ಸೆಕಂಡರಿ ಕೃಷಿ ಯೋಜನೆಯಿಂದ ರೈತರ ದ್ವಿಗುಣ ಆದಾಯ
ರಾಯಚೂರು,, 18 ಮಾರ್ಚ್ (ಹಿ.ಸ): ಆ್ಯಂಕರ್: ಕೃಷಿ ನಿರ್ದೇಶನಾಲಯವು ರೈತರಿಗೆ ಅನುಕೂಲವಾಗುವಂತೆ ಸೆಕಂಡರಿ ಕೃಷಿ ಯೋಜನೆಯ
ಸೆಕಂಡರಿ ಕೃಷಿ ಯೋಜನೆಯಿಂದ   ರೈತರ ದ್ವಿಗುಣ ಆದಾಯ   


ಸೆಕಂಡರಿ ಕೃಷಿ ಯೋಜನೆಯಿಂದ   ರೈತರ ದ್ವಿಗುಣ ಆದಾಯ   


ರಾಯಚೂರು,, 18 ಮಾರ್ಚ್ (ಹಿ.ಸ):

ಆ್ಯಂಕರ್: ಕೃಷಿ ನಿರ್ದೇಶನಾಲಯವು ರೈತರಿಗೆ ಅನುಕೂಲವಾಗುವಂತೆ ಸೆಕಂಡರಿ ಕೃಷಿ ಯೋಜನೆಯನ್ನು ಜಾರಿಗೊಳಿಸಲಾಗಿದೆ ಎಂದು ಉಪ ಕೃಷಿ ನಿರ್ದೇಶಕ ನಯೀಮ್ ಹುಸೇನ್ ಅವರು ಹೇಳಿದ್ದಾರೆ.

ನಗರದ ಜಂಟಿ ಕೃಷಿ ನಿರ್ದೇಶಕರ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಸೆಕಂಡರಿ ಕೃಷಿ ಯೋಜನೆಯಡಿಯಲ್ಲಿ ಒಂದು ದಿನದ ಕಾರ್ಯಗಾರವನ್ನು ಉದ್ದೇಶಿಸಿ ಮಾತನಾಡಿದರು.

ರಾಷ್ಟ್ರದಲ್ಲಿ ಪ್ರಥಮ ಬಾರಿಗೆ ಮಾದರಿಯಾಗಿ ಕರ್ನಾಟಕ ರಾಜ್ಯದಲ್ಲಿ ಸೆಕಂಡರಿ ಕೃಷಿ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿದ್ದು, ರೈತರಿಗೆ ಈ ಯೋಜನೆಯಿಂದ ಅನುಕೂಲವಾಗಲಿದೆ. ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಂಟಿ ಕೃಷಿ ನಿರ್ದೇಶಕಿ ಆರ್.ದೇವಿಕಾ ಅವರು ಮಾತನಾಡಿ, ಕೃಷಿಯ ಪ್ರಾಥಮಿಕ ಉತ್ಪನ್ನಗಳನ್ನು ಸ್ಥಳೀಯವಾಗಿ ಮಾನವ ಸಂಪನ್ಮೂಲ ಮತ್ತು ಕೌಶಲ್ಯಗಳನ್ನು ಬಳಸಿ ಮೌಲ್ಯವರ್ಧನೆ ಮಾಡುವ ಮೂಲಕ ರೈತರಿಗೆ ಹೆಚ್ಚಿನ ಆದಾಯ ಒದಗಿಸುವಂತಹ ಚಟುವಟಿಕೆಯೇ ಸೆಕಂಡರಿ ಕೃಷಿ ಯೋಜನೆಯಾಗಿದೆ ಎಂದು ತಿಳಿಸಿದರು.

ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ವಿಜ್ಞಾನಿಗಳಾದ ಡಾ.ಜೆ.ಎಮ್. ನಿಡಗುಂದಿ ಹಾಗೂ ಡಾ.ಶರಣೇಗೌಡ ರವರು ಸಕೆಂಡರಿ ಕೃಷಿ ಬಗ್ಗೆ ಸವಿಸ್ತಾರವಾಗಿ ಮಾಹಿತಿ ನೀಡಿದರು.

ಇನ್ಕ್ಯೂಬೇಶನ್ಸ್ ಸೆಂಟರ್ಗಳ ಪಾತ್ರ ಕಾರ್ಯವೈಖರಿ ತರಬೇತಿ ಹಾಗೂ ಪರಿಣಾಮಗಳ ಬಗ್ಗೆ ಗ್ರಾಮೀಣ ಭಾಗಗಳಲ್ಲಿ ಅಗ್ರಿ ಸ್ಟಾರ್ಟಪ್ಗಳನ್ನು ಉತ್ತೇಜಿಸುವ ಮೂಲಕ ಉದ್ಯೋಗವಕಾಶಗಳ ಸೃಜನೆಯ ಬಗ್ಗೆ ವಿಷಯ ಮಂಡಿಸಿದರು.

ಈ ಸಂದರ್ಭದಲ್ಲಿ ಪಶು ಸಂಗೋಪನೆ ಇಲಾಖೆಯ ಉಪನಿರ್ದೇಶಕ ಅಶೋಕ ಕೋಲ್ಕರ, ವಿವಿಧ ಬ್ಯಾಂಕ್ಗಳ ವ್ಯವಸ್ಥಾಪಕÀ ವಿನೋದ್, ಜಿಂದಾವಲಿ, ಮಹಾಂತೇಶ ಹಿರೆಮಠ, ಜಿಲ್ಲಾ ಸಲಹೆಗಾರ ಅಸಾದುಲ್ಲಾ ಸೇರಿದಂತೆ ರೈತ ಉತ್ಪಾದಕ ಸಂಸ್ಥೆಗಳ ಮುಖ್ಯಸ್ಥರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.


 rajesh pande