ಸಚಿವ ಪ್ರಹ್ಲಾದ್ ಜೋಶಿ ಹೆಲಿಕಾಪ್ಟರ್ ಲ್ಯಾಂಡಿಂಗ್ ವೇಳೆ ಅವಘಡ
ವಿಜಯಪುರ, 18 ಮಾರ್ಚ್ (ಹಿ.ಸ): ಆ್ಯಂಕರ್ :: ಕೆಲ ದಿನಗಳ ಹಿಂದೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಕಲಬುರಗಿಯಲ್ಲಿ ನಡೆದ ವ
ಿಿ


ವಿಜಯಪುರ, 18 ಮಾರ್ಚ್ (ಹಿ.ಸ):

ಆ್ಯಂಕರ್ :: ಕೆಲ ದಿನಗಳ ಹಿಂದೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಕಲಬುರಗಿಯಲ್ಲಿ ನಡೆದ ವಿಜಯ ಸಂಕಲ್ಪ ಯಾತ್ರೆಯಲ್ಲಿ ಭಾಗಿಯಾಗಲು ಬೆಂಗಳೂರಿನಿಂದ ಹೆಲಿಕಾಪ್ಟರ್ ಮೂಲಕ ಆಗಮಿಸಿದ್ದಾಗ ಪ್ಲಾಸ್ಟಿಕ್ ಚೀಲಗಳು ಹಾರಿ ಬಂದು ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ಇದೇ ರೀತಿಯ ಮತ್ತೊಂದು ಘಟನೆ ವಿಜಯಪುರದಲ್ಲಿ ಸಂಭವಿಸಿದೆ. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಲ್ಯಾಂಡಿಂಗ್ ವೇಳೆ ಅವಘಡ ಸಂಭವಿಸಿದೆ. ಹೆಲಿಕಾಪ್ಟರ್ ಚಕ್ರದ ಗಾಳಿಯ ರಭಸಕ್ಕೆ ಬ್ಯಾರಿಕೇಡ್ ನೆಲಕ್ಕುರುಳಿದೆ.

ವಿಜಯಪುರ ನಗರದ ಸೈನಿಕ ಶಾಲಾ ಆವರಣದಲ್ಲಿ ನಡೆಯುತ್ತಿರುವ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿವಿಧ ಯೋಜನೆಗಳ ಫಲಾನುಭವಿಗಳ ಸಮಾವೇಶಕ್ಕೆಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೆಲಿಕಾಪ್ಟರ್ ಮೂಲಕ ಜಿಲ್ಲೆಗೆ ಆಗಮಿಸಿದ್ದಾರೆ. ಆದ್ರೆ ಶಾಲಾ ಆವರಣದಲ್ಲಿ ಜೋಶಿ ಅವರ ಹೆಲಿಕಾಪ್ಟರ್ ಲ್ಯಾಂಡಿಂಗ್ ವೇಳೆ ಅವಘಡ ಸಂಭವಿಸಿದೆ. ಹೆಲಿಕಾಪ್ಟರ್ ಚಕ್ರದ ಗಾಳಿಯ ರಭಸಕ್ಕೆ ಬ್ಯಾರಿಕೇಡ್ ನೆಲಕ್ಕುರುಳಿದೆ. ನೆಲಕ್ಕೆ ಬಿದ್ದ ಬ್ಯಾರಿಕೇಡ್ಗಳನ್ನು ತಕ್ಷಣ ಪೊಲೀಸರು ಸರಿಪಡಿಸಿದ್ದಾರೆ. ಅದೃಷ್ಟವಶಾತ್ ಹೆಲಿಪ್ಯಾಡ್ನಲ್ಲಿ ಯಾವುದೇ ಅವಘಡ ಸಂಭವಿಸಿಲ್ಲ. ಪ್ರಹ್ಲಾದ್ ಜೋಶಿ ಹೆಲಿಪ್ಯಾಡ್ನಿಂದ ಪ್ರವಾಸಿ ಮಂದಿರದತ್ತ ತೆರಳಿದ್ದಾರೆ.

ಹಿಂದೂಸ್ತಾನ್ ಸಮಾಚಾರ್


 rajesh pande