ಭಾರತದ ಉಮೇದುವಾರಿಕೆ ಬೆಂಬಲಿಸಲು ಮಾಲ್ಡೀವ್ಸ್ ನಿರ್ದಾರ
ಮಾಲೆ, 23 ಜನವರಿ(ಹಿ.ಸ): ಆ್ಯಂಕರ್ : ವಿಶ್ವಸಂಸ್ಥೆಯ 2028-2029 ರ ಅವಧಿಗೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಶಾಶ್ವತವಲ
ಭಾರತದ ಉಮೇದುವಾರಿಕೆ ಬೆಂಬಲಿಸಲು ಮಾಲ್ಡೀವ್ಸ್ ನಿರ್ದಾರ


ಮಾಲೆ, 23 ಜನವರಿ(ಹಿ.ಸ):

ಆ್ಯಂಕರ್ : ವಿಶ್ವಸಂಸ್ಥೆಯ 2028-2029 ರ ಅವಧಿಗೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಶಾಶ್ವತವಲ್ಲದ ಸ್ಥಾನಕ್ಕೆ ಭಾರತದ ಉಮೇದುವಾರಿಕೆ ಬೆಂಬಲಿಸಲು ಮಾಲ್ಡೀವ್ಸ್ ನಿರ್ಧರಿಸಿದೆ,

2027 ರಲ್ಲಿ ನಡೆಯಲಿರುವ ವಿಶ್ವಸಂಸ್ಥೆಯ 81 ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಮೊದಲ ಅಧಿವೇಶನದಲ್ಲಿ ಭಾರತ ಬೆಂಬಲಿಸಲು ನಾಲ್ಡೀವ್ಸ್ ನಿರ್ಧರಿಸಿದೆ

ಜನವರಿ 18 ಮತ್ತು 19 ರಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ ಮಾಲ್ಡೀವ್ಸ್ಗೆ ಭೇಟಿ ನೀಡಿದ ನಂತರ ಭಾರತವ ಬೆಂಬಲಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಮಾಲ್ಡೀವ್ಸ್ನ ವಿದೇಶಾಂಗ ಸಚಿವಾಲಯ ಈ ಸಂಬಂಧ ಹೇಳಿಕೆ ನೀಡಿದ್ದು ಭಾರತಕ್ಕೆ ದೇಶದ ಬಲವಾದ ಬೆಂಬಲ ಉಭಯ ದೇಶಗಳ ನಡುವೆ ಅಸ್ತಿತ್ವದಲ್ಲಿರುವ ಬಲವಾದ ಪಾಲುದಾರಿಕೆ ಮತ್ತು ಸ್ನೇಹದ ನಿಕಟ ಬಂಧಗಳಲ್ಲಿ ಬೇರೂರಿದೆ ಎಂದು ಹೇಳಿದೆ.

ಅಂತರರಾಷ್ಟ್ರೀಯ ಶಾಂತಿ ಮತ್ತು ಭದ್ರತೆ ಕಾಪಾಡುವಲ್ಲಿ ಭಾರತ ನಿರಂತರವಾಗಿ ಬಲವಾದ ಮತ್ತು ಪರಿಣಾಮಕಾರಿ ನಾಯಕತ್ವವನ್ನು ಪ್ರದರ್ಶಿಸಿದೆ ಎಂದು ಹೇಳಿದೆ.

ಅಂತರರಾಷ್ಟ್ರೀಯ ಶಾಂತಿ ಮತ್ತು ಭದ್ರತೆ ಕಾಪಾಡುವಲ್ಲಿ ಭಾರತ ನಿರಂತರವಾಗಿ ಮತ್ತು ಪರಿಣಾಮಕಾರಿ ನಾಯಕತ್ವ ಪ್ರದರ್ಶಿಸಿದೆ. ಭಾರತ ವಿಶ್ವಸಂಸ್ಥೆಯ ಸಭಯಲ್ಲಿ ಪ್ರತಿಪಾದಿಸಲಾದ ಮೌಲ್ಯಗಳು ಮತ್ತು ತತ್ವಗಳ ಪ್ರಬಲ ಪ್ರತಿಪಾದಕವಾಗಿದೆ ಎಂದು ಹೇಳಿಕೆ ತಿಳಿಸಿದೆ.

ಭಾರತ ಭದ್ರತಾ ಮಂಡಳಿಯಲ್ಲಿ ಎಲ್ಲಾ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಧ್ವನಿಯಾಗಲಿದೆ ಮತ್ತು ಮುಂಬರುವ ವರ್ಷಗಳಲ್ಲಿ ಶಾಂತಿ ಮತ್ತು ಭದ್ರತೆಯ ಕುರಿತು ಜಾಗತಿಕ ಪ್ರವಚನಕ್ಕೆ ಅರ್ಥಪೂರ್ಣ ಕೊಡುಗೆಗಳನ್ನು ನೀಡುವುದನ್ನು ಮುಂದುವರಿಸುತ್ತದೆ ಎಂದು ಮಾಲ್ಡೀವ್ಸ್ ಸರ್ಕಾರವು ವಿಶ್ವಾಸ ಹೊಂದಿದೆ ಎಂದು ಅದು ಸೇರಿಸಿದೆ.

ಹಿಂದೂಸ್ತಾನ್ ಸಮಾಚಾರ್


 rajesh pande