ಸತತ 5 ಪಂದ್ಯ ಗೆದ್ದು ಮುಂಬೈ ಪ್ಲೇ-ಆಫ್ ಗೆ ಲಗ್ಗೆ
ಮುಂಬೈ, 15 ಮಾರ್ಚ್ (ಹಿ.ಸ): ಆ್ಯಂಕರ್ : ಚೊಚ್ಚಲ ಆವೃತ್ತಿಯ ವುಮೆನ್ಸ್ ಪ್ರೀಮಿಯರ್ ಲೀಗ್(ಡಬ್ಲ್ಯುಪಿಎಲ್)ನಲ್ಲಿ ಮು
ಾಾಾ


ಮುಂಬೈ, 15 ಮಾರ್ಚ್ (ಹಿ.ಸ):

ಆ್ಯಂಕರ್ :

ಚೊಚ್ಚಲ ಆವೃತ್ತಿಯ ವುಮೆನ್ಸ್ ಪ್ರೀಮಿಯರ್ ಲೀಗ್(ಡಬ್ಲ್ಯುಪಿಎಲ್)ನಲ್ಲಿ ಮುಂಬೈ ಇಂಡಿಯನ್ಸ್ ಗೆಲುವಿನ ಓಟ ಮುಂದುವರಿದಿದ್ದು, ಸತತ 5ನೇ ಗೆಲುವಿನೊಂದಿಗೆ ಪ್ಲೇ-ಆಫ್ ಸ್ಥಾನ ಖಚಿತಪಡಿಸಿಕೊಂಡಿದೆ. ಮಂಗಳವಾರ ಗುಜರಾತ್ ಜೈಂಟ್ಸ್ ವಿರುದ್ಧ 55 ರನ್ ಗೆಲುವು ಸಾಧಿಸಿತು. 5 ಪಂದ್ಯಗಳಲ್ಲಿ 4ನೇ ಸೋಲು ಕಂಡ ಗುಜರಾತ್ 4ನೇ ಸ್ಥಾನದಲ್ಲೇ ಉಳಿದುಕೊಂಡಿದೆ.

ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ ತಂಡವು ನಾಯಕಿ ಹರ್ಮನ್ಪ್ರೀತ್ ಕೌರ್(30 ಎಸೆತಗಳಲ್ಲಿ 51) ಟೂರ್ನಿಯ 3ನೇ ಅರ್ಧಶತಕದ ನೆರವಿನಿಂದ 8 ವಿಕೆಟ್ಗೆ 162 ರನ್ ಕಲೆಹಾಕಿತು. ಯಸ್ತಿಕಾ ಭಾಟಿಯಾ 44, ನ್ಯಾಥಲಿ ಸ್ಕೀವರ್ 36 ರನ್ ಕೊಡುಗೆ ನೀಡಿದರು. ಆಶ್ಲೆ ಗಾಡ್ರ್ನರ್ 3 ವಿಕೆಟ್ ಕಿತ್ತರು.

ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಗುಜರಾತ್ 20 ಓವರಲ್ಲಿ9 ವಿಕೆಟ್ ಕಳೆದುಕೊಂಡು 107 ರನ್ ಗಳಿಸಿ ಸೋಲೊಪ್ಪಿಕೊಂಡಿತು. ರನ್ ಖಾತೆ ತೆರೆಯುವ ಮೊದಲೇ ವಿಕೆಟ್ ಕಳೆದುಕೊಂಡ ಗುಜರಾತ್ ಜೈಂಟ್ಸ್ ತಂಡಕ್ಕೆ ಹರ್ಲೀನ್ ಡಿಯೋಲ್(22), ಮೇಘನಾ(16) ಅಲ್ಪ ಚೇತರಿಕೆ ನೀಡಿದರೂ ಇವರಿಬ್ಬರ ಬಳಿಕ ತಂಡ ಮತ್ತೆ ಸೋಲಿನತ್ತ ಮುಖಮಾಡಿತು. ಸ್ನೇಹ ರಾಣಾ 20, ಸುಶ್ಮಾ ವರ್ಮಾ 14 ರನ್ ಗಳಿಸಿದರು. ಹೇಲಿ ಮ್ಯಾಥ್ಯೂಸ್, ಸ್ಕೀವರ್ ತಲಾ 3 ವಿಕೆಟ್ ಪಡೆದರು.

ಹಿಂದೂಸ್ತಾನ್ ಸಮಾಚಾರ್


 rajesh pande