ವಿಶ್ವವೇ ಇಂದು ಭಾರತದತ್ತ ತಿರುಗಿ ನೋಡುತ್ತಿದೆ
ನವದೆಹಲಿ, 31 ಜನವರಿ(ಹಿ.ಸ): ಆ್ಯಂಕರ್ : ಇಂದು ಸಂಸತ್ನಲ್ಲಿ ಬಜೆಟ್ ಅಧಿವೇಶನ ಆರಂಭಗೊಂಡಿದ್ದು, ರಾಷ್ಟ್ರಪತಿ ದ್ರೌಪದಿ
ವಿಶ್ವವೇ ಇಂದು ಭಾರತದತ್ತ ತಿರುಗಿ ನೋಡುತ್ತಿದೆ


ನವದೆಹಲಿ, 31 ಜನವರಿ(ಹಿ.ಸ):

ಆ್ಯಂಕರ್ :

ಇಂದು ಸಂಸತ್ನಲ್ಲಿ ಬಜೆಟ್ ಅಧಿವೇಶನ ಆರಂಭಗೊಂಡಿದ್ದು, ರಾಷ್ಟ್ರಪತಿ ದ್ರೌಪದಿ ಮುರ್ಮು ಜಂಟಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಇಡೀ ವಿಶ್ವವೇ ಇಂದು ಭಾರತದತ್ತ ತಿರುಗಿ ನೋಡುತ್ತಿದೆ. ವಿಶ್ವ ದೇಶಗಳು ಭಾರತದಿಂದ ನೆರವು ನಿರೀಕ್ಷಿಸುವ ಹಂತಕ್ಕೆ ಪರಿವರ್ತನೆ ಆಗಿದೆ ಎಂದು ರಾಷ್ಟ್ರಪತಿಗಳು ತಿಳಿಸಿದರು.

ತಮ್ಮ ಭಾಷಣದಲ್ಲಿ ದ್ರೌಪದಿ ಮುರ್ಮು ತಮ್ಮ ಸರ್ಕಾರದ ಕಾರ್ಯನಿರ್ವಹಣೆಯ ರೀತಿಯನ್ನು ಬಣ್ಣಿಸಲು ಬಸವಣ್ಣ ವಿರಚಿತ ಕಾಯಕವೇ ಕೈಲಾಸ ವಚನವನ್ನು ಉಲ್ಲೇಖಿಸಿದರು. ಬಸವೇಶ್ವರರ ಕಾಯಕವೇ ಕೈಲಾಸ ಮಾತಿನಂತೆ ನನ್ನ ಸರ್ಕಾರ ಕೆಲಸ ಮಾಡುತ್ತಿದೆ. ಭಾರತದಲ್ಲಿ ಬಡವರ ಅಭಿವೃದ್ಧಿಗೆ ಕೆಲಸಗಳು ನಡೆಯುತ್ತಿವೆ. ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಚಿಂತನೆಯಲ್ಲಿ ಸರ್ಕಾರ ಕೆಲಸ ಮಾಡುತ್ತಿದೆ ಎಂದು ರಾಷ್ಟ್ರಪತಿಗಳು ತಮ್ಮ ಭಾಷಣದಲ್ಲಿ ಹೇಳಿದರು. ದ್ರೌಪದಿ ಮುರ್ಮು ಅವರು ಸಂಸತ್ನ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾಡಿರುವ ಮೊದಲ ಭಾಷಣ ಇದಾಗಿರುವುದು ವಿಶೇಷ.

ಇದೇ ವೇಳೆ, ಕೆಸಿಆರ್ ನೇತೃತ್ವದ ಬಿಆರ್ಎಸ್ ಮತ್ತು ಆಮ್ ಆದ್ಮಿ ಪಕ್ಷಗಳು ರಾಷ್ಟ್ರಪತಿ ಭಾಷಣವನ್ನು ಬಹಿಷ್ಕರಿಸಿವೆ. ಪ್ರಮುಖ ವಿಪಕ್ಷ ಕಾಂಗ್ರೆಸ್ ಕೂಡ ರಾಷ್ಟ್ರಪತಿ ಭಾಷಣದಲ್ಲಿ ಪಾಲ್ಗೊಳ್ಳದಿರಲು ನಿರ್ಧರಿಸಿತು. ಹಲವು ಕಾಂಗ್ರೆಸ್ ಸಂಸದರು ರಾಷ್ಟ್ರಪತಿ ಭಾಷಣದ ವೇಳೆ ಸಭೆಯಲ್ಲಿ ಗೈರಾಗಿದ್ದರು. ಇವರ ಪೈಕಿ ಮಲ್ಲಿಕಾರ್ಜುನ ಖರ್ಗೆ ಜಮ್ಮು ಕಾಶ್ಮೀರದಲ್ಲಿ ಪ್ರತಿಕೂಲ ಹವಾಮಾನದಿಂದಾಗಿ ವಿಮಾನದಲ್ಲಿ ದೆಹಲಿಗೆ ಬರುವುದು ತಡವಾಗಿದೆ ಎನ್ನಲಾಗಿದೆ. ಆದರೆ, ಬೇರೆ ಹಲವು ಕಾಂಗ್ರೆಸ್ ಸಂಸದರು ಬರದೇ ಹೋಗಿದ್ದು, ಆಡಳಿತ ಪಕ್ಷವನ್ನು ಕೆರಳಿಸಿದೆ. ವಿಪಕ್ಷಗಳ ಈ ವರ್ತನೆಯನ್ನು ಬಿಜೆಪಿ ವಕ್ತಾರರು ಬಲವಾಗಿ ಖಂಡಿಸಿದ್ದಾರೆ.

ಇನ್ನು ರಾಷ್ಟ್ರಪತಿ ಭಾಷಣಕ್ಕೆ ಮುನ್ನ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಭಾರತದಲ್ಲಿ ನಾರಿಶಕ್ತಿಯ ಅನಾವರಣ ಆಗುತ್ತಿದೆ ಎಂದರು. ರಾಷ್ಟ್ರಪತಿಗಳು ಮಹಿಳೆಯಾಗಿದ್ದಾರೆ. ನಾಳೆ ಬಜೆಟ್ ಮಂಡಿಸುವ ಹಣಕಾಸು ಸಚಿವರೂ ಮಹಿಳೆಯೇ. ಇದರ ಜೊತೆಗೆ ಭಾರತದ ಬಜೆಟ್ ಮೇಲೆ ಜಗತ್ತಿನ ಚಿತ್ತ ನೆಟ್ಟಿದೆ. ಭಾರತದ ಬಗ್ಗೆ ಜಾಗತಿಕವಾಗಿ ಬಹಳ ನಿರೀಕ್ಷೆಗಳಿವೆ. ನಿರ್ಮಲ್ಜಿ ಅವರು ಈ ನಿರೀಕ್ಷೆಗಳನ್ನು ಈಡೇರಿಸಲು ಯತ್ನಿಸಲಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.ಹಿಂದೂಸ್ತಾನ್ ಸಮಾಚಾರ್


 rajesh pande