6ನೇ ತರಗತಿ ಪ್ರವೇಶ : ಅವಧಿ ವಿಸ್ತರಣೆ
ಕೊಪ್ಪಳ, 31 ಜನವರಿ(ಹಿ.ಸ): ಆ್ಯಂಕರ್: ಜಿಲ್ಲೆಯ ಕುಕನೂರಿನ ನವೋದಯ ವಿದ್ಯಾಲಯದ 6ನೇ ತರಗತಿ ಪ್ರವೇಶಕ್ಕೆ ಆನ್ಲೈನ್ ಮೂಲಕ
6ನೇ ತರಗತಿ ಪ್ರವೇಶ : ಅವಧಿ ವಿಸ್ತರಣೆ


ಕೊಪ್ಪಳ, 31 ಜನವರಿ(ಹಿ.ಸ):

ಆ್ಯಂಕರ್: ಜಿಲ್ಲೆಯ ಕುಕನೂರಿನ ನವೋದಯ ವಿದ್ಯಾಲಯದ 6ನೇ ತರಗತಿ ಪ್ರವೇಶಕ್ಕೆ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದ್ದು, ಅವಧಿಯನ್ನು ಫೆಬ್ರವರಿ 08 ರವರೆಗೆ ವಿಸ್ತರಿಸಲಾಗಿದೆ.

ಜವಾಹರ ನವೋದಯ ವಿದ್ಯಾಲಯದ 6ನೇ ತರಗತಿಗಾಗಿ 2023-24ರ ಶೈಕ್ಷಣಿಕ ವರ್ಷಕ್ಕಾಗಿ ಪ್ರವೇಶ ಪರೀಕ್ಷೆಯ ಅರ್ಜಿಗಳನ್ನು ಅರ್ಹ ವಿದ್ಯಾರ್ಥಿಗಳು ಆನ್ಲೈನ್ ಮೂಲಕ ವೆಬ್ಸೈಟ್ www.navodaya.gov.in ಅಥವಾ http://cbseitms.rcil.gov.in/nvs ಮುಖಾಂತರ ಫೆ. 08 ರೊಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಕುಕನೂರು ಜವಾಹರ ನವೋದಯ ವಿದ್ಯಾಲಯದ ಪ್ರಾಚಾರ್ಯರಾದ ಜಯಾ ಜೆ ಅವರು ತಿಳಿಸಿದ್ದಾರೆ.


 rajesh pande