100ರ ಹೊಸ್ತಿಲಲ್ಲಿ ಪ್ರಧಾನಿ ಅವರ ಮನದ ಮಾತು
ನವದೆಹಲಿ, 15 ಮಾರ್ಚ್ (ಹಿ.ಸ): ಆ್ಯಂಕರ್ : ಪ್ರಧಾನಮಂತ್ರಿಯವರ ಮನ್ ಕಿ ಬಾತ್ - ಬಾನುಲಿಯ ಈ ಒಂದು ಕ್ರಾಂತಿಯು ೨೦೨೩ರ ಏ
ೀಪ


ನವದೆಹಲಿ, 15 ಮಾರ್ಚ್ (ಹಿ.ಸ):

ಆ್ಯಂಕರ್ :

ಪ್ರಧಾನಮಂತ್ರಿಯವರ ಮನ್ ಕಿ ಬಾತ್ - ಬಾನುಲಿಯ ಈ ಒಂದು ಕ್ರಾಂತಿಯು ೨೦೨೩ರ ಏಪ್ರಿಲ್ಗೆ ಶತ ಆವೃತ್ತಿ ಪೂರೈಸಲಿದೆ.

ಆಕಾಶವಾಣಿಯು ಇಂದಿನಿಂದ ಪ್ರತಿದಿನ ಪ್ರಧಾನಮಂತ್ರಿಯವರ ಮನದ ಮಾತಿನ ೧೦೦ ಚಿಂತನೆಗಳ ಮರು ಸಂಗ್ರಹವನ್ನು ಒಂದೊಂದಾಗಿ ಬಿತ್ತರಿಸಲಿದೆ. ಆಕಾಶವಾಣಿಯ ಜನಪ್ರಿಯ ಕಾರ್ಯಕ್ರಮವಾದ ಪ್ರಧಾನಮಂತ್ರಿಯವರ ಮನ್ ಕಿ ಬಾತ್ ಇದೇ ೨೦೨೩ರ ಏಪ್ರಿಲ್ ೩೦ಕ್ಕೆ (೧೦೦ನೇ) ಶತ ಆವೃತ್ತಿಯನ್ನು ಪೂರೈಸಲಿದೆ. ೨೦೧೪ ರ ಅಕ್ಟೋಬರ್ ೩ರ ವಿಜಯದಶಮಿಯ ಶುಭದಿನದಂದು ಆರಂಭಗೊಂಡ ಈ ಪ್ರತಿಷ್ಠಿತ ಕಾರ್ಯಕ್ರಮವು ಇಲ್ಲಿಯವರೆಗೆ ೯೮ ಆವೃತ್ತಿಯನ್ನು ಪೂರ್ಣಗೊಳಿಸಿದೆ. ಶತ ಆವೃತ್ತಿಯತ್ತ ಸಮೀಪಿಸುತ್ತಿರುವ ಸಂದರ್ಭದಲ್ಲಿ ಭಾರತದ ಪರಿವರ್ತನೆಯತ್ತ ಪ್ರಭಾವ ಬೀರಿದ ಈ ಕಾರ್ಯಕ್ರಮವನ್ನು ಕೇಂದ್ರೀಕರಿಸುವ ನಿಟ್ಟಿನಲ್ಲಿ.

ಆಕಾಶವಾಣಿಯು ಇಂದಿನಿಂದ ಒಂದು ವಿಶಿಷ್ಠ ಅಭಿಯಾನ ಆರಂಭಿಸುತ್ತಿದೆ. ಇಲ್ಲಿಯವರೆಗೆ ಪ್ರಧಾನಮಂತ್ರಿಯವರು ತಮ್ಮ ಮನ್ ಕಿ ಬಾತ್ನಲ್ಲಿ ಹೆಚ್ಚು ಪ್ರಾಮುಖ್ಯತೆ ಕೊಟ್ಟು ಉಲ್ಲೇಖಿಸಿರುವ ಆಯ್ದ ೧೦೦ ವಿಷಯಗಳನ್ನು ಈ ಅಭಿಯಾನದಲ್ಲಿ ಬಿತ್ತರಿಸಲಿದೆ. ಆಕಾಶವಾಣಿಯ ಎಲ್ಲಾ ವಾರ್ತೆಗಳು ಮತ್ತು ಅದರ ಸಂಪರ್ಕಜಾಲದಲ್ಲಿ ಬಿತ್ತರಗೊಳ್ಳುವ ಇತರ ಕಾರ್ಯಕ್ರಮಗಳಲ್ಲಿ ಪ್ರಧಾನಮಂತ್ರಿಯವರ ಪ್ರತಿ ಒಂದು ಸಂಚಿಕೆಯಿಂದ ಆಯ್ದ ಸೂಕ್ತ ವಿಷಯಕ್ಕೆ ಸಂಬಂಧಿಸಿದ ಪ್ರಧಾನಿಯವರ ಧ್ವನಿಯನ್ನು (ಬೈಟ್ಸ್) ಕೂಡ ಪ್ರಸಾರ ಮಾಡಲಾಗುವುದು.

ಈ ಅಭಿಯಾನವು ಇಂದಿನಿಂದ ಆರಂಭಗೊಂಡು ಮನ್ ಕಿ ಬಾತ್ ನ ೧೦೦ನೇ ಆವೃತ್ತಿಯು ಪೂರ್ಣಗೊಳ್ಳುವ ಒಂದು ದಿನ ಮುಂಚಿತವಾಗಿ ಅಂದರೆ ಏಪ್ರಿಲ್ ೨೯ರಂದು ಸಮಾಪನಗೊಳ್ಳಲಿದೆ. ಈ ಅಭಿಯಾನ ದೇಶದ ೪೨ ವಿವಿಧಭಾರತಿ ಕೇಂದ್ರಗಳು, ೨೫ ಎಫ್ಎಂ ವಾಹಿನಿಗಳು, ೪ ಎಫ್ಎಂ ಗೋಲ್ಡ್ ವಾಹಿನಿಗಳು ಮತ್ತು ೧೫೯ ಪ್ರೈಮರಿ ವಾಹಿನಿಗಳು ಸೇರಿದಂತೆ ಆಕಾಶವಾಣಿಯ ವಿವಿಧ ಕೇಂದ್ರಗಳಿಂದ ಬಿತ್ತರವಾಗಲಿದೆ. ಪ್ರಧಾನಮಂತ್ರಿಯವರ ಧ್ವನಿಯು ದೇಶದ ಎಲ್ಲಾ ಬಾನುಲಿ ಕೇಂದ್ರಗಳಿಂದ ಪ್ರಸಾರವಾಗುವ ಎಲ್ಲಾ ಪ್ರಮುಖ ಬುಲೆಟಿನ್ಗಳಲ್ಲೂ ಬಿತ್ತರವಾಗಲಿದೆ. ನಾಗರಿಕರು ಆಕಾಶವಾಣಿಯ ಯೂಟ್ಯೂಬ್ ವಾಹಿನಿ ಮತ್ತು ನ್ಯೂಸ್ ಆನ್ ಏರ್ ಆಪ್ ನಲ್ಲಿಯೂ ಕಾರ್ಯಕ್ರಮ ಆಲಿಸಬಹುದು. ಪ್ರಧಾನಮಂತ್ರಿಯವರು ಮನ್ ಕಿ ಬಾತ್ನಲ್ಲಿ ನಾಗರಿಕರೊಂದಿಗೆ ಬಾನುಲಿ ಮೂಲಕ ನಡೆಸಿದ ವಿಶಿಷ್ಠ ಮತ್ತು ನೇರ ಸಂವಹನವು ಇಲ್ಲಿಯವರೆಗೆ ೯೮ ಸಂಚಿಕೆಗಳನ್ನು ಪೂರೈಸಿದೆ. ಈ ಕಾರ್ಯಕ್ರಮ ಸ್ವಚ್ಛ ಭಾರತ್, ಬೇಟಿ ಬಚಾವೋ, ಬೇಟಿ ಪಢಾವೋ, ಜಲ ಸಂರಕ್ಷಣೆ, ಸ್ಥಳೀಯ ಉತ್ಪನ್ನಗಳಿಗೆ ಆದ್ಯತೆ ಇತ್ಯಾದಿ ಸಾಮಾಜಿಕ ಬದಲಾವಣೆಗಳು, ಮಾಧ್ಯಮಗಳಿಗೆ ಮೂಲ ಮತ್ತು ಅವುಗಳ ವೃದ್ಧಿಗೆ ಆದ್ಯತೆ ನೀಡಿದೆ. ಈ ಕಾರ್ಯಕ್ರಮವು ಖಾದಿ ಉದ್ಯಮ, ಭಾರತದ ಆಟಿಕೆಗಳ ಉದ್ಯಮ, ಆರೋಗ್ಯ ವಲಯದಲ್ಲಿನ ಸ್ಟಾರ್ಟ್ಅಪ್ಸ್, ಆಯುಷ್, ಬಾಹ್ಯಾಕಾಶ ಇತ್ಯಾದಿ ಕ್ಷೇತ್ರಗಳ ಮೇಲೆ ಹೆಚ್ಚಿನ ಪ್ರಭಾವ ಬೀರಿದೆ. ಇವುಗಳ ನಾವೀನ್ಯತೆ ಮತ್ತು ವಿಶಿಷ್ಠ ಸಂವಹನ ಪ್ರದರ್ಶನ ಶೈಲಿಯೊಂದಿಗೆ ಈ ಕಾರ್ಯಕ್ರಮವು ಸಂವಹನದ ವಿಶಿಷ್ಟ ಮಾದರಿಯೊಂದಿಗೆ ತನ್ನದೇ ಆದ ನೆಲೆಗಟ್ಟನ್ನು ರೂಪಿಸಿದೆ.

ಹಿಂದೂಸ್ತಾನ್ ಸಮಾಚಾರ್


 rajesh pande