ದಾಖಲೆಗಳಿಲ್ಲದ ಚಿನ್ನದ ಆಭರಣಗಳ ಮಾರಾಟಕ್ಕೆ ಯತ್ನ : ಇಬ್ಬರ ಬಂಧನ
ಗದಗ , 17 ಮಾರ್ಚ್ (ಹಿ.ಸ): ಆ್ಯಂಕರ್ : ಗದಗ ನಗರದ ಟಾಂಗಾ ಕೂಟ್ ಬಳಿ ಮಾರಾಟ ಮಾಡಲು ತಂದಿದ್ದ 4 ಕೆಜಿ 46 ಗ್ರಾಂ ಚಿನ್ನ
ಗದಗ ಶಹರ್ ಪೋಲಿಸರು ನಗರದಲ್ಲಿ ದಾಳಿ ನಡೆಸಿ, ದಾಖಲೆಗಳಿಲ್ಲದೇ ಚಿನ್ನದ ಆಭರಣಗಳನ್ನು ಮಾರಾಟಕ್ಕೆ ಯತ್ನ ಮಾಡುತ್ತಿದ್ದ ಇಬ್ಬರನ್ನು ಬಂಧಿಸಿದ್ದಾರೆ.


ಗದಗ , 17 ಮಾರ್ಚ್ (ಹಿ.ಸ):

ಆ್ಯಂಕರ್ : ಗದಗ ನಗರದ ಟಾಂಗಾ ಕೂಟ್ ಬಳಿ ಮಾರಾಟ ಮಾಡಲು ತಂದಿದ್ದ 4 ಕೆಜಿ 46 ಗ್ರಾಂ ಚಿನ್ನದ ಆಭರಣಗಳನ್ನು ಗದಗ ಶಹರ ಪೊಲೀಸರು ಶುಕ್ರವಾರ ವಶಕ್ಕೆ ಪಡೆದಿದ್ದಾರೆ. ಮಹಾರಾಷ್ಟ್ರ ಮೂಲದ ವ್ಯಾಪಾರಿಗಳಾದ ಅಭಿಷೇಕ್ ಜೈನ್, ಮಹಿಪಾಲ್ ಜೈನ್, ಸೂಕ್ತ ದಾಖಲೆಗಳಿಲ್ಲದ ಚಿನ್ನದ ಆಭರಣಗಳನ್ನ ಗದಗ ಚಿನ್ನದ ಮಾರ್ಕೆಟ್ ನಲ್ಲಿ ಮಾರಾಟ ಮಾಡಲು ಯತ್ನಿಸಿದ್ರು. ವಿಷಯ ತಿಳಿದು ದಾಳಿ ನಡೆಸಿದ ಪೊಲೀಸರು ಇಬ್ಬರನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದರು. ಚಿನ್ನಾಭರಣಗಳಿಗೆ ಸೂಕ್ತ ದಾಖಲೆಗಳು ಇಲ್ಲದ ಕಾರಣ ಒಟ್ಟು 1 ಕೋಟಿ 71 ಲಕ್ಷ 65 ಸಾವಿರ ರೂಪಾಯಿ ಬೆಲೆ ಬಾಳುವ ಚಿನ್ನಾಭರಣಗಳನ್ನ ವಶಕ್ಕೆ ಪಡೆದಿದ್ದಾರೆ. ಮಹಾರಾಷ್ಟ್ರದಿಂದ ಕಳ್ಳತನದ ಅಥವಾ ಮೋಸದಿಂದ ತಂದು ಚಿನ್ನವನ್ನ ಬ್ಲಾಕ್ ನಲ್ಲಿ ಮಾರಾಟ ಮಾಡುವ ಉದ್ದೇಶದಿಂದ ತಂದಿರುವ ಬಗ್ಗೆ ಸಂಶಯ ವ್ಯಕ್ತವಾಗಿದೆ.

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಗದಗ ಎಸ್ ಪಿ ಬಿಎಸ್ ನೇಮಗೌಡ ಮಾರ್ಗದರ್ಶನದಲ್ಲಿ ಸಿಪಿಐ ಜಯಂತ ಗೌಳಿ, ಎಸ್ ಬಿ ಸಿಂಧೆ ದಾಳಿ ನಡೆಸಿದ್ದು. ಪಿಸಿ ಎಡಿ ಜಮಾದಾರ್, ಪ್ರವೀಣ್ ಕಲ್ಲೂರು, ಉಮೇಶ್ ಸುಣಗಾರ, ಶಂಕರ್ ಮಾವಿನಕಾಯಿ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.

ಹಿಂದುಸ್ತಾನ್ ಸಮಾಚಾರ/ಎಸಕೆ/ಎಂವೈ


 rajesh pande