ಚಿನ್ನ, ಬೆಳ್ಳಿ ಇನ್ನಷ್ಟು ದುಬಾರಿ
ಮುಂಬೈ, 14 ಮಾರ್ಚ್ (ಹಿ.ಸ): ಆ್ಯಂಕರ್ :ಮೂರು ದಿನಗಳಿಂದ ಚಿನ್ನದ ಬೆಲೆ ಏರಿಕೆ ಇನ್ನೂ ಮುಂದುವರಿಯುತ್ತಿದೆ. ಭಾರತದಲ್
ಚಿನ್ನ, ಬೆಳ್ಳಿ ಇನ್ನಷ್ಟು ದುಬಾರಿ


ಮುಂಬೈ, 14 ಮಾರ್ಚ್ (ಹಿ.ಸ):

ಆ್ಯಂಕರ್ :ಮೂರು ದಿನಗಳಿಂದ ಚಿನ್ನದ ಬೆಲೆ ಏರಿಕೆ ಇನ್ನೂ ಮುಂದುವರಿಯುತ್ತಿದೆ. ಭಾರತದಲ್ಲಿ ಒಂದು ಗ್ರಾಮ್ ಚಿನ್ನದ ಬೆಲೆ 29 ರುಪಾಯಿಯಷ್ಟು ಏರಿಕೆ ಆಗಿದೆ. ಭಾರತದಲ್ಲಿ 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ 52,450 ರುಪಾಯಿಗೆ ಏರಿದೆ. 10 ಗ್ರಾಮ್ಗೆ ಸುಮಾರು 300 ರೂನಷ್ಟು ಏರಿಕೆಯಾಗಿದೆ. ಶನಿವಾರವಷ್ಟೇ ಬೆಲೆಗಳು 51 ಸಾವಿರ ಮಟ್ಟಕ್ಕಿಂತ ಕಡಿಮೆ ಇತ್ತು. ಈಗ ಭಾರತದ ಎಲ್ಲಾ ನಗರಗಳಲ್ಲೂ 22 ಕ್ಯಾರಟ್ ಚಿನ್ನದ ಬೆಲೆ 52 ಸಾವಿರ ರೂ ಗಡಿ ದಾಟಿ ಹೋಗಿದೆ. ಚೆನ್ನೈನಲ್ಲಿ 53 ಸಾವಿರದ ಗಡಿ ದಾಟಿದೆ. 24 ಕ್ಯಾರಟ್ ಚಿನ್ನದ ಬೆಲೆಯೂ ಈ ಬಾರಿ ಏರಿಕೆಯಾಗಿದೆ. ಬೆಳ್ಳಿ ಬೆಲೆ ಭಾರತದಲ್ಲಿ 100 ಗ್ರಾಮ್ಗೆ 6,600 ರುಪಾಯಿ ಆಗಿದೆ. ಇನ್ನು, ಬೆಂಗಳೂರಿನಲ್ಲಿ ಚಿನ್ನದ ಬೆಲೆ ಏರಿಕೆಯಾಗಿದ್ದು, 10 ಗ್ರಾಮ್ಗೆ 52,500ರುಪಾಯಿಗೆ ಹೆಚ್ಚಳಗೊಂಡಿದೆ. ಬೆಳ್ಳಿ ಬೆಲೆ 100 ಗ್ರಾಮ್ಗೆ 6,950 ರುಪಾಯಿ ಆಗಿದೆ. ದಕ್ಷಿಣ ಭಾರತದ ವಿವಿಧೆಡೆ ಮತ್ತು ಒಡಿಶಾದಲ್ಲಿ ಬೆಳ್ಳಿ ಬೆಲೆ ಏಕಸ್ಥಿತಿಯಲ್ಲಿದೆ.

ವಿದೇಶಗಳ ಚಿನಿವಾರಪೇಟೆಗಳಲ್ಲಿಯೂ ಚಿನ್ನದ ಬೆಲೆ ಏರಿಕೆ ಕಾಣುತ್ತಿದೆ. ಅನಿವಾಸಿ ಭಾರತೀಯರು ಹೆಚ್ಚಾಗಿ ನೆಲಸಿರುವ ಅರಬ್ ದೇಶಗಳು, ಅಮೆರಿಕ, ಸಿಂಗಾಪುರ, ಮಲೇಷ್ಯಾ ದೇಶಗಳಲ್ಲಿ ಚಿನ್ನದ ಬೆಲೆ ಭಾರತಕ್ಕೆ ಹೋಲಿಸಿದರೆ ಕಡಿಮೆ ಇದೆ. ಯುಎಇಯ ಭಾಗವಾಗಿರುವ ದುಬೈ, ಅಬುಧಾಬಿ ಮತ್ತು ಶಾರ್ಜಾ ನಗರಗಳಲ್ಲಿ ಬೆಲೆ ತುಸು ಹೆಚ್ಚೇ ಏರಿಕೆಯಾಗಿದೆ. ಈ ಎಲ್ಲಾ ದೇಶಗಳಲ್ಲೂ 22 ಕ್ಯಾರಟ್ನ 10 ಗ್ರಾಮ್ ಚಿನ್ನದ ಬೆಲೆ 47 ಸಾವಿರ ರೂನಿಂದ 49 ಸಾವಿರ ರೂ ವರೆಗೂ ಇದೆ. ಓಮನ್ ಮತ್ತು ಕತಾರ್ ದೇಶಗಳಲ್ಲಿ ಚಿನ್ನದ ಬೆಲೆ 49 ಸಾವಿರ ರೂ ಗಡಿ ದಾಟಿ ಹೋಗಿದೆ.

