ಮಳೆಯ ನಡುವೆ ಜೆಡಿಎಸ್ ಅಭ್ಯರ್ಥಿಯ ಪ್ರಚಾರ
ಕೋಲಾರ, ೧೮ ಮಾರ್ಚ್ (ಹಿ.ಸ) : ಆ್ಯಂಕರ್ : ಮಳೆಯ ನಡುವೆಯೂ ಜೆಡಿಎಸ್ ಪಕ್ಷದ ಮೇಲೆ ನೀವು ತೋರುತ್ತಿರುವ ಪ್ರೀತಿ, ವಿಶ್ವಾ
ಕೋಲಾರ ತಾಲ್ಲೂಕಿನ ಮುದುವತ್ತಿಯಲ್ಲಿ ನಡೆದ ಜೆಡಿಎಸ್ ಪ್ರಚಾರ ಸಭೆಯಲ್ಲಿ ವಿಧಾನಪರಿಷತ್ ಸದಸ್ಯ ಗೋವಿಂದರಾಜು ಮಾತನಾಡಿದರು.


ಕೋಲಾರ, ೧೮ ಮಾರ್ಚ್ (ಹಿ.ಸ) :

ಆ್ಯಂಕರ್ : ಮಳೆಯ ನಡುವೆಯೂ ಜೆಡಿಎಸ್ ಪಕ್ಷದ ಮೇಲೆ ನೀವು ತೋರುತ್ತಿರುವ ಪ್ರೀತಿ, ವಿಶ್ವಾಸದ ನಂಬಿಕೆಯನ್ನು ಮುಂದಿನ ದಿನಗಳಲ್ಲಿ ಗ್ರಾಮದ ಸರ್ವಾಂಗೀಣ ಅಭಿವೃದ್ಧಿಯ ಮೂಲಕ ತೀರಿಸುತ್ತೇನೆ ಎಂದು ವಿಧಾನ ಪರಿಷತ್ ಸದಸ್ಯ ಇಂಚರ ಗೋವಿಂದರಾಜು ತಿಳಿಸಿದರು.

ಕೋಲಾರ ತಾಲೂಕಿನ ಮುದುವತ್ತಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಚಿಕ್ಕನಹಳ್ಳಿ ಗ್ರಾಮದಲ್ಲಿ ಶುಕ್ರವಾರ ರಾತ್ರಿ ಜೆಡಿಎಸ್ ಪಕ್ಷದ ಬೂತ್ ಮಟ್ಟದ ಸಂಘಟನಾ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಕೈಗೊಂಡರಿರುವ ಪಂಚರತ್ನ ಯೋಜನೆಯು ಇಡೀ ರಾಜ್ಯದಲ್ಲಿ ಅಭೂತಪೂರ್ವ ಬೆಂಬಲ ವ್ಯಕ್ತವಾಗುತ್ತಾ ಇದ್ದು ಹೋದ ಕಡೆಯಲ್ಲೂ ಜೆಡಿಎಸ್ ಪಕ್ಷವನ್ನು ಬೆಂಬಲಿಸಿದ್ದಾರೆ ಈ ಬಾರಿಯ ಚುನಾವಣೆಯಲ್ಲಿ ಜೆಡಿಎಸ್ ಪಕ್ಷವು ಅಧಿಕಾರಕ್ಕೆ ಬರುವುದು ಗ್ಯಾರಂಟಿಯಾಗಿದ್ದು ಕುಮಾರಸ್ವಾಮಿ ರಾಜ್ಯದ ಸಿಎಂ ಆಗಿ ಜನತೆ ಇನ್ನೂ ಕೆಲವೇ ದಿನಗಳಲ್ಲಿ ನೆಮ್ಮದಿಯ ಕಾಲ ಪ್ರಾರಂಭವಾಗುತ್ತದೆ ಎಂದರು.

