ಉತ್ತರಾಖಂಡದಲ್ಲಿ ಜಿ-೨೦ ಶೃಂಗಸಭೆ
ರಾಮನಗರ್, 18 ಮಾರ್ಚ್ (ಹಿ.ಸ): ಆ್ಯಂಕರ್ : ಉತ್ತರಾಖಂಡದ, ರಾಮನಗರ್ನಲ್ಲಿ ಈ ತಿಂಗಳ ೨೮ ರಿಂದ ೩೦ ರವರೆಗೆ ಜಿ-೨೦ ಶೃಂಗಸ
ೋೇೇ


ರಾಮನಗರ್, 18 ಮಾರ್ಚ್ (ಹಿ.ಸ):

ಆ್ಯಂಕರ್ :

ಉತ್ತರಾಖಂಡದ, ರಾಮನಗರ್ನಲ್ಲಿ ಈ ತಿಂಗಳ ೨೮ ರಿಂದ ೩೦ ರವರೆಗೆ ಜಿ-೨೦ ಶೃಂಗಸಭೆ ನಡೆಯಲಿದ್ದು, ಅಮೆರಿಕ , ಜಪಾನ್ ಸೇರಿದಂತೆ ೧೦೦ ದೇಶಗಳ ಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸಲಿದ್ದಾರೆ. ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಶೃಂಗಸಭೆಯ ಸಿದ್ದತೆಗಳನ್ನು ಪರಿಶೀಲಿಸಿದರು. ಉತ್ತರಾಖಂಡದ ಶ್ರೀಮಂತ ಸಾಂಸ್ಕೃತಿಕ ಪರಂಪರೆ, ಪ್ರವಾಸೋದ್ಯಮ ಮತ್ತು ಜೀವಿವೈವಿದ್ಯತೆಯನ್ನು ವಿಶ್ವಕ್ಕೆ ಪರಿಚಯಿಸಲು ಜಿ-೨೦ ಶೃಂಗಸಭೆ ಉತ್ತಮ ಅವಕಾಶವಾಗಿದೆ ಎಂದು ಅವರು ಈ ಸಂದರ್ಭದಲ್ಲಿ ಹೇಳಿದ್ದಾರೆ. ಸಕಾಲದಲ್ಲಿ ಎಲ್ಲ ಏರ್ಪಾಡುಗಳನ್ನು ಪೂರ್ಣಗೊಳಿಸುವಂತೆ ಅವರು ಸಂಬಂಧಿತ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್


 rajesh pande