ಭಾದಿತ ಮಗುವಿಗೆ ಆಪ್ತ ಸಮಾಲೋಚನೆ ಅವಶ್ಯಕ
ಕೊಪ್ಪಳ, 31 ಜನವರಿ(ಹಿ.ಸ): ಆ್ಯಂಕರ್: ಭಾದಿತ ಮಗುವಿಗೆ ಆಪ್ತ ಸಮಾಲೋಚನೆಯ ಮಾಡುವುದು ಅವಶ್ಯಕವಾಗಿದೆ ಎಂದು ಗೌರವಾನ್ವಿತ
ಭಾದಿತ ಮಗುವಿಗೆ ಆಪ್ತ ಸಮಾಲೋಚನೆ ಅವಶ್ಯಕ 


ಭಾದಿತ ಮಗುವಿಗೆ ಆಪ್ತ ಸಮಾಲೋಚನೆ ಅವಶ್ಯಕ 


ಭಾದಿತ ಮಗುವಿಗೆ ಆಪ್ತ ಸಮಾಲೋಚನೆ ಅವಶ್ಯಕ 


ಕೊಪ್ಪಳ, 31 ಜನವರಿ(ಹಿ.ಸ):

ಆ್ಯಂಕರ್: ಭಾದಿತ ಮಗುವಿಗೆ ಆಪ್ತ ಸಮಾಲೋಚನೆಯ ಮಾಡುವುದು ಅವಶ್ಯಕವಾಗಿದೆ ಎಂದು ಗೌರವಾನ್ವಿತ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ದೇವೇಂದ್ರ ಪಂಡಿತ್ ಅವರು ಹೇಳಿದ್ದಾರೆ.

ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಪೊಲೀಸ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಯುನಿಸೆಫ್-ಮಕ್ಕಳ ರಕ್ಷಣಾ ಯೋಜನೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಡಾನ್ ಬೊಸ್ಕೋ ಸಂಸ್ಥೆ, ಹೊಸಪೇಟೆ ಇವರುಗಳ ಸಂಯುಕ್ತಾಶ್ರಯದಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕರ ಸಭಾಂಗಣದಲ್ಲಿ ಜನವರಿ 30 ರಂದು ಹಮ್ಮಿಕೊಂಡಿದ್ದ ಜಿಲ್ಲೆಯ ಎಲ್ಲಾ ಪೊಲೀಸ್ ಅಧಿಕಾರಿಗಳಿಗೆ “ಮಕ್ಕಳ ಹಕ್ಕುಗಳ ಪರವಾದ ಕಾನೂನುಗಳ ಇತ್ತೀಚಿನ ತಿದ್ದುಪಡಿಗಳ ಕುರಿತು” ಒಂದು ದಿನದ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಭಾರತ ದೇಶವು ವಿಶ್ವ ಸಂಸ್ಥೆಯ ಮಕ್ಕಳ ಹಕ್ಕುಗಳ ಒಡಂಬಡಿಕೆಗೆ ಸಹಿ ಹಾಕಿದ್ದು, ಮಕ್ಕಳು ಅವರ ಹಕ್ಕುಗಳನ್ನು ಅನುಭವಿಸುವಂತಹ ಮುಕ್ತ ವಾತಾವರಣದಲ್ಲಿ ಬೆಳೆಯಲು ಹಾಗೂ ಮಕ್ಕಳ ಸ್ನೇಹಿ ವಾತಾವರಣ ನಿರ್ಮಾಣಕ್ಕಾಗಿ ಹಲವಾರು ನೀತಿಗಳನ್ನು ಮತ್ತು ಕಾನೂನುಗಳನ್ನು ಜಾರಿಗೊಳಿಸಲಾಗಿದೆ.

ಈ ಕಾನೂನುಗಳಲ್ಲಿ ಲೈಂಗಿಕ ಅಪರಾಧಗಳಿಂದ ಮಕ್ಕಳ ಸಂರಕ್ಷಣಾ ಕಾಯ್ದೆ-2012 ಮತ್ತು ಮಕ್ಕಳ ನ್ಯಾಯ (ಮಕ್ಕಳ ಪೋಷಣೆ ಮತ್ತು ರಕ್ಷಣೆ) ಕಾಯ್ದೆ-2015. ಲೈಂಗಿಕ ಅಪರಾಧಗಳಿಂದ ಮಕ್ಕಳ ಸಂರಕ್ಷಣಾ ಕಾಯ್ದೆ-2012 ನಿಯಮಾವಳಿಗಳನ್ನು ರಚಿಸಿದ್ದು, 2020ರ ಮಾರ್ಚ್ 09 ರಿಂದ ಜಾರಿಯಲ್ಲಿದೆ.

ಈ ನಿಯಮಾವಳಿಗಳನ್ವಯ ಭಾದಿತ ಮಗುವಿಗೆ ಮಕ್ಕಳ ಕಲ್ಯಾಣ ಸಮಿತಿಯ ಮೂಲಕ ಪುನರ್ವಸತಿಯನ್ನು ಕಲ್ಪಿಸಬಹುದಾಗಿದೆ ಎಂದರು.

ಅಲ್ಲದೇ ಭಾರತೀಯ ದಂಡ ಪ್ರಕ್ರೀಯಾ ಸಂಹಿತಿಯ ಕಲಂ357(ಎ) ಅಡಿಯಲ್ಲಿ ಭಾದಿತರ ಪರಿಹಾರ ನಿಧಿಯಡಿಯಲ್ಲಿ ಮಧ್ಯಾಂತರ ಪರಿಹಾರವನ್ನು ಹಾಗೂ ಅಂತಿಮ ಪರಿಹಾರವನ್ನು ನೀಡಬಹುದಾಗಿದೆ.

ಈ ಪರಿಹಾರ ಧನವನ್ನು ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯವು (ಎಫ್.ಟಿ.ಎಸ್.ಸಿ) ಆದೇಶದ ಮೂಲಕ ನೀಡಲಾಗುತ್ತದೆ. ಈ ನಿಯಮಾವಳಿಗಳನ್ವಯ ಪ್ರಕರಣ ದಾಖಲಾದ ನಂತರ ಭಾದಿತ ಮಗು ಅಥವಾ ಮಗುವಿನ ಪರವಾಗಿ ಯಾರಾದರು ಅರ್ಜಿಯನ್ನು ಸಲ್ಲಿಸಬಹುದು.

ಪ್ರಕರಣದ ಅಂತಿಮ ವಿಲೇವಾರಿ ಏನೇ ಆದಾರು ಸಹ ಮಗುವಿನ ಮೇಲಾದ ಪರಿಣಾಮಗಳನ್ನು ಆಧರಿಸಿ ನ್ಯಾಯಾಲಯವು ಪರಿಹಾರ ಧನಕ್ಕೆ ಆದೇಶಿಸುತ್ತದೆ. ಈ ಎಲ್ಲಾ ಅವಕಾಶಗಳ ಕುರಿತು ಮಕ್ಕಳ ಕಲ್ಯಾಣ ಪೊಲೀಸ್ ಅಧಿಕಾರಿಗಳು ಭಾದಿತ ಮಗುವಿಗೆ ಅಥವಾ ಮಗುವಿನ ಪಾಲಕರು, ಪೋಷಕರಿಗೆ ಆಪ್ತ ಸಮಾಲೋಚನೆಯ ಮೂಲಕ ಮಾಹಿತಿ ನೀಡುವುದು ಅವಶ್ಯಕವಾಗಿದೆ ಎಂದರು.

ಜಿಲ್ಲಾ ಬಾಲ ನ್ಯಾಯ ಮಂಡಳಿಯ ಸದಸ್ಯರಾದ ಶೇಖರಗೌಡ ಜಿ ರಾಮತ್ನಾಳ ಅವರು ಮಾತನಾಡಿ, “ಮಕ್ಕಳ ನ್ಯಾಯ(ಮಕ್ಕಳ ಪೋಷಣೆ ಮತ್ತು ರಕ್ಷಣೆ)ಕಾಯ್ದೆ-2015ಕ್ಕೆ ಸರಕಾರವು ಕಾಯ್ದೆ-2021ರ ಮೂಲಕ ತಿದ್ದುಪಡಿಯನ್ನು ತಂದಿದ್ದು, ಈತಿದ್ದು ಪಡಿ ಕಾಯ್ದೆಯು 2021ರ ಆಗಸ್ಟ್ 07 ರಿಂದ ಜಾರಿಯಲ್ಲಿರುತ್ತದೆ.

ಈ ಕಾಯ್ದೆಯನ್ವಯ ಕಾನೂನಿನೊಡನೆ ಸಂಘರ್ಷದಲ್ಲಿರುವ ಯಾವುದೇ ಮಗುವಿನ ವಯಸ್ಸಿನ ನಿರ್ಧರಣೆಯನ್ನು ಆ ಮಗುವಿನ ಶಾಲಾ ದೃಡೀಕರಣ, ಜನನ ಪ್ರಮಾಣ ಪತ್ರ, ಒಂದು ವೇಳೆ ಈ ಎರಡು ದಾಖಲೆಗಳು ಇಲ್ಲದಿರುವ ಸಂದರ್ಭದಲ್ಲಿ ಮಾತ್ರ ವೈದ್ಯಕೀಯ ತಪಾಸಣಾ ವರದಿಯ ಮೂಲಕ ನಿರ್ಧರಿಸಲಾದ ವಯಸ್ಸನ್ನು ಪರಿಗಣಿಸಬೇಕು.

ಆದ್ದರಿಂದ ಮಕ್ಕಳ ಕಲ್ಯಾಣ ಪೊಲೀಸ್ ಅಧಿಕಾರಿಗಳ ಮುಂದೆ ಯಾವುದೇ ಕಾನೂನಿನೊಡನೆ ಸಂಘರ್ಷದಲ್ಲಿರುವ ಮಗುವಿನ ಪ್ರಕರಣವನ್ನು ನಿರ್ವಹಿಸುವಾಗ ಮಗುವಿನ ವಯಸ್ಸಿನ ನಿರ್ಧಾರಣೆಗೆ ಕಾನೂನಿನಲ್ಲಿ ಸೂಚಿಸಿರುವ ದಾಖಲಾತಿ ಪಡೆದುಕೊಂಡು ಅಥವಾ ಸಂಗ್ರಹಿಸಿ ಪ್ರಕರಣವನ್ನು ನಿರ್ವಹಿಸಬೇಕು ಎಂದರು.

ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳಾದ ರೋಹಿಣಿ ಕೊಟಗಾರ ಅವರು ಮಾತನಾಡಿ, ಮಕ್ಕಳ ನ್ಯಾಯ (ಮಕ್ಕಳ ಪೋಷಣೆ ಮತ್ತು ರಕ್ಷಣೆ) ಕಾಯ್ದೆಯ ಕಲಂ 107ರಡಿಯಲ್ಲಿ ಪ್ರತಿ ಜಿಲ್ಲೆಯಲ್ಲಿ ಮಕ್ಕಳ ವಿಶೇಷ ಪೊಲೀಸ್ ಘಟಕವು ಸ್ಥಾಪಿತವಾಗಿದ್ದು, ಪೊಲೀಸ್ ಠಾಣೆಯ ಠಾಣಾಧಿಕಾರಿಗಳು (ಪಿ.ಎಸ್.ಐ) ಮಕ್ಕಳ ಕಲ್ಯಾಣ ಪೊಲೀಸ್ ಅಧಿಕಾರಿಗಳಾಗಿದ್ದಾರೆ.

ಮಿಷನ್ ವಾತ್ಸಲ್ಯದಡಿಯಲ್ಲಿ ಲಭ್ಯವಿರುವ ಸೇವೆಗಳಾದ ಸಾಂಸ್ಥಿಕ ಸೇವೆ, ಅಸಾಂಸ್ಥಿಕ ಸೇವೆಗಳಾದ ದತ್ತು ಕಾರ್ಯಕ್ರಮ, ಪ್ರಾಯೋಜಕತ್ವ, ವಿಶೇಷ ಪಾಲನಾ ಯೋಜನೆಯಡಿಯಲ್ಲಿ ಗುರುತಿಸಬಹುದಾದ ಅರ್ಹ ಮಕ್ಕಳು ಕಂಡುಬಂದಲ್ಲಿ ಅತಂಹ ಮಕ್ಕಳನ್ನು “ಮಕ್ಕಳ ಕಲ್ಯಾಣ ಸಮಿತಿ”ಗೆ ಹಾಜರಪಡಿಸುವ ಮೂಲಕ ಯೋಜನೆಗಳನ್ನು ಒದಗಿಸಬಹುದಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಡಿವೈಎಸ್ಪಿ ಶರಣಪ್ಪ ಸುಬೇದಾರ್ ಸೇರಿದಂತೆ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷರಾದ ನಿಲೋಫರ್ ಎಸ್ ರಾಂಪೂರ, ಯುನಿಸ್ಸೆಫ್ ಮಕ್ಕಳ ರಕ್ಷಣಾ ಯೋಜನೆಯ ವ್ಯವಸ್ಥಾಪಕರಾದ ಹರೀಶ್ ಜೋಗಿ ಸೇರಿದಂತೆ ಜಿಲ್ಲೆಯ ಎಲ್ಲಾ ಮಕ್ಕಳ ಕಲ್ಯಾಣ ಪೊಲೀಸ್ ಅಧಿಕಾರಿಗಳು, ಸಹಾಯಕ ಮಕ್ಕಳ ಕಲ್ಯಾಣ ಪೊಲೀಸ್ ಅಧಿಕಾರಿಗಳು, ಆರಕ್ಷಕ ನಿರೀಕ್ಷಕರು, ಪೊಲೀಸ್ ಉಪಾಧೀಕ್ಷಕರು, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಪ್ರತಿಭಾ ಅವರು ಪ್ರಾರ್ಥಿಸಿದರು, ಡಾ.ಸುಮಲತಾ ಆಕಳವಾಡಿ ಅವರು ಕಾರ್ಯಕ್ರಮ ನಿರೂಪಿಸಿದರು, ರವಿಕುಮಾರ ಅವರು ಪ್ರಸ್ತಾವಿಕವಾಗಿ ಮಾತನಾಡಿದರು. ಶರಣಪ್ಪ ಅವರು ವಂದಿಸಿದರು.


 rajesh pande