ಚಿಕ್ಕಬಳ್ಳಾಪುರ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನ
ಕೋಲಾರ, ೧೮ ಮಾರ್ಚ್ (ಹಿ.ಸ) : ಆ್ಯಂಕರ್ : ಚಿಕ್ಕಬಳ್ಳಾಪುರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ತಾಲೂಕು ೮ನೇ
ಚಿಕ್ಕಬಳ್ಳಾಪುರ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನ


ಕೋಲಾರ, ೧೮ ಮಾರ್ಚ್ (ಹಿ.ಸ) :

ಆ್ಯಂಕರ್ : ಚಿಕ್ಕಬಳ್ಳಾಪುರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ತಾಲೂಕು ೮ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಮಾ.೯ರಂದು ಭಾನುವಾರ ಇಲ್ಲಿನ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ.

ಸಮ್ಮೇಳನದ ಅಂಗವಾಗಿ ಬೆಳಿಗ್ಗೆ ೮.೩೦ಕ್ಕೆ ತಹಶೀಲ್ದಾರ್ ಗಣಪತಿ ಶಾಸ್ತಿç ರಾಷ್ಟçಧ್ವಜ, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಪ್ರೊ.ಕೋಡಿರಂಗಪ್ಪ ನಾಡಧ್ವಜ ಹಾಗೂ ತಾಲೂಕು ಅಧ್ಯಕಷ ಯಲುವಳ್ಳಿ ಸೊಣ್ಣೇಗೌಡ ಪರಿತ್ತಿನ ಧ್ವಜಾರೋಹಣ ನೆರವೇರಿಸಲಿದ್ದಾರೆ. ಆನಂರತ ೯.೩೦ಕ್ಕೆ ನಗರದ ನಂದಿ ರಂಗಮ0ದಿರದ ಆವರಣದಿಂದ ಅಂಬೇಡ್ಕರ್ ಭವನದ ತನಕ ಸಮ್ಮೇಳನಾಧ್ಯಕ್ಷೆ ಸಾಹಿತಿ ಎ.ಸರಸಮ್ಮನವರ ಮೆರವಣಿಗೆ ನಡೆಯಲಿದೆ.

ವೃತ್ತ ಅರಕ್ಷಕ ನಿರೀಕ್ಷ ರಾಜು ಮೆರವಣಿಗೆಗೆ ಚಾಲನೆ ನೀಡಲಿದ್ದು, ಗಣ್ಯರು ಪಾಲ್ಗೊಳ್ಳಲಿದ್ದಾರೆ. ನಂದಿ ರಂಗಮ0ದಿರದಿ0ದ ಪ್ರಾರಂಭವಾಗುವ ಮೆರಣಿಗೆ ಬಿಬಿ ರಸ್ತೆ, ಬಲಮೂರಿ ವೃತ್ತ, ಶಿಡ್ಲಘಟ್ಟ ವೃತ್ತದ ಮೂಲಕ ಅಂಬೇಡ್ಕರ್ ಭವನದತನಕ ನಡೆಯಲಿದೆ.