ಬೆಲೆ ಏರಿಕೆಗೆ ಏನು ಕಾರಣ?

ಅಮೆರಿಕದ ಆರ್ಥಿಕತೆಯ ತುಮುಲ, ನಿರುದ್ಯೋಗ ಅಂಕಿ ಅಂಶದ ಗೊಂದಲ, ಹಣದುಬ್ಬರ ಅನಿಶ್ಚಿತತೆ, ಬಡ್ಡಿ ದರ ಬಗ್ಗೆ ಅಸ್ಪಷ್ಟತೆ, ಡಾಲರ್ ದುರ್ಬಲಗೊಂಡಿರುವುದು ಇವೆಲ್ಲವೂ ಹೂಡಿಕೆದಾರರನ್ನು ಚಿನ್ನದತ್ತ ಗಮನ ಕೊಡುವಂತೆ ಮಾಡಿವೆ. ಹೀಗಾಗಿ, ಚಿನ್ನಕ್ಕೆ ಬೇಡಿಕೆ ಹೆಚ್ಚಿ ಬೆಲೆ ಕೂಡ ಹೆಚ್ಚುತ್ತಿದೆ. ತಜ್ಞರ ಪ್ರಕಾರ ಇನ್ನೂ ಬಹಳಷ್ಟು ದಿನ ಚಿನ್ನದ ಬೆಲೆ ಏರಿಕೆಯ ಟ್ರೆಂಡ್ ಮುಂದುವರಿಯಬಹುದು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಚಿನ್ನದ ಮೇಲೆ ಹೂಡಿಕೆ ಮಾಡಲು ಈಗಲೂ ಪ್ರಶಸ್ತ ಸಮಯ ಇದೆ ಎಂಬ ಸಲಹೆಯನ್ನು ಕೊಡಲಾಗಿದೆ.

ಭಾರತದಲ್ಲಿರುವ ಬೆಲೆ

22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 52,450 ರೂ

24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 57,220 ರೂ

ಬೆಳ್ಳಿ ಬೆಲೆ 10 ಗ್ರಾಂಗೆ: 660 ರೂ

ಬೆಂಗಳೂರಿನಲ್ಲಿರುವ ಬೆಲೆ

22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 52,500 ರೂ

24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 57,220 ರೂ

ಬೆಳ್ಳಿ ಬೆಲೆ 10 ಗ್ರಾಂಗೆ: 695 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ)

ಬೆಂಗಳೂರು: 52,500 ರೂ

ಚೆನ್ನೈ: 53,250 ರೂ

ಮುಂಬೈ: 52,450 ರೂ

ದೆಹಲಿ: 52,600 ರೂ

ಕೋಲ್ಕತಾ: 52,450 ರೂ

ಕೇರಳ: 52,450 ರೂ

ಅಹ್ಮದಾಬಾದ್: 52,500 ರೂ

ಜೈಪುರ್: 52,600 ರೂ

ಲಕ್ನೋ: 52,600 ರೂ

ಭುವನೇಶ್ವರ್: 52,450 ರೂ

ಇದನ್ನೂ ಓದಿ: Bank Sale: ಕೇವಲ 100 ರುಪಾಯಿಗೆ ಎಚ್ಎಸ್ಬಿಸಿಗೆ ಮಾರಾಟವಾಯ್ತು ಈ ಬ್ಯಾಂಕ್

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ):

ಮಲೇಷ್ಯಾ: 2,700 ರಿಂಗಿಟ್ (48,967 ರುಪಾಯಿ)

ದುಬೈ: 2117.50 ಡಿರಾಮ್ (47,440 ರುಪಾಯಿ)

ಅಮೆರಿಕ: 575 ಡಾಲರ್ (47,130 ರುಪಾಯಿ)

ಸಿಂಗಾಪುರ: 788 ಸಿಂಗಾಪುರ್ ಡಾಲರ್ (48,076 ರುಪಾಯಿ)

ಕತಾರ್: 2,175 ಕತಾರಿ ರಿಯಾಲ್ (49,170 ರೂ)

ಓಮನ್: 230.50 ಒಮಾನಿ ರಿಯಾಲ್ (49,289 ರುಪಾಯಿ)

ಕುವೇತ್: 180 ಕುವೇತಿ ದಿನಾರ್ (48,335 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (10 ಗ್ರಾಮ್ಗೆ)

ಬೆಂಗಳೂರು: 6,950 ರೂ

ಚೆನ್ನೈ: 6,950 ರೂ

ಮುಂಬೈ: 6,600 ರೂ

ದೆಹಲಿ: 6,600 ರೂ

ಕೋಲ್ಕತಾ: 6,600 ರೂ

ಕೇರಳ: 6,950 ರೂ

ಅಹ್ಮದಾಬಾದ್: 6,600 ರೂ

ಜೈಪುರ್: 6,600 ರೂ

ಲಕ್ನೋ: 6,600 ರೂ

ಭುವನೇಶ್ವರ್: 6,950 ರೂ

ಹಿಂದೂಸ್ತಾನ್ ಸಮಾಚಾರ್


 rajesh pande