ಸಮಾಜ ಘಾತುಕ ವ್ಯಕ್ತಿ ಮಂಜುನಾಥ್ ಬಂಧನ
ಕೋಲಾರ, ಮಾರ್ಚ್ ೧೭ (ಹಿ.ಸ): ಆ್ಯಂಕರ್ : ಇಲ್ಲಿನ ಕಾರಂಜಿಕಟ್ಟೆ ನಿವಾಸಿ ಎಂ.ಮ0ಜುನಾಥ ಅಲಿಯಾಸ್ ಕಚ್ಚಾ ಮಂಜು ಎಂಬುವ
ಆರೋಪಿ ಕಚ್ಚಾ ಮಂಜ


ಕೋಲಾರ, ಮಾರ್ಚ್ ೧೭ (ಹಿ.ಸ):

ಆ್ಯಂಕರ್ : ಇಲ್ಲಿನ ಕಾರಂಜಿಕಟ್ಟೆ ನಿವಾಸಿ ಎಂ.ಮ0ಜುನಾಥ ಅಲಿಯಾಸ್ ಕಚ್ಚಾ ಮಂಜು ಎಂಬುವರನ್ನು ಗೂಂಡಾ ಕಾಯ್ದೆಯಲ್ಲಿ ಬಂಧಿಸಿ ಕೇಂದ್ರ ಕಾರಾಗೃಹದಲ್ಲಿ ಬಂಧನದಲ್ಲಿರಿಸಲು ಜಿಲ್ಲಾಧಿಕಾರಿ ವೆಂಕಟ್ರಾಜಾ ಆದೇಶ ಹೊರಡಿಸಿದ್ದಾರೆ.

ಆರೋಪಿ ಮಂಜುನಾಥ ವಿರುದ್ಧ ಕೋಲಾರ ನಗರ ಗಲ್ಪೇಟೆ ಮತ್ತು ಗ್ರಾಮಾಂತರ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಕೊಲೆಯತ್ನ, ಸುಲಿಗೆ, ದೌರ್ಜನ್ಯ ಕಾಯ್ದೆ, ಮೋಸ ಮತ್ತು ವಂಚನೆ ಮುಂತಾದ ಆರೋಪಗಳ ಮೇಲೆ ೧೧ ಪ್ರಕರಣಗಳು ದಾಖಲಾಗಿವೆ. ನ್ಯಾಯಾಲಯ ಆರೋಪಿಗೆ ನೀಡಿದ ಜಾಮೀನನ್ನು ಪದೇ ಪದೇ ದುರುಪಯೋಗಪಡಿಸಿಕೊಂಡು ಸಾಕ್ಷಿಗಳನ್ನು ಹೆದರಿಸುತ್ತಿದ್ದ ಇದರಿಂದ ನ್ಯಾಯಾಲಯಗಳಲ್ಲಿ ಆತನ ವಿರುದ್ಧ ಎಲ್ಲ ಪ್ರಕರಣಗಳು ಕುಲಾಸೆಯಾಗುತ್ತಿದ್ದವು.

ಗೂಂಡಾ ಚಟುವಟಿಕೆಗಳಿಂದ ಕಾನೂನು ಭಂಗ ಮಾಡುತ್ತಿದ್ದ ಜೂಜು, ಗೂಂಡಾಗಿರಿ, ವೇಶ್ಯಾವೃತ್ತಿ, ಕೊಳಚೆ ಪ್ರದೇಶಗಳಲ್ಲಿ ನಿವೇಶನಗಳನ್ನು ಆಕ್ರಮಿಸಿಕೊಳ್ಳುವುದು ಮುಂತಾದ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿದ್ದ. ಈತನ ವಿರುದ್ಧ ಗೂಂಡಾ ಕಾಯ್ದೆಯಲ್ಲಿ ಕ್ರಮ ಕೈಗೊಳ್ಳುವಂತೆ ಕೋಲಾರ ಜಿಲ್ಲಾ ಎಸ್.ಪಿ. ನಾರಾಯಣರವರು ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಿದ್ದರು. ವರದಿಯನ್ನು ಪರಿಶೀಲಿಸಿದ ಜಿಲ್ಲಾಧಿಕಾರಿ ವೆಂಕಟ್ರಾಜಾ ಆರೋಪಿಯನ್ನು ಬಂಧಿಸಿ ಬೆಂಗಳೂರಿನ ಕೇಂದ್ರ ಕಾರಾಗೃಹದಲ್ಲಿ ಇರಿಸಲು ಆದೇಶ ಹೊರಡಿಸಿದ್ದಾರೆ.

ಚಿತ್ರ : ಆರೋಪಿ ಕಚ್ಚಾ ಮಂಜ


 rajesh pande