ಕೊಲೆ ಆರೋಪಿಗಳಿಗೆ ನೆರವು: ಪತ್ರಕರ್ತ ಮೆಹಬೂಬ್ ಮುನವಳ್ಳಿ ಬಂಧನ
ದಾವಣಗೆರೆ, 18 ಮಾರ್ಚ್ (ಹಿ.ಸ): ಆ್ಯಂಕರ್ : ಶಿವಮೊಗ್ಗದ ರೌಡಿ ಶೀಟರ್ ಮದಿ ಅಣ್ಣಿ ಹತ್ಯೆ ಪ್ರಕರಣದೊಂದಿಗೆ ತಳಕು ಹಾಕಿಕ
ಕೊಲೆ ಆರೋಪಿಗಳಿಗೆ ನೆರವು: ಪತ್ರಕರ್ತ ಮೆಹಬೂಬ್ ಮುನವಳ್ಳಿ ಬಂಧನ


ದಾವಣಗೆರೆ, 18 ಮಾರ್ಚ್ (ಹಿ.ಸ):

ಆ್ಯಂಕರ್ : ಶಿವಮೊಗ್ಗದ ರೌಡಿ ಶೀಟರ್ ಮದಿ ಅಣ್ಣಿ ಹತ್ಯೆ ಪ್ರಕರಣದೊಂದಿಗೆ ತಳಕು ಹಾಕಿಕೊಂಡಿರುವ ಚೀಲೂರು ಬಳಿ ಕಳೆದ ಬುಧವಾರ ನಡೆದಿದ್ದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಗಳಿಗೆ ನೆರವಾಗಿರುವ ಆರೋಪದಲ್ಲಿ ಧಾರವಾಡದ ಪತ್ರಕರ್ತರೊಬ್ಬರನ್ನು ನ್ಯಾಮತಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಧಾರವಾಡದ ಖಾಸಗಿ ಸುದ್ದಿವಾಹಿನಿಯ ವರದಿಗಾರ ಮೆಹಬೂಬ್ ಮುನವಳ್ಳಿಯನ್ನು ನ್ಯಾಮತಿ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಹಂದಿ ಅಣ್ಣಿ ಕೊಲೆ ಪ್ರಕರಣದ ಇಬ್ಬರು ಆರೋಪಿಗಳ ಮೇಲೆ ಬುಧವಾರ ಚೀಲೂರು ಬಳಿ ನಡೆದ ಘಟನೆಗೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಗುರುವಾರ ಹಾವೇರಿ ತಾಲ್ಲೂಕು ಶಿಗ್ಗಾಂವ್ ನಲ್ಲಿ ಬಂಧಿಸಿದ್ದರು. ಮೆಹಬೂಬ್ ಮುನವಳ್ಳಿಯವರು ಪ್ರಕರಣದ ಇನ್ನಿತರ ಪ್ರಮುಖ ಆರೋಪಿಗಳ ಬಗ್ಗೆ ಮಾಹಿತಿ ತಿಳಿದಿದ್ದರೂ ತನಿಖೆಗೆ ಅಸಹಕಾರ ನೀಡುವ ಮೂಲಕ ಆರೋಪಿಗಳು ತಪ್ಪಿಸಿಕೊಳ್ಳಲು ನೆರವು ನೀಡಿದ್ದಾರೆ ಎಂಬ ಆರೋಪದ ಮೇಲೆ ಬಂಧಿಸಲಾಗಿದೆ.

ಚೀಲೂರು ಬಳಿ ನಡೆದ ಆಂಜನೇಯ ಹತ್ಯೆ ಮತ್ತು ಮಧು ಮೇಲಿನ ಹಲ್ಲೆ ಪ್ರಕರಣದಲ್ಲಿ ಸುನಿಲ್, ಅಭಿಲಾಷ್, ವೆಂಕಟೇಶ್, ಪವನ್ ಎಂಬ ನಾಲ್ವರನ್ನು ಬಂಧಿಸಲಾಗಿದ್ದು, ಮಿಕ್ಕವರು ತಲೆಮರೆಸಿಕೊಂಡಿದ್ದಾರೆ.

ಹಿಂದೂಸ್ತಾನ್ ಸಮಾಚಾರ್


 rajesh pande