ಪಾವಗಡ ಸೋಲಾರ್ ಪಾರ್ಕ್ಗೆ ಗಣ್ಯರ ಭೇಟಿ
ಬೆಂಗಳೂರು, 31 ಜನವರಿ(ಹಿ.ಸ): ಆ್ಯಂಕರ್ :ಈ ಬಾರಿಯ ಜಿ20 ಸಭೆಗಳು ಭಾರತದ ವಿವಿಧೆಡೆ ನಡೆಯಲಿದ್ದು. ಅದರಲ್ಲಿ ಒಂದು ಬೆಂಗಳ
ಪಾವಗಡ ಸೋಲಾರ್ ಪಾರ್ಕ್ಗೆ ಗಣ್ಯರ ಭೇಟಿ


ಬೆಂಗಳೂರು, 31 ಜನವರಿ(ಹಿ.ಸ):

ಆ್ಯಂಕರ್ :ಈ ಬಾರಿಯ ಜಿ20 ಸಭೆಗಳು ಭಾರತದ ವಿವಿಧೆಡೆ ನಡೆಯಲಿದ್ದು. ಅದರಲ್ಲಿ ಒಂದು ಬೆಂಗಳೂರಿನಲ್ಲಿ ಆಗುತ್ತಿದೆ. ಫೆಬ್ರುವರಿ 5ರಿಂದ 7ರವರೆಗೂ ಜಿ20ಯ ಎನರ್ಜಿ ಟ್ರಾನ್ಸಿಶನ್ ವರ್ಕಿಂಗ್ ಗ್ರೂಪ್ನ ಸಭೆ ಬೆಂಗಳೂರಿನಲ್ಲಿ ನಡೆಯಲಿದೆ. ಭಾರತದ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ಈ ಸಭೆಯಲ್ಲಿ ಜಿ20 ರಾಷ್ಟ್ರಗಳು ಮತ್ತು ಅತಿಥಿ ರಾಷ್ಟ್ರಗಳಿಂದ ನಿಯೋಗಗಳ ಸದಸ್ಯರು ಪಾಲ್ಗೊಳ್ಳಲಿದ್ದಾರೆ.

ವಿಶ್ವಬ್ಯಾಂಕ್, ಏಷ್ಯನ್ ಡೆವಲಪ್ಮೆಂಟ್ ಬ್ಯಾಂಕ್, ಯುಎನ್ಡಿಪಿ, ಇಂಟರ್ನ್ಯಾಷನಲ್ ಎನರ್ಜಿ ಏಜೆನ್ಸ್, ಕ್ಲೀನ್ ಎನರ್ಜಿ ಮಿನಿಸ್ಟೆರಿಯಲ್, ಇಂಟರ್ನ್ಯಾಷನಲ್ ಸೋಲಾರ್ ಅಲಾಯನ್ಸ್ ಮೊದಲಾದ ಅಂತಾರಾಷ್ಟ್ರೀಯ ಸಂಘ ಸಂಸ್ಥೆಗಳು ಕೂಡ ತಮ್ಮ ಪ್ರತಿನಿಧಿಗಳನ್ನು ಈ ಸಭೆಗೆ ಕಳುಹಿಸುತ್ತಿವೆ.

ಬೆಂಗಳೂರಿನಲ್ಲಿ ಇನ್ಫೋಸಿಸ್ನ ಗ್ರೀನ್ ಬ್ಯುಲ್ಡಿಂಗ್ ಕ್ಯಾಂಪಸ್ ಮತ್ತು ಪಾವಗಡದ ಮೆಗಾ ಸೋಲಾರ್ ಪಾರ್ಕ್ಗೆ ಈ ಜಿ20 ಗುಂಪಿನ ನಿಯೋಗ ಸದಸ್ಯರು ಭೇಟಿ ನೀಡಿ ಅಲ್ಲಿ ನಡೆಯುತ್ತಿರುವ ಕಾರ್ಯಗಳನ್ನು ಗಮನಿಸಲಿದ್ದಾರೆ. ಹವಾಮಾನ ಬದಲಾವಣೆಯ ಸಮಸ್ಯೆ ನಿವಾರಣೆಗೆ ಭಾರತ ಹೇಗೆ ಪ್ರಯತ್ನಿಸುತ್ತಿದೆ, ಮರುಬಳಕೆ ಕ್ಷೇತ್ರಕ್ಕೆ ಇಲ್ಲಿ ಹೇಗೆ ಒತ್ತುಕೊಡಲಾಗುತ್ತಿದೆ ಎಂಬುದನ್ನೂ ಜಾಗತಿಕ ದೇಶಗಳ ಪ್ರತಿನಿಧಿಗಳು ಅರಿಯಲಿದ್ದಾರೆ ಎಂದು ವರದಿಗಳು ಹೇಳುತ್ತಿವೆ.

ಹಿಂದೂಸ್ತಾನ್ ಸಮಾಚಾರ್


 rajesh pande