ಸಾಕ್ಷಾತ್ಕಾರ ಸಿನಿಮಾ ಖ್ಯಾತಿಯ ನಟಿ ಜಮುನಾ ಇನ್ನಿಲ್ಲ.
ಹೈದರಾಬಾದ್, 27 ಜನವರಿ(ಹಿ.ಸ): ಆ್ಯಂಕರ್ : ‘ಸಾಕ್ಷಾತ್ಕಾರ’ ಸಿನಿಮಾ ಖ್ಯಾತಿಯ ನಟಿ ಜಮುನಾ ಇನ್ನಿಲ್ಲ. ಜಮುನಾ ಅವರಿಗೆ 8
ಪಪಪ


ಹೈದರಾಬಾದ್, 27 ಜನವರಿ(ಹಿ.ಸ):

ಆ್ಯಂಕರ್ : ‘ಸಾಕ್ಷಾತ್ಕಾರ’ ಸಿನಿಮಾ ಖ್ಯಾತಿಯ ನಟಿ ಜಮುನಾ ಇನ್ನಿಲ್ಲ. ಜಮುನಾ ಅವರಿಗೆ 84 ವರ್ಷ ವಯಸ್ಸಾಗಿತ್ತು.

ನಟಿ ಜಮುನಾ ವಯೋಸಹಜ ಕಾಯಿಲೆಯಿಂದ ಹೈದರಾಬಾದ್ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. ತೆಲುಗು, ಕನ್ನಡ, ತಮಿಳು, ಹಿಂದಿ ಸೇರಿ 180 ಕ್ಕೂ ಸಿನಿಮಾಗಳಲ್ಲಿ ನಟಿಸಿದ್ದರು. ಕನ್ನಡದಲ್ಲಿ ಸಾಕ್ಷಾತ್ಕಾರ, ರತ್ನಗಿರಿ ರಹಸ್ಯ, ಭೂ ಕೈಲಾಸ, ಪೋಲಿಸ್ ಮತ್ತು ದಾದಾ ಸೇರಿ ಒಂದಷ್ಟು ಸಿನಿಮಾಗಳಲ್ಲಿ ನಟನೆ ಮಾಡಿದ್ದರು. ಎನ್ ಟಿ ಆರ್, ಎ ಎನ್ ಆರ್, ಡಾ.ರಾಜ್ ಕುಮಾರ್ ಜೊತೆಗೆ ನಟಿಸಿ ಗೆದ್ದಿದ್ದರು. ನಟಿ ಜಮುನಾ ಅವರಿಗೆ ‘ಶ್ರೀಕೃಷ್ಣ ತುಲಾಭಾರಂ’ ಚಿತ್ರದ ಸತ್ಯಭಾಮೆ ಪಾತ್ರ ಅಪಾರ ಜನಪ್ರಿಯತೆ ತಂದು ಕೊಟ್ಟಿತ್ತು. ‘ಪುಟ್ಟಿಲ್ಲು’ ನಟಿ ಜಮುನಾ ನಟಿಸಿದ ಚೊಚ್ಚಲ ಸಿನಿಮಾವಾಗಿದೆ.

ಹಿಂದೂಸ್ತಾನ್ ಸಮಾಚಾರ್


 rajesh pande