ಗುತ್ತಿಗೆ ಹಾಸ್ಟಲ್ ಸಿಬ್ಬಂದಿ ಖಾಯಂ
ಬಳ್ಳಾರಿ,, 31 ಜನವರಿ(ಹಿ.ಸ): ಆ್ಯಂಕರ್: ಸರ್ಕಾರಿ ಹಾಸ್ಟಲ್ಗಳಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವ ಕಾರ್ಮ
  ಗುತ್ತಿಗೆ ಹಾಸ್ಟಲ್ ಸಿಬ್ಬಂದಿ ಖಾಯಂ ಮತ್ತು ಉದ್ಯೋಗ ಭದ್ರತೆಗೆ ಆಗ್ರಹ 


  ಗುತ್ತಿಗೆ ಹಾಸ್ಟಲ್ ಸಿಬ್ಬಂದಿ ಖಾಯಂ ಮತ್ತು ಉದ್ಯೋಗ ಭದ್ರತೆಗೆ ಆಗ್ರಹ 


ಬಳ್ಳಾರಿ,, 31 ಜನವರಿ(ಹಿ.ಸ):

ಆ್ಯಂಕರ್: ಸರ್ಕಾರಿ ಹಾಸ್ಟಲ್ಗಳಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವ ಕಾರ್ಮಿಕರ ಸೇವೆಯನ್ನು ಖಾಯಂ ಮಾಡಿ ಉದ್ಯೋಗ ಭದ್ರತೆ ಒದಗಿಸಲು ಆಗ್ರಹಿಸಿ ನಗರದಲ್ಲಿ ಪ್ರತಿಭಟನೆ ನಡೆದಿದೆ.

ಕರ್ನಾಟಕ ರಾಜ್ಯ ಸಂಯುಕ್ತ ವಸತಿನಿಲಯ ಕಾರ್ಮಿಕರ ಸಂಘದ ಜಿಲ್ಲಾ ಅಧ್ಯಕ್ಷ ಡಾ. ಎನ್. ಪ್ರಮೋದ್ ಅವರು, ಕೆಲ ವರ್ಷಗಳಿಂದ ಹೊರಗುತ್ತಿಗೆ ಆಧಾರದ ಮೇಲೆ ಸೇವೆ ಸಲ್ಲಿಸುತ್ತಿರುವ ಹಾಸ್ಟಲ್ಗಳಲ್ಲಿಯ ಎಲ್ಲಾ ಹಂತದ ಸಿಬ್ಬಂದಿ ಮತ್ತು ಕಾರ್ಮಿಕರ ಸೇವೆಯನ್ನು ಕೂಡಲೇ ಖಾಯಂ ಮಾಡಬೇಕು. ಕಾನೂನುಬದ್ಧ ಸೌಲಭ್ಯಗಳನ್ನು ಒದಗಿಸಬೇಕು. ಗುತ್ತಿಗೆ - ಹೊರಗುತ್ತಿಗೆ ಪದ್ದತಿಯನ್ನು ಕೂಡಲೇ ರದ್ದು ಮಾಡಬೇಕು ಎಂದು ಆಗ್ರಹಿಸಿದರು.

ಕೋವಿಡ್-19ರ ಲಾಕ್ಡೌನ್ ಅವಧಿಯ ವೇತನವನ್ನು ತಕ್ಷಣವೇ ಪಾವತಿ ಮಾಡಬೇಕು. ಮಾಸಿಕ ವೇತನ, ಇಪಿಎಫ್ ಮತ್ತು ಇಎಸ್ಐ ವಂತಿಗೆಯನ್ನು ಪ್ರತಿ ತಿಂಗಳು ಪಾವತಿ ಆಗುತ್ತಿರುವ ಕುರಿತು ಅಧಿಕಾರಿಗಳು ಖಚಿತ ಪಡಿಸಿಕೊಳ್ಳಬೇಕು. ನೇರವಾಗಿ ಕೆಲಸಗಾರರ ಖಾತೆಗೆ ಹಣ ವರ್ಗಾವಣೆ ಆಗಬೇಕು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿದರು.


 rajesh pande