ನಾಡಿನ ಜನರ ಭಾವನೆಗಳನ್ನು ದಿನನಿತ್ಯದ ಕಷ್ಟಗಳನ್ನು ಹಾಗೂ ಎದುರಿಸುತ್ತಾ ಇರುವ ಸಮಸ್ಯೆಗಳನ್ನು ಪಟ್ಟಿ ಮಾಡಿ ಅವುಗಳ ಪರಿಹಾರಕ್ಕೆ ಜೆಡಿಎಸ್ ಪಕ್ಷದ ವರಿಷ್ಠ ಎಚ್.ಡಿ ದೇವೇಗೌಡರು ಹಾಗೂ ಕುಮಾರಸ್ವಾಮಿ ಪ್ರಮುಖವಾಗಿ ವಸತಿ, ಶಿಕ್ಷಣ, ಆರೋಗ್ಯ, ಸ್ತ್ರೀ ಶಕ್ತಿ ಸಾಲಮನ್ನಾ, ಉದ್ಯೋಗ ಸೇರಿದಂತ ಯೋಜನೆಗಳನ್ನು ಜಾರಿ ಮಾಡಲು ಹೊರಟಿದ್ದಾರೆ ಅಧಿಕಾರಕ್ಕೆ ಬಂದ ತಕ್ಷಣವೇ ಜಾರಿ ಮಾಡುತ್ತೇನೆ ಇಲ್ಲದೇ ಹೋದರೆ ಪಕ್ಷವನ್ನೇ ವಿಸರ್ಜನೆ ಮಾಡತ್ತಾರೆ ನೀವು ಎಲ್ಲರೂ ಒಗ್ಗಟ್ಟಿನಿಂದ ಪಂಚರತ್ನ ಯೋಜನೆಯನ್ನು ಅನುಷ್ಠಾನ ಮಾಡಲು ಈ ಬಾರಿ ಜೆಡಿಎಸ್ ಪಕ್ಷದ ಅಭ್ಯರ್ಥಿ ಸಿಎಂಆರ್ ಶ್ರೀನಾಥ್ ಅವರನ್ನು ಬೆಂಬಲಿಸುವ ಮೂಲಕ ಕುಮಾರಸ್ವಾಮಿ ಅವರ ಕೈ ಬಲಪಡಿಸಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಕೋಲಾರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಸಿಎಂಆರ್ ಶ್ರೀನಾಥ್ ಮಾತನಾಡಿ ಈ ಬಾರಿ ಜನರ ಒಲವು ಜೆಡಿಎಸ್ ಪಕ್ಷದ ಕಡೆಗೆ ಇದ್ದು ನಿಮ್ಮ ಮನೆ ಮಗನಾಗಿ ದುಡಿಯಲು ನಾನು ಬಂದಿದ್ದೇನೆ ಕೋವಿಡ್ ಸಂದರ್ಭದಲ್ಲಿ ನಿಮ್ಮ ಜೊತೆಯಲ್ಲಿ ಇದ್ದು ನಿಮ್ಮ ಕಷ್ಟಗಳಿಗೆ ಸ್ಪಂದಿಸಿದ್ದೇನೆ ಬೇರೆ ಪಕ್ಷಗಳ ಹಾಗೇ ಚುನಾವಣೆಯ ಸಂದರ್ಭದಲ್ಲಿ ನಿಮ್ಮ ಮುಂದೆ ಬರುವ ವ್ಯಕ್ತಿ ನಾನಲ್ಲ ಕ್ಷೇತ್ರದ ಪ್ರತಿಯೊಂದು ಗ್ರಾಮದ ಸಾಮಾನ್ಯ ವ್ಯಕ್ತಿ ಸಮಸ್ಯೆಗಳೇ ನನ್ನ ಪ್ರಣಾಳಿಕೆಯಾಗಿದೆ ಜೊತೆಗೆ ಸರಕಾರದ ಯೋಜನೆಗಳನ್ನು ಕಟ್ಟಕಡೆಯ ವ್ಯಕ್ತಿಗೆ ತಲುಪಿಸಲು ಪ್ರಾಮಾಣಿಕವಾಗಿ ದುಡಿಯುತ್ತೇನೆ ನನಗೆ ಈ ಬಾರಿ ಒಂದು ಅವಕಾಶ ನೀಡುವಂತೆ ಮನವಿ ಮಾಡಿದರು