ನಂದಿ ತಿಮ್ಮಣ ಪ್ರವೇಶ ದ್ವಾರದ ಸಿರಿಭೂವಲಯ ಕೃತ್ಯ ಕುಮುದೇಂದು ಮಹರ್ಷಿ ಪ್ರಧಾನ ವೇದಿಕೆಯಲ್ಲಿ ಬೆಳಿಗ್ಗೆ ೧೧ ಗಂಟೆಗೆ ಉದ್ಘಾಟನಾ ಕಾರ್ಯಕ್ರಮ ನಡೆಯಲಿದ್ದು ಆದಿಚುಂನ ಗಿರಿ ಶಾಖಾಮಠದ ಶ್ರೀಮಂಗಳಾನ0ದನಾಥ ಸ್ವಾಮೀಜಿ ದಿವ್ಯಸಾನಿದ್ಯ ವಹಿಸಲಿದ್ದಾರೆ. ಪರಿಷತ್ನ ಜಿಲ್ಲಾಧ್ಯಕ್ಷ ಪ್ರೊ.ಕೋಡಿರಂಗಪ್ಪ ಆಶಯನುಡಿ, ತಾಲೂಕು ಅಧ್ಯಕ್ಷ ಯಲುವಳ್ಳಿ ಸೊಣ್ಣೇಗೌಡ ಪ್ರಾಸ್ತಾವಿಕ ನುಡಿ, ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಉದ್ಘಾಟಿಸಲಿದ್ದು, ಸಮ್ಮೇಳಾನಾಧ್ಯಕ್ಷೆ ಸಾಹಿತಿ ಎ.ಸರಸ್ವತಮ್ಮ ಅಧ್ಯಕ್ಷತೆವಹಿಸಲಿದ್ದಾರೆ.

ಮಧ್ಯಾಹ್ನ ೧೨ ಗಂಟೆಗೆ ಕರ್ನಾಟಕ ಏಕೀಕರಣ ಒಂದು ನೆನಪು ಹಾಗೂ ಸಿರಿಭೂವಲಯ ಕತೃ ಶ್ರೀ ಕುಮುದೇಂದು ಮಹರ್ಷಿ ಪರಿಷಯ ಕುರಿತು ಗೋಷ್ಠಿ ನಡೆಯಲಿದ್ದು, ವರದಿಗಾರ ನಾಗೇಂದ್ರಬಾಬು ಪ್ರಾಸ್ತಾವಿಕ ನುಡಿ, ಸಾಹಿತಿ ಲಲಿತಾ ರಾಮಮೂರ್ತಿ ಅಧ್ಯಕ್ಷತೆ, ಅಧ್ಯಾಪಕಿ ಎಂ.ವಿ.ಅನುಪಮ ಏಕೀಕರಣ ವಿಷಯ ಮಂಡನೆ ಹಾಗೂ ಉಪನ್ಯಾಸಕ ಬಿ.ಸದಾಶಿವ ಕುಮುದೇಂದು ಮಹರ್ಷಿ ಪರಿಚಯ ಮಾಡಿಕೊಡಲಿದ್ದಾರೆ.

ಮಧ್ಯಾಹ್ನ ೨ ಗಂಟೆಗೆ ಕವಿಗೋಷ್ಠಿಯಲ್ಲಿ ವೈ.ಎಲ್.ಹನುಮಂತರಾವ್ ಪ್ರಾಸ್ತಾವಿ ನುಡಿ, ಸಾಹಿತಿ ಗೋಪಾಲಗೌಡ ಕಲ್ವಮಂಜಿ ಅಧ್ಯಕ್ಷತೆ ವಹಿಸಲಿದ್ದಾರೆ.

ಸಂಜೆ ೪.೩೦ಕ್ಕೆ ಸಮಾರೋಪ, ನಿರ್ಣಯ ಮಂಡನೆ ಮತ್ತು ಸಾಧಕರಿಗೆ ಸನ್ಮಾನ ಸಮಾರಂಭ ನಡೆಯಲಿದ್ದು, ಸಮಾರೋಪ ನುಡಿ ಪ್ರಾಧ್ಯಾಪಕ ಡಾ.ಎನ್.ಲೋಕನಾಥ್, ಅಧ್ಯಕ್ಷತೆ ತಾಲೂಕು ಅಧ್ಯಕ್ಷ ಯಲುವಳ್ಳಿ ಸೊಣ್ಣೇಗೌಡ, ಮನದಾಳದ ಮಾತು ಸಮ್ಮೇಳನಾಧ್ಯಕ್ಷೆ ಎ.ಸರಸ್ವತಮ್ಮ ವಹಿಸಲಿದ್ದಾರೆ.


 rajesh pande