ಸಿಕ್ಕಿಂನಲ್ಲಿಂದು ಜಿ-೨೦ ಅಧ್ಯಕ್ಷತೆಯ ವಾಣಿಜ್ಯ ಸಭೆ
ಗ್ಯಾಂಗ್ಟಕ್, 16 ಮಾರ್ಚ್ (ಹಿ.ಸ): ಆ್ಯಂಕರ್ : ಭಾರತದ ಜಿ-೨೦ ಅಧ್ಯಕ್ಷತೆಯಲ್ಲಿ ಬಿ-೨೦ ಅಥವಾ ವಾಣಿಜ್ಯ-೨೦ ಸಭೆಯ ಸಿಕ್ಕ
ೇೇ


ಗ್ಯಾಂಗ್ಟಕ್, 16 ಮಾರ್ಚ್ (ಹಿ.ಸ):

ಆ್ಯಂಕರ್ :

ಭಾರತದ ಜಿ-೨೦ ಅಧ್ಯಕ್ಷತೆಯಲ್ಲಿ ಬಿ-೨೦ ಅಥವಾ ವಾಣಿಜ್ಯ-೨೦ ಸಭೆಯ ಸಿಕ್ಕಿಂನ ಗ್ಯಾಂಗ್ಟಕ್ನಲ್ಲಿ ಇಂದು ನಡೆಯಲಿದೆ. ಗ್ಯಾಂಗ್ಟಕ್ನಲ್ಲಿ ನಡೆಯುವ ಈ ಸಭೆಯಿಂದಾಗಿ ಹಸಿರು ಹೂಡಿಕೆಯಲ್ಲಿನ ಆರ್ಥಿಕ ಸಂಭಾವ್ಯತೆಯ ಪ್ರದರ್ಶನ, ಸಾವಯವ ಕೃಷಿ, ಪ್ರವಾಸೋದ್ಯಮ, ಫಾರ್ಮಾಸ್ಯೂಟಿಕಲ್ಸ್, ನವೀಕರಿಸಬಹುದಾದ ಇಂಧನ, ಆತಿಥ್ಯವಲಯ ಸೇರಿದಂತೆ ವಿವಿಧ ಕ್ಷೇತ್ರಗಳ ಪ್ರದರ್ಶನಕ್ಕೆ ಇದೊಂದು ಸುವರ್ಣಾವಕಾಶ ಎಂದು ಸಿಕ್ಕಿಂ ಮುಖ್ಯಮಂತ್ರಿ ಪಿ.ಎಸ್ ತಮಾಂಗ್ ಹೇಳಿದ್ದಾರೆ. ಜಿ-೨೦ ಸಭೆಯು, ಸಿಕ್ಕಿಂ ಉದ್ಯಮಿಗಳಿಗೆ ತಮ್ಮ ಅವಕಾಶಗಳನ್ನು ರಾಜ್ಯದ ಹೊರಭಾಗದಲ್ಲಿ ಅನ್ವೇಷಿಸಲು ಒಂದು ವೇದಿಕೆಯನ್ನು ಒದಗಿಸಲಿದೆ. ಸಿಕ್ಕಿಂನಲ್ಲಿ ಪ್ರವಾಸೋದ್ಯಮವು ಒಂದು ಪ್ರಮುಖ ಉದ್ಯಮವಾಗಿರುವುದರಿಂದ ಈ ಸಭೆಯು ವಿದೇಶಿ ಪ್ರವಾಸಿಗರನ್ನು ರಾಜ್ಯಕ್ಕೆ ಹೆಚ್ಚು ಆಕರ್ಷಿಸುವ ಭರವಸೆ ಇದೆ ಎಂಬ ಆಶಯ ವ್ಯಕ್ತಪಡಿಸಿದರು. ಕಿರುಧಾನ್ಯಗಳ ಉತ್ಪಾದನೆ ಮತ್ತು ಮಾರುಕಟ್ಟೆ ಸೇರಿದಂತೆ ಸಾವಯವ ಕೃಷಿಯ ಬಗ್ಗೆ ಗಮನ ಹರಿಸಲಾಗುವುದು ಎಂದು ತಮಾಂಗ್ ಹೇಳಿದರು.

ಹಿಂದೂಸ್ತಾನ್ ಸಮಾಚಾರ್


 rajesh pande