ಜೆಡಿಎಸ್ ತಾಲೂಕು ಅಧ್ಯಕ್ಷೆ ಕುರ್ಕಿ ರಾಜೇಶ್ವರಿ ಮಾತನಾಡಿ ಈ ಹಿಂದೆ ಎಚ್.ಡಿ. ಕುಮಾರಸ್ವಾಮಿ ೨೦ ತಿಂಗಳು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಗ್ರಾಮವಾಸ್ತವ್ಯ ಕಾರ್ಯಕ್ರಮವನ್ನು ಆಯೋಜಿಸಿ ಜನರ ಮನೆ ಬಾಗಿಲಿಗೆ ತೆರಳಿ ಸಾರ್ವಜನಿಕರ ಸಮಸ್ಯೆಗಳನ್ನು ಬಗೆಹರಿಸುವ ಮೂಲಕ ಜನಾನುರಾಗಿಯಾಗಿದ್ದರು ಈ ಬಾರಿ ಎಲ್ಲರೂ ಜೆಡಿಎಸ್ ಪಕ್ಷವನ್ನು ಬೆಂಬಲಿಸಿ ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಲು ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷದ ಅಭ್ಯರ್ಥಿ ಸಿಎಂಆರ್ ಶ್ರೀನಾಥ್ ಅವರನ್ನು ಬೆಂಬಲಿಸೋಣ ಎಂದರು.

ಕಾರ್ಯಕ್ರಮಕ್ಕೆ ಆಗಮಿಸಿದ ಗಣ್ಯರನ್ನು ಗ್ರಾಮದ ಮಹಿಳೆಯರು ಕಳಸಗಳಿಂದ ಸ್ವಾಗತ ಕೋರಿದರೆ ಯುವಕರು ಜೆಸಿಬಿ ಮೂಲಕ ಹೂ ಚಲ್ಲುವ ಮೂಲಕ ಕಾರ್ಯಕ್ರಮದ ವೇದಿಕೆಗೆ ಕರೆತಂದರು.

ಸಭೆಯಲ್ಲಿ ಜೆಡಿಎಸ್ ಜಿಲ್ಲಾ ಕಾರ್ಯಾಧ್ಯಕ್ಷ ಬಣಕನಹಳ್ಳಿ ನಟರಾಜ್, ತಾಪಂ ಮಾಜಿ ಸದಸ್ಯ ಪಾಲಾಕ್ಷಿಗೌಡ, ಮುಖಂಡರಾದ ಜೆಟ್ ಅಶೋಕ್, ಇಲಿಯಾಜ್ ಖಾನ್, ಅಶ್ವಥ್, ಸಂತೋಷ, ಧನು, ಗ್ರಾಮದ ಹಿರಿಯರಾದ ಸಿ.ಎಂ ಬೈರಪ್ಪ, ಸಿಎಂ. ಮುನಿಯಪ್ಪ, ಬಿ ಶ್ರೀನಿವಾಸಪ್ಪ, ಚಿಕ್ಕಕೃಷ್ಣಪ್ಪ, ಚಿಕ್ಕಮುನಿಸ್ವಾಮಿ, ಡಿ.ನಾರಾಯಣಸ್ವಾಮಿ, ಮುನಿಸ್ವಾಮಿಗೌಡ, ಮಂಜುನಾಥ್, ನರೇಶ್, ಅಂಜನ್ ಗೌಡ, ಗೋಪಾಲಪ್ಪ, ಶ್ರೀನಿವಾಸ್, ದೇವರಾಜ್, ಶಿವಕುಮಾರ್, ಆನಂದ್, ನಾಗರಾಜ್, ಅಭಿಷೇಕ್, ಗಗನ್, ಶಶಿಕುಮಾರ್, ಮದನ್, ಮಹೇಶ್, ಮಧು, ವೆಂಕಟೇಶ್, ನಾರಾಯಣಸ್ವಾಮಿ, ಮಹೇಶ್, ಉದಯ್, ಮುಂತಾದವರು ಇದ್ದರು.

ಚಿತ್ರ : ಕೋಲಾರ ತಾಲ್ಲೂಕಿನ ಮುದುವತ್ತಿಯಲ್ಲಿ ನಡೆದ ಜೆಡಿಎಸ್ ಪ್ರಚಾರ ಸಭೆಯಲ್ಲಿ ವಿಧಾನಪರಿಷತ್ ಸದಸ್ಯ ಗೋವಿಂದರಾಜು ಮಾತನಾಡಿದರು.


 rajesh pande