಿದೆ. 8 ಲಕ್ಷ ವಿದ್ಯಾರ್ಥಿನಿಯರಿಗೆ ಇದರಿಂದ ಲಾಭವಾಗಿದೆ. ಸಾಮಾಜಿಕ ನ್ಯಾಯ ಹೆಚ್ಚಿಸಲು ಕ್ರಮಕೈಗೊಳ್ಳಲಾಗಿದೆ. ಹಾಗಾಗಿ ಜೇನು ಗೂಡಿಗೆ ಕೈ ಹಾಕುವ ಕೆಲಸಮಾಡಿದ್ದೇನೆ. ಬರೇ ಭಾಷಣದಲ್ಲಿ ಸಾಮಾಜಿಕನ್ಯಾಯ ಸಾಧ್ಯವಿಲ್ಲ. ಕೆಲವರನ್ನ ಕೆಲವು ಸಮಯ ಮೋಸ ಮಾಡಬಹುದು. ಆದರೆ ಜನರನ್ನ ಎಲ್ಲಾ ಸಮಯದಲ್ಲಿ ಮೋಸ ಮಾಡಲು ಸಾಧ್ಯವಿಲ್ಲ. ಕಾಂಗ್ರೆಸ್ಗೆ ಅಧಿಕಾರವಿದ್ದಾಗ ಯಾಕೆ ಸೌಲಭ್ಯ ನೀಡಲಿಲ್ಲ. ಅದು ಗ್ಯಾರಂಟಿ ಕಾರ್ಡ್ ಅಲ್ಲ, ಅದು ಬೋಗಸ್ ಕಾರ್ಡ್ ಎಂದು ಸಿಎಂ ಬೊಮ್ಮಾಯಿ ಟೀಕೆ ಮಾಡಿದರು.

ಹಿಂದೂಸ್ತಾನ್ ಸಮಾಚಾರ್


 rajesh pande