ಕೋಲಾರ ಕ್ಷೇತ್ರದಲ್ಲಿ ಬಲಿಜಿಗರಿಗೆ ಪ್ರಾತಿನಿಧ್ಯ ನೀಡಲು ಒತ್ತಾಯ
ಕೋಲಾರ, ೧೮ ಮಾರ್ಚ್ (ಹಿ.ಸ) : ಆ್ಯಂಕರ್ : ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ಸ್
ಕೋಲಾರ ಕ್ಷೇತ್ರದಲ್ಲಿ ಬಲಿಜಿಗರಿಗೆ ಪ್ರಾತಿನಿಧ್ಯ ನೀಡಲು ಒತ್ತಾಯ


ಕೋಲಾರ, ೧೮ ಮಾರ್ಚ್ (ಹಿ.ಸ) :

ಆ್ಯಂಕರ್ : ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧೆಯಿಂದ ಹಿಂದೆ ಸರಿದಲ್ಲಿ ಕೋಲಾರ ಜಿಲ್ಲೆಯ ೬ ವಿಧಾನ ಸಭಾ ಕ್ಷೇತ್ರದಲ್ಲಿ ಅತಿ ಹೆಚ್ಚು ಹಿಂದುಳಿದ ವರ್ಗವಾದ ಬಲಿಜ ಜನಾಂಗ ೧ ಲಕ್ಷ ೩೫ ಸಾವಿರ ಮತದಾರರನ್ನು ಹೊಂದಿದ್ದು, ಬಲಿಜ ಜನಾಂಗಕ್ಕೆ ಅಂದರೆ ಮಾಜಿ ಸಚಿವ ಎಂ.ಆರ್. ಸೀತಾರಾಮ್ ಅಥವಾ ಸಿ.ಆರ್. ಮನೋಹರ ರವರಿಗೆ ಅವಕಾಶ ಮಾಡಿಕೊಡಲು ಬಲಿಜ ಸಂಘದ ಮಹಾ ಪ್ರಧಾನ ಕಾರ್ಯದರ್ಶಿ ಹಾಗೂ ಶ್ರೀ ಕೃಷ್ಣದೇವರಾಯ ಅಭಿವೃದ್ಧಿ ಪ್ರತಿಷ್ಠಾನದ ಅಧ್ಯಕ್ಷ ಕೆ.ವಿ. ಸುರೇಶ್ಕುಮಾರ್ ಒತ್ತಾಯಿಸಿದ್ದಾರೆ.

ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಬಲಿಜ ಜನಾಂಗ ಮತದಾರರು ಶಿಡ್ಲಘಟ್ಟ ೧೫೦೦೦ ಸಾವಿರ ಮತದಾರರು ಚಿಂತಾಮಣಿ ೧೮೦೦೦ ಸಾವಿರ ಮತದಾರರು ಶ್ರೀನಿವಾಸಪುರ ೧೨೦೦೦ ಸಾವಿರ ಮತದಾರರು, ಮುಳಬಾಗಲು ೩೨೦೦೦ ಸಾವಿರ ಮತದಾರರು, ಬಂಗಾರಪೇಟೆ ೨೨೦೦೦ ಸಾವಿರ ಮತದಾರರು, ಕೆ.ಜಿ.ಎಫ್. ೧೨೦೦೦ ಸಾವಿರ ಮತದಾರರು, ಮಾಲೂರು ೬೦೦೦ ಸಾವಿರ ಮತದಾರರು, ಕೋಲಾರ ವಿಧಾನ ಸಭಾ ಕ್ಷೇತ್ರದಲ್ಲಿ ೧೮೦೦೦ ಸಾವಿರ ಮತದಾರರು ಇದ್ದು, ಒಟ್ಟು ೧ ಲಕ್ಷ ೩೫ ಸಾವಿರ ಬಲಿಜ ಜನಾಂಗ ಮತದಾರರು ಇದ್ದು, ಲೋಕಸಭಾ ಚುನಾವಣೆ ಮತ್ತು ವಿಧಾನ ಸಭಾ ಚುನಾವಣೆಗಳಲ್ಲಿ ರಾಜಕೀಯ ಪಕ್ಷಗಳು ಜನಾಂಗದ ಮತದಾರರನ್ನು ತಮ್ಮ ತಮ್ಮ ಪಕ್ಷದ ಪರವಾಗಿ ಓಲೈಸುತ್ತಿದ್ದು, ನಂತರ ಬರುವ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಹಾಗೂ ನಗರಸಭೆ ಮತ್ತು ಪುರಸಭೆ ಚುನಾವಣೆಗಳಲ್ಲಿ ನಿರ್ಲಕ್ಷö್ಯ ತೋರುತ್ತಿರುವುದರಿಂದ ಬಲಿಜ ಜನಾಂಗಕ್ಕೆ ರಾಜಕೀಯ ಪ್ರಾತಿನಿಧ್ಯ ದೊರೆಯದಂತಾಗಿದೆ. ಇದರೊಂದಿಗೆ ಇಡೀ ರಾಜ್ಯದಲ್ಲಿ ವಿದ್ಯಾಭ್ಯಾಸಕ್ಕೆ ೨ಎ ಮತ್ತು ಔದ್ಯೋಗಿಕ ಮತ್ತು ರಾಜಕೀಯಕ್ಕೆ ೩ಎ ಮೀಸಲಾತಿಯಲ್ಲಿರುವ ಏಕೈಕ ಹಿಂದುಳಿದ ವರ್ಗವೆಂದರೆ ಅದು 'ಬಲಿಜ ಜನಾಂಗ' ಇದರಿಂದಾಗಿ ರಾಜಕೀಯ ಮೀಸಲಾತಿಯಿಂದ ವಂಚಿತರಾಗುತ್ತಿರುವುದು ಜನಾಂಗದ ದುರಾದೃಷ್ಠಕರವಾಗಿದೆ.

ಇದೀಗ ವಿಧಾನಸಭಾ ಚುನಾವಣೆಗಳು ಬರುತ್ತಿದ್ದು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ಸ್ಫರ್ಧೆಯಿಂದ ಹಿಂದೆ ಸರಿದಲ್ಲಿ ಮಾಜಿ ಸಚಿವರಾದ ಎಂ.ಆರ್. ಸೀತಾರಾಮ್ ಅಥವಾ ಮಾಜಿ ಎಂ.ಸಿ. ಮನೋಹರ ಸಿ.ಆರ್. ರವರಿಗೆ ಅವಕಾಶ ಮಾಡಿಕೊಡಬೇಕೆಂದು ಬಲಿಜ ಜನಾಂಗವು ಒತ್ತಾಯಿಸಿದೆ.


 rajesh pande