ರಷ್ಯಾದ ಯುದ್ಧ ವಿಮಾನ ಡಿಕ್ಕಿ
ವಾಷಿಂಗ್ಟನ್/ ಮಾಸ್ಕೋ, 15 ಮಾರ್ಚ್ (ಹಿ.ಸ): ಆ್ಯಂಕರ್ : ಉಕ್ರೇನ್ ವಿರುದ್ಧ ಯುದ್ಧ ಆರಂಭವಾದ ಬಳಿಕ ಮೊದಲ ಬಾರಿಗೆ ಅ
ೇ


ವಾಷಿಂಗ್ಟನ್/ ಮಾಸ್ಕೋ, 15 ಮಾರ್ಚ್ (ಹಿ.ಸ):

ಆ್ಯಂಕರ್

: ಉಕ್ರೇನ್ ವಿರುದ್ಧ ಯುದ್ಧ ಆರಂಭವಾದ ಬಳಿಕ ಮೊದಲ ಬಾರಿಗೆ ಅಮೆರಿಕ ಮತ್ತು ರಷ್ಯಾ ಮುಖಾಮುಖಿಯಾಗಿದೆ. ರಷ್ಯಾದ Su-27 ಜೆಟ್ ಫೈಟರ್ ಕಪ್ಪು ಸಮುದ್ರದ ಮೇಲೆ ಅಮೆರಿಕದ MQ-9 ರೀಪರ್ ಡ್ರೋನ್ಗೆ ಡಿಕ್ಕಿ ಹೊಡೆದಿದೆ ಎಂದು ಯುಎಸ್ ಮಿಲಿಟರಿಯ ಯುರೋಪಿಯನ್ ಕಮಾಂಡ್ ತಿಳಿಸಿದೆ.

ನಮ್ಮ MQ-9 ಡ್ರೋನ್ ಅಂತಾರಾಷ್ಟ್ರೀಯ ವಾಯುಪ್ರದೇಶದಲ್ಲಿ ಎಂದಿನಂತೆ ಕಾರ್ಯಾಚರಣೆ ನಡೆಸುತ್ತಿತ್ತು. ಅದನ್ನು ರಷ್ಯಾದ ಜೆಟ್ ತಡೆಹಿಡಿದು ಹೊಡೆದುರುಳಿಸಿದೆ. ಇದರ ಪರಿಣಾಮವಾಗಿ ಡ್ರೋನ್ ಪತನಗೊಂಡಿದೆ ಎಂದು ಅಮೆರಿಕ ಹೇಳಿದೆ.ಬ್ರಸೆಲ್ಸ್ನಲ್ಲಿರುವ ನ್ಯಾಟೋ ರಾಜತಾಂತ್ರಿಕರು ಘಟನೆಯನ್ನು ದೃಢಪಡಿಸಿದ್ದಾರೆ. ಕಣ್ಗಾವಲು ಮಾಡಲು ಅಮೆರಿಕ MQ-9 ಬಳಸುತ್ತಿದೆ. ರಷ್ಯಾದ ನೌಕಾ ಪಡೆಗಳ ಮೇಲೆ ಕಣ್ಣಿಟ್ಟು ಕಪ್ಪು ಸಮುದ್ರದ ಮೇಲೆ ದೀರ್ಘಕಾಲ ಕಾರ್ಯನಿರ್ವಹಿಸುತ್ತಿತ್ತು.

ಹಿಂದೂಸ್ತಾನ್ ಸಮಾಚಾರ್


 rajesh pande