ಐದನೇ ಖೇಲೋ ಇಂಡಿಯಾ ಯೂತ್ ಗೇಮ್ಸ್ 2022
ಭೋಪಾಲ್, 30 ಜನವರಿ(ಹಿ.ಸ): ಆ್ಯಂಕರ್ : ಖೇಲೋ ಇಂಡಿಯಾ ಯೂತ್ ಗೇಮ್ಸ್ 2022 ರ ಐದನೇ ಆವೃತ್ತಿ ಇಂದು ಮಧ್ಯಪ್ರದೇಶದಲ್ಲಿ
ೀೀ


ಭೋಪಾಲ್, 30 ಜನವರಿ(ಹಿ.ಸ):

ಆ್ಯಂಕರ್ :

ಖೇಲೋ ಇಂಡಿಯಾ ಯೂತ್ ಗೇಮ್ಸ್ 2022 ರ ಐದನೇ ಆವೃತ್ತಿ ಇಂದು ಮಧ್ಯಪ್ರದೇಶದಲ್ಲಿ ಪ್ರಾರಂಭವಾಗುತ್ತಿದೆ.

ಭೋಪಾಲ್ ನ ಟಿಟಿ ನಗರ ಕ್ರೀಡಾಂಗಣದಲ್ಲಿ ಇಂದು ಸಂಜೆ 7 ಗಂಟೆಗೆ ಕೇಂದ್ರ ಮಾಹಿತಿ ಮತ್ತು ಪ್ರಸಾರ, ಕ್ರೀಡೆ ಮತ್ತು ಯುವ ವ್ಯವಹಾರಗಳ ಸಚಿವ ಅನುರಾಗ್ ಸಿಂಗ್ ಠಾಕೂರ್ ಮತ್ತು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಈ ಕ್ರೀಡಾಕೂಟವನ್ನು ಉದ್ಘಾಟಿಸಲಿದ್ದಾರೆ. ಕೇಂದ್ರ ಕ್ರೀಡಾ ಖಾತೆ ರಾಜ್ಯ ಸಚಿವ ನಿಶಿತ್ ಪ್ರಮಾಣಿಕ್ ಮತ್ತು ಇತರ ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿರಲಿದ್ದಾರೆ.

ಕ್ರೀಡಾಕೂಟದ ಈ ಥೀಮ್ ಸಾಂಗ್ ನಲ್ಲಿ ಇಂದಿನಿಂದ ದೇಶಾದ್ಯಂತದ ಸುಮಾರು ಆರು ಸಾವಿರ ಆಟಗಾರರ ಹೃದಯ ಮಿಡಿಯಲಿದೆ. ಈ ಕ್ರೀಡಾಕೂಟದಲ್ಲಿ, ಆಟಗಾರರು 27 ಕ್ರೀಡಾಕೂಟಗಳಲ್ಲಿ 250 ಕ್ಕೂ ಹೆಚ್ಚು ಚಿನ್ನದ ಪದಕಗಳಿಗೆ ತಮ್ಮ ಸಂಪೂರ್ಣ ಕೌಶಲ್ಯವನ್ನು ಸಮರ್ಪಿಸಲಿದ್ದಾರೆ.

ಮಧ್ಯಪ್ರದೇಶ, ಭೋಪಾಲ್, ಇಂದೋರ್, ಉಜ್ಜಯಿನಿ, ಜಬಲ್ಪುರ್, ಗ್ವಾಲಿಯರ್, ಮಾಂಡ್ಲಾ, ಬಾಲಾಘಾಟ್ ಮತ್ತು ಮಹೇಶ್ವರದ ಎಂಟು ನಗರಗಳಲ್ಲಿ ಫೆಬ್ರವರಿ 11 ರವರೆಗೆ ಈ ಹದಿಮೂರು ದಿನಗಳ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಸುಮಾರು 13,000 ಅಧಿಕಾರಿಗಳು ಮತ್ತು 2,000 ಸ್ವಯಂಸೇವಕರನ್ನು ನಿಯೋಜಿಸಲಾಗಿದೆ.

ಹಿಂದೂಸ್ತಾನ್ ಸಮಾಚಾರ್


 rajesh pande