ವಿಶಾಖಪಟ್ಟಣಂ ಆಂಧ್ರ ರಾಜಧಾನಿ
ಹೈದರಾಬಾದ್, 31 ಜನವರಿ(ಹಿ.ಸ): ಆ್ಯಂಕರ್ : ವಿಶಾಖಪಟ್ಟಣಂ ನಗರವು ಆಂಧ್ರಪ್ರದೇಶದ ರಾಜಧಾನಿಯಾಗಲಿದೆ ಎಂದು ಮುಖ್ಯಮಂತ್ರ
ವಿಶಾಖಪಟ್ಟಣಂ ಆಂಧ್ರ ರಾಜಧಾನಿ


ಹೈದರಾಬಾದ್, 31 ಜನವರಿ(ಹಿ.ಸ):

ಆ್ಯಂಕರ್ :

ವಿಶಾಖಪಟ್ಟಣಂ ನಗರವು ಆಂಧ್ರಪ್ರದೇಶದ ರಾಜಧಾನಿಯಾಗಲಿದೆ ಎಂದು ಮುಖ್ಯಮಂತ್ರಿ ವೈ ಎಸ್ ಜಗನ್ಮೋಹನ್ ರೆಡ್ಡಿ ಮಂಗಳವಾರ ತಿಳಿಸಿದ್ದಾರೆ.

“ಮುಂದಿನ ದಿನಗಳಲ್ಲಿ ನಮ್ಮ ರಾಜಧಾನಿಯಾಗಲಿರುವ ವಿಶಾಖಪಟ್ಟಣಂ ನಗರಕ್ಕೆ ನಿಮಗೆಲ್ಲರಿಗೂ ಆಹ್ವಾನ ಕೊಡಲು ಇಲ್ಲಿಗೆ ಬಂದಿದ್ದೇನೆ. ಕೆಲ ತಿಂಗಳುಗಳ ಬಳಿಕ ನಾನೂ ಕೂಡ ವಿಶಾಖಪಟ್ಟಣಂಗೆ ವರ್ಗಾವಣೆ ಆಗುತ್ತೇನೆ. ಮಾರ್ಚ್ 3 ಮತ್ತು 4ರಂದು ವಿಶಾಖಪಟ್ಟಣಂನಲ್ಲಿ ಜಾಗತಿಕ ಹೂಡಿಕೆದಾರರ ಶೃಂಗವನ್ನು ಆಯೋಜಿಸುತ್ತಿದ್ದೇವೆ” ಎಂದು ಹೈದರಾಬಾದ್ನಲ್ಲಿ ಸುದ್ದಿಗಾರರಿಗೆ ಜಗನ್ ಮೋಹನ್ ರೆಡ್ಡಿ ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್


 rajesh